ಶಾರುಖ್ ಖಾನ್ ಅವರ ಮನೆಯ ಮುಂದೆ ಬೋರ್ಡ್ ಹಿಡಿದುಕೊಂಡು ನಿಂತ ಕನ್ನಡದ ನಿರ್ದೇಶಕ

ಕನ್ನಡದ ನಿರ್ದೇಶಕನಿಗೆ ಕ್ಯಾರೆ ಎನ್ನದ ಬಾಲಿವುಡ್ ಬಾದ್ಶಾ! ಕಿಂಗ್ ಖಾನ್ ಮನೆ ಮುಂದೆ ಕಾಲ್ ಶೀಟ್ ಗಾಗಿ ಬರೋಬ್ಬರಿ ನಾಲ್ಕುದಿನಗಳ ಕಾಲ ಕನ್ನಡದ ನಿರ್ದೇಶಕ ಕಾಯ್ದಿದ್ದಾರೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಾಲಿವುಡ್ ಚಿತ್ರರಂಗದ ಖ್ಯಾತ ನಟರಾದ ಶಾರುಖ್ ಖಾನ್ ಅವರಿಗೆ ಕತೆ ರೆಡಿ ಮಾಡಿಕೊಂಡು, ಅವರಿಗೆ ತನ್ನ ಕಥೆ ಹೇಳಿ ಶಾರುಖ್ ಖಾನ್ ಅವರನ್ನು ತನ್ನ ಚಿತ್ರದ ನಾಯಕನಾಗಿ ಮಾಡಿಕೊಳ್ಬೇಕು ಎಂಬ ಅಭಿಲಾಷೆ ಹೊತ್ತು ಮುಂಬೈ ಯಲ್ಲಿರುವ ಶಾರುಖ್ ಖಾನ್ ಅವರ ಮನೆಯ ಮುಂಭಾಗ ಬೈಕ್ ಮೇಲೆ ಶಾರುಖ್ ಖಾನ್ ಕೂತಿರುವ ಪೋಸ್ಟರ್ ತಯಾರಿಸಿಕೊಂಡು ಶಾರುಖ್ ಖಾನ್ ಅವರ ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದಾರೆ. ಹಾಗಾದರೆ ಕನ್ನಡದ ಯಾವ ನಿರ್ದೇಶಕನಿಗೆ ಶಾರುಕ್ ಖಾನ್ ಭೇಟಿ ಮಾಡಲು ಅವಕಾಶ ಕೊಟ್ಟಿಲ್ಲ ಅಂತೀರಾ, ಹೌದು ರಿಷಭ್ ಶೆಟ್ಟಿ ಅಭಿನಯದ ಕಥಾಸಂಗಮ ಚಿತ್ರದಲ್ಲಿ ಬರುವ “ಗಿರಗಿಟ್ಲೇ” ಕಥೆಯನ್ನು ಬರೆದಿರುವ ನಿರ್ದೇಶಕ ಜಯಂತ್ ಸೀಗೆ ಅವರು ಒಂದಷ್ಟು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಜೊತೆಗೆ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಇದೀಗ ಅವರು ಶಾರುಖ್ ಖಾನ್ ಗಾಗಿ ಪ್ರಾಜೆಕ್ಟ್ X ಎಂಬ ಟೈಟಲ್ ನೊಂದಿಗೆ ವಿಭಿನ್ನ ಕಥೆ ಮಾಡಿಕೊಂಡು ಅವರ ಕಾಲ್ ಶೀಟ್ ಗಾಗಿ ಮುಂಬೈನಲ್ಲಿರುವ ಶಾರುಖ್ ಖಾನ್ ರವರ ಮನ್ನಾತ್ ಮನೆಯ ಮುಂಭಾಗ ತೆರಳಿ ಅವರನ್ನು ತನ್ನತ್ತ ಗಮನ ಸೆಳೆಯುವುದಕ್ಕೆ ಮೂರ್ನಾಲ್ಕು ದಿನಗಳ ಕಾಲ ಬೀಡು ಬಿಟ್ಟಿದ್ದರು, ಡಿಸೆಂಬರ್ 31ರಿಂದ ಒಂದು ವಾರಗಳ ಕಾಲ ಶಾರುಖ್ ಖಾನ್ ಅವರು ಮುಂಬೈ ಮನೆಯಲ್ಲಿ ಇರುತ್ತಾರೆ ಎಂದು ತಿಳಿದ ಜಯಂತ್ ಸೀಗೆ ಅವರು ಸೀದಾ ಅವರ ಮನೆಗೆ ತೆರಳಿದ್ದಾರೆ. ಆದರೆ ಜಯಂತ್ ಸೀಗೆ ಅವರ ಈ ಪ್ರಯತ್ನಕ್ಕೆ ಕ್ಯಾರೆ ಎನ್ನದ ಶಾರುಖ್ ಖಾನ್ ಜಯಂತ್ ಭೇಟಿಗೆ ಅವಕಾಶ ನೀಡಲಿಲ್ಲ. ಆದ್ದರಿಂದ ಜಯಂತ್ ಸೀಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೆಂಗಳೂರಿಗೆ ವಾಪಸ್ ಅಗಿದ್ದಾರೆ.

%d bloggers like this: