ಶಾಕುಂತಲೆ ಆದ ದಕ್ಷಿಣ ಭಾರತದ ಸ್ಟಾರ್ ನಟಿ, ಮೊದಲ ಬಾರಿಗೆ ವಿಶೇಷ ಪಾತ್ರದಲ್ಲಿ

ಇತ್ತೀಚಿಗೆ ರಿಲೀಸ್ ಆಗಿ ಭರ್ಜರಿ ಹಿಟ್ ನೀಡುತ್ತಿರುವ ಪುಷ್ಪ ಚಿತ್ರದ ಐಟಂ ಸಾಂಗ್, ಹು ಅಂತೀಯಾ ಮಾವ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಸಕತ್ ಬೋಲ್ಡ್ ಅಂಡ್ ಹಾಟ್ ಆಗಿ ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ಸಮಂತಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವುದಂತೂ ಗ್ಯಾರಂಟಿ. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸಮಂತ ಅವರು ಮದುವೆಯಾದ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಇತ್ತೀಚೆಗೆ ತಮ್ಮ ಪತಿ ಚಯ್ ಅಕ್ಕಿನೀನಿ ಅವರ ಜೊತೆ ವಿಚ್ಛೇದನವನ್ನು ಪಡೆದ ನಂತರ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ ಸಮಂತ. ಇದೀಗ ಸಮಂತ ಅವರ ಮತ್ತೊಂದು ಹೊಸ ಪ್ರಾಜೆಕ್ಟ್ ಆರಂಭವಾಗಲಿದೆ. ಈ ಬಗ್ಗೆ ನಟಿ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಈ ಫೋಟೋ ಸಕ್ಕತ್ತ್ ವೈರಲ್ ಆಗುತ್ತಿದೆ. ಏಕೆಂದರೆ ಈ ಪೋಸ್ಟರ್ ನಲ್ಲಿ ನಟಿ ಸಮಂತಾ ಅವರು ವಿಭಿನ್ನ ಶೈಲಿಯಲ್ಲಿ ಮಿಂಚುತ್ತಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಶ್ವೇತ ವರ್ಣದ ಬಟ್ಟೆಯನ್ನು ಧರಿಸಿ, ಹೂವಿನ ಮಾಲೆಯನ್ನು ಆಭರಣ ವನ್ನಾಗಿ ಮಾಡಿಕೊಂಡು ಬಿರು ನೋಟದಲ್ಲಿ ಕಲ್ಲಿನ ಮೇಲೆ ಶಾಕುಂತಲೆಯಂತೆ ಕುಳಿತು ಪೋಸ್ ನೀಡಿದ್ದಾರೆ. ಆಕೆಯ ಸುತ್ತಲೂ ಮೊಲ, ಜಿಂಕೆ, ಅಳಿಲು, ಬಾತುಕೋಳಿ, ನವಿಲು ಸೇರಿದಂತೆ ಅನೇಕ ವನ್ಯಜೀವಿಗಳು ಆಕೆಯನ್ನು ನೋಡುವಂತೆ ಭಾಸವಾಗುತ್ತದೆ. ಹೌದು ಸಮಂತ ಅವರು ಶಾಕುಂತಲೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಗುಣಶೇಖರ್ ನಿರ್ದೇಶನದ ಶಾಕುಂತಲಮ್ ಚಿತ್ರದಲ್ಲಿ ಸಮಂತಾ ಅವರು ಶಾಕುಂತಲೆಯಾಗಿ ಬಣ್ಣಹಚ್ಚುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದರ ಪೋಸ್ಟರ್ ಅನ್ನು ಸಮಂತಾ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಫಸ್ಟ್ ಲುಕ್ ಶೇರ್ ಮಾಡಿರುವ ಸಮಂತ ಅವರು ಪ್ರಕೃತಿಪ್ರಿಯ, ಸುಂದರ, ಸೂಕ್ಷ್ಮ ಮತ್ತು ಸರಳತೆಯ ಶಾಕುಂತಲೆ ಎಂದು ಬರೆದುಕೊಂಡಿದ್ದಾರೆ. ಶಾಕುಂತಲ ಎಂಬುವುದು ಮಹಾಕವಿ ಕಾಳಿದಾಸನ ಸೃಷ್ಟಿಯಾದ ಅಭಿಜ್ಞಾನ ಶಾಕುಂತಲಂ ಎಂಬ ನಾಟಕದ ಒಂದು ಪಾತ್ರ. ಋಷಿ ವಿಶ್ವಾಮಿತ್ರ ಮತ್ತು ಮೇನಕೆಯ ಮಗಳೇ ಶಾಕುಂತಲ. ಮೇನಕೆಯು ವಿಶ್ವಾಮಿತ್ರ ಹಾಗೂ ಶಾಕುಂತಲಳನ್ನು ಇಂದ್ರದೇವನ ಆಜ್ಞೆಯಂತೆ ಬಿಟ್ಟು ಹೋದಮೇಲೆ, ಶಾಕುಂತಲೆ ಆಶ್ರಮದಲ್ಲಿ ಬೆಳೆಯುತ್ತಿರುತ್ತಾಳೆ. ತುಂಬಾ ಮುಗ್ಧ ಮನಸ್ಸಿನ ಹುಡುಗಿಯ ಆಗಿರುವ ಶಾಕುಂತಲೆ ಒಂದು ದಿನ ಹಸ್ತಿನಾಪುರದ ರಾಜ ದುಶ್ಯಂತನ ಕಣ್ಣಿಗೆ ಬೀಳುತ್ತಾಳೆ. ಇವರಿಬ್ಬರು ಪ್ರೇಮ ಪ್ರವಾಹಕ್ಕೆ ಸಿಲುಕಿ ಗಾಂಧರ್ವ ವಿವಾಹವಾಗುತ್ತಾರೆ. ನಂತರ ಗರ್ಭಿಣಿಯಾದ ಶಾಕುಂತಲಳನ್ನು ಆಶ್ರಮದಲ್ಲಿ ದುಷ್ಯಂತ ಮಹಾರಾಜ ಬಿಟ್ಟು ಹೋಗುತ್ತಾನೆ.

ಹೊರಡುವಾಗ ಆಕೆಗೆ ನೆನಪಿಗಾಗಿ ಉಂಗುರವನ್ನು ನೀಡಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ತನ್ನ ಪ್ರಿಯಕರನ ನೆನಪಿನಲ್ಲಿ ಮೈಮರೆತು ಕುಳಿತಿರುವಾಗ ಬಂದ ದೂರ್ವಾಸರು ಈಕೆಗೆ ಶಾಪ ನೀಡುತ್ತಾರೆ. ಯಾರ ನೆನಪಿನಲ್ಲಿ ನೀನು ಮೈಮರೆತು ಕುಳಿತಿರುವೆಯೋ ಆ ವ್ಯಕ್ತಿ ನಿನ್ನನ್ನು ಮರೆತು ಹೋಗಲಿ ಎಂದು ಕೋಪದಿಂದ ಶಾಪ ನೀಡಿ ಹೊರಡುತ್ತಾರೆ. ಇದರ ಪರಿಣಾಮ ದುಶ್ಯಂತ ಈಕೆಯನ್ನು ಮರೆತು ಬಿಡುತ್ತಾನೆ. ಹಲವು ದಿನಗಳ ನಂತರ ಶಾಕುಂತಲ ದುಷ್ಯಂತ ಮಹಾರಾಜ ನನ್ನು ಹುಡುಕಿಕೊಂಡು ಅರಮನೆಗೆ ತೆರಳುವಾಗ ನದಿಯಲ್ಲಿ ದುಶ್ಯಂತ ನೀಡಿರುವ ಗುರುತಿನ ಚಿಹ್ನೆಯಾದ ಉಂಗುರವನ್ನು ಶಾಕುಂತಲ ಕಳೆದುಕೊಳ್ಳುತ್ತಾಳೆ.

ಹೀಗಾಗಿ ದುಷ್ಯಂತ ಈಕೆಯನ್ನು ತಿರಸ್ಕರಿಸುತ್ತಾನೆ. ನಂತರ ಶಾಕುಂತಲೆಯ ಜೀವನವು ದುಃಖ ಹಾಗೂ ಹೋರಾಟದ ಮೂಲಕ ಸಾಗುತ್ತದೆ. ಇದೇ ಅಭಿಜ್ಞಾನ ಶಾಕುಂತಲದ ಕಥೆ. ಇದೇ ಕಥೆಯನ್ನು ನಿರ್ದೇಶಕ ಗುಣಶೇಖರ್ ಅವರು ತೆರೆಯ ಮೇಲೆ ತರಲು ಹೊರಟಿದ್ದಾರೆ. ಶಾಕುಂತಲೆಯ ಪಾತ್ರವನ್ನು ನಿರ್ವಹಿಸುತ್ತಿರುವ ಸಮಂತ ಆಧುನಿಕ ಯುಗದ ಶಾಕುಂತಲೆಯಂತೆ ಮಿಂಚುತ್ತಿದ್ದಾರೆ. ಶಾಕುಂತಲೆಯ ವಸ್ತ್ರಗಳು, ಆಕೆಯ ಸುತ್ತ ಮುತ್ತ ಇರುವ ಪ್ರಕೃತಿ ಹಾಗೂ ವನ್ಯಜೀವಿಗಳು ಶಾಕುಂತಲೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ತಮ್ಮ ಮೊದಲ ಲುಕ್ ನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸಮಂತ ಅವರ ಶಾಕುಂತಲಾಮ್ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

%d bloggers like this: