ನಿಮಗೆಲ್ಲರಿಗೂ ಗೊತ್ತಿರುವಂತೆ ಐಪಿಎಲ್ ಕ್ರಿಕೆಟ್ ತಂಡಗಳನ್ನು ದೊಡ್ಡ ದೊಡ್ಡ ಉದ್ಯಮಿಗಳು ಖರೀದಿಸಿರುತ್ತಾರೆ, ನಮ್ಮ ಆರ್ಸಿಬಿ ತಂಡವನ್ನು ವಿಜಯ್ ಮಲ್ಯ ಅವರ ಹನ್ನೆರಡು ವರ್ಷಗಳ ಹಿಂದೆ ಕೊಂಡುಕೊಂಡಿದ್ದರು. ಹಾಗೆಯೇ ಮುಂಬೈ ಇಂಡಿಯನ್ಸ್ ತಂಡವನ್ನು ಭಾರತದ ಪ್ರಸಿದ್ಧ ಉದ್ಯಮಿ ಮುಕೇಶ್ ಅಂಬಾನಿ ಅವರು ಕೊಂಡುಕೊಂಡಿದ್ದಾರೆ. ಕೋಲ್ಕತ್ತಾ ತಂಡದ ಮಾಲೀಕ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಎಂಬುದು ಹಳೆಯ ವಿಷಯ, ಆದರೆ ಶಾರುಖಾನ್ ಅವರು ಇನ್ನೊಂದು ಪ್ರಮುಖ ಕ್ರಿಕೆಟ್ ತಂಡದ ಮಾಲೀಕರು ಕೂಡಾ. ಕಳೆದ ತಿಂಗಳಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಮುಗೀತು, ಈಸಲವೂ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಸಲದ ಐಪಿಎಲ್ ಟೂರ್ನಮೆಂಟ್ ಅಲ್ಲಿ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಆದರೆ ಈ ಕ್ರಿಕೆಟ್ ತಂಡ ಐಪಿಎಲ್ ತಂಡವಲ್ಲ ಬದಲಾಗಿ ಬೇರೆ ಒಂದು ಕ್ರಿಕೆಟ್ ತಂಡ. ಬೇರೆ ಅಂದರೂ ಇದು ಐಪಿಎಲ್ ತರಹದ್ದೇ ಒಂದು ದೊಡ್ಡ ತಂಡ. ಐಪಿಎಲ್ ತರಹವೇ ವೆಸ್ಟ್ ಇಂಡೀಸ್ ಅಲ್ಲಿ ಸಿಪಿಎಲ್ ಎಂದು ಪ್ರತಿವರ್ಷ ದೊಡ್ಡ ಟೂರ್ನಮೆಂಟ್ ನಡೆಯುತ್ತದೆ. ಸಿಪಿಎಲ್ ಅಂದರೆ ಕೆರೀಬಿಯನ್ ಪ್ರೀಮಿಯರ್ ಲೀಗ್ ಎಂದು ಅರ್ಥ, ಇದರಲ್ಲಿ ವೆಸ್ಟ್ ಇಂಡೀಸ್ ದೈತ್ಯರಾದ ಪೊಲ್ಲಾರ್ಡ್ ಹಾಗು ಗೇಲ್ ಅವರು ಕೂಡಾ ತಂಡದಲ್ಲಿ ಆಡುತ್ತಾರೆ. ಇದರಲ್ಲಿ ಟ್ರಿನ್ ಬಾಗೋ ನೈಟ್ ರೈಡರ್ಸ್ ಎಂಬ ತಂಡದ ಮಾಲೀಕರಾಗಿದ್ದಾರೆ ಹಾಗು ಈ ತಂಡವನ್ನು ಮುಂಬೈ ಇಂಡಿಯನ್ಸ್ ಆಟಗಾರ ಪೊಲ್ಲಾರ್ಡ್ ಅವರು ನಾಯಕನಾಗಿ ನಡೆಸುತ್ತಿದ್ದಾರೆ.



ಎರಡು ತಂಡವಷ್ಟೇ ಅಲ್ಲದೇ ಶಾರುಖ್ ಖಾನ್ ಅವರು ಮತ್ತೊಂದು ತಂಡದ ಮಾಲೀಕರಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ, ಅದುವೇ ಲಾಸ್ ಏಂಜೆಲಿಸ್ ಕ್ರಿಕೆಟ್ ತಂಡ, ಐಪಿಎಲ್ ಟೂರ್ನಮೆಂಟಿನಂತೆ ಅಮೆರಿಕದಲ್ಲೂ ಕ್ರಿಕೆಟ್ ಟೂರ್ನಮೆಂಟ್ ಸಜ್ಜಾಗುತ್ತಿದ್ದು ಅದರಲ್ಲೂ ಐಪಿಎಲ್ ತರಹ ಸುಮಾರು ತಂಡಗಳು ಇರಲಿವೆ. ಈ ಟೂರ್ನಮೆಂಟ್ ಅಲ್ಲೂ ಸಹ ಶಾರುಖ್ ಅವರು ಲಾಸ್ ಏಂಜೆಲಿಸ್ ನಗರದ ಕ್ರಿಕೆಟ್ ತಂಡವನ್ನು ಖರೀದಿ ಮಾಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಶಾರುಖ್ ಖಾನ್ ಅವರ ಒಡೆತನದ ಕೋಲ್ಕತ್ತಾ ತಂಡ ಐಪಿಎಲ್ ಅಲ್ಲಿ ಎರಡು ಬಾರಿ ಟ್ರೋಫಿ ವಿಜಯಿಸಿದೆ.