ಶಾಲಾ ಕಾಲೇಜುಗಳ ಶುಲ್ಕದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ ಅವರಿಂದ ಮಹತ್ವದ ಹೇಳಿಕೆ

ಕೋವಿಡ್ 19 ಲಾಕ್ಡೌನ್ ಪರಿಣಾಮ ಎಲ್ಲಾ ಕೇತ್ರಗಳಿಗೂ ಹೊಡೆತ ಕೊಟ್ಟಿದ್ದು ಅದರ ಎಫೆಕ್ಟ್ ಈಗ ನಿಧಾನವಾಗಿ ಗಂಭೀರ ಸ್ವರೂಪ ಪಡೆಯುತ್ತಿದೆ, ಇದಕ್ಕೆ ಶಿಕ್ಷಣ ಸಂಸ್ಥೆಗಳು ಕೂಡ ಹೊರತಾಗಿಲ್ಲ. ಖಾಸಗಿ ಶಾಲೆ ಮತ್ತು ಪೋಷಕರ ನಡುವೆ ಶಾಲಾ ಶುಲ್ಕದಲ್ಲಿ ವಿನಾಯಿತಿ ಕುರಿತು ಹಗ್ಗಜಗ್ಗಾಟ, ಶಾಲೆಯ ಶುಲ್ಕದ ವಿಚಾರ ಮತ್ತು ಪೋಷಕರ ಆರ್ಥಿಕ ಸಮಸ್ಯೆಯಿಂದ ಶುಲ್ಕ ಕಟ್ಟಲಾಗದ ಪರಿಸ್ಥಿತಿ ಸೃಷ್ಠಿಯಾಗಿ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರಿಗೆ ಸಂಬಳ ನೀಡಲು ಚಿಂತಿಸಿ ಆನ್ಲೈನ್ ತರಗತಿ ನಡೆಸಲು ಹಿಂದೇಟು ಹಾಕುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ಧಾರ ಕಗ್ಗಂಟಾಗಿ ಪರಿಣಮಿಸಿದೆ.

ಈ ವಿಚಾರವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅಸಮಧಾನ ಗೊಂಡಿರುವ ಖಾಸಗಿ ಶಾಲೆಗಳ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರನ್ನು ಒಳಗೊಂಡಂತೆ ಮತ್ತು ಪೋಷಕರ ಸಮಸ್ಯೆಗಳನ್ನು ಆಲಿಸುವ ಸಂಧರ್ಭ ಪರಸ್ಪರ ಎರಡೂ ಕಡೆಯಿಂದ ಶಿಕ್ಷಣ ಸಚಿವರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಪೋಷಕರಿಗೆ ಶುಲ್ಕ ಕಟ್ಟಲು ಸರ್ಕಾರ ತಾಕೀತು ಮಾಡಲು ಜನಸಾಮನ್ಯರ ಪರಿಸ್ಥಿತಿ ತುಟಿ ಇಲಾಖೆಯು ಕೂಡ ತುಟಿ ಬಿಚ್ಚುತ್ತಿಲ್ಲ. ಮತ್ತೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರಿಗೆ ನೀಡಲು ಸಂಬಳದ ಕೊರತೆ ಎಂದು ಆನ್ಲೈನ್ ಕ್ಲಾಸ್ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿವೆ.

ಪೋಷಕರು ಶುಲ್ಕ ಭರಿಸದೇ ಹೋದರೆ ಶಿಕ್ಷಣ ಸಂಸ್ಥೆಗಳು ಎಲ್ಲಿಂದ ಹಣ ತಂದು ಶಿಕ್ಷಕರಿಗೆ ಸಂಬಳ ನೀಡಬೇಕು ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸಚಿವರು ಮಾತನಾಡಿ ಕೋವಿಡ್ ಲಾಕ್ಡೌನ್ ಪರಿಣಾಮ ಎಷ್ಟೋ ಜನರು ಕೆಲಸ ಕಳೆದುಕೊಂಡು ಜೀವನ ನಡೆಸಲು ಸಹ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದವರು ಇಂದು ನಿರುದ್ಯೋಗದ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಇನ್ನು ಶಾಲಾ ಶಿಕ್ಷಕರೇ ಉದ್ಯೋಗ ಕಳೆದುಕೊಂಡು ಬದುಕಿಗಾಗಿ ಬೀದಿಯಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡಿರುವಂತಹ ಸುದ್ದಿಗಳು ವರದಿಯಾಗಿವೆ.

ಇಂತಹ ಸಂಧರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅವರ ಇಚ್ಚೆಯಂತೆ ದೊಡ್ಡ ದೊಡ್ಡ ಖಾಸಗಿ ಶಾಲೆಯಲ್ಲಿಯೇ ನನ್ನ ಮಗು ಕಲಿಯಬೇಕೆಂಬ ಮಹದಾಸೆ ಹೊಂದಿರುವ ಅವರು ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿರುವುದರಿಂದ ಖಾಸಗಿ ಶಾಲೆಗಳಲ್ಲಿ ಮುಂದಿನ ವರ್ಷದ ಶಾಲಾ ಶುಲ್ಕದಲ್ಲಿ ರಿಯಾಯಿತಿ ಕೇಳುತ್ತಿರುವುದು ತಪ್ಪು ಎಂದು ಹೇಳಲಾಗುವುದಕ್ಕೆ ಸಾಧ್ಯವಿಲ್ಲ. ಪೋಷಕರು ಮತ್ತು ಶಾಲೆಗಳು ಸಂಬಂಧ ಆರೋಗ್ಯಕರವಾಗಿರಬೇಕು. ಇವರಿಬ್ಬರು ಸಹ ಸಮಾಜದಲ್ಲಿ ಈ ಪ್ರಧಾನ ಪಾತ್ರ ವಹಿಸುತ್ತವೆ.

ಆದರೆ ಕೆಲವು ಖಾಸಗಿ ಶಾಲೆಗಳು ಪೋಷಕರಿಗೆ ಶಾಲೆಯ ಪ್ರವೇಶಕ್ಕೆ ಅವಕಾಶ ಕೊಡದೆ ಅವರನ್ನು ಗೇಟಿನ ಮುಂಭಾಗದಲ್ಲೇ ನಿಲ್ಲಿಸುವಂತಹ ವಿಚಾರ ಆಗಾಗ ಕೇಳಿ ಬರುತ್ತಲೇ ಇದೆ ಇದರ ಬಗ್ಗೆ ಕೂಡ ಕೊಂಚ ಗಮನಹರಿಸಿ ಇಂತಹ ನಿಯಮಗಳಿಗೆ ಬ್ರೇಕ್ ಹಾಕಿ ಪೋಷಕರೊಂದಿಗೆ ಸೌಹಾರ್ದತೆ, ಸೌಜನ್ಯ ಮನೋಭಾವದಿಂದ ವರ್ತಿಸಬೇಕಾಗಿದೆ. ಮಕ್ಕಳ ಭವಿಷ್ಯ ಕಾರಣದಿಂದಾಗಿ ಅವರ ವಿಧ್ಯಾಭ್ಯಾಸದ ಬದುಕಿನಲ್ಲಿ ನಾವು ಹುಡುಗಾಟಿಕೆ ಆಡುವಂತದ್ದಲ್ಲ. ಆದರೆ ಖಾಸಗಿ ಶಾಲೆಯ ಸಮರ್ಥನೆಯೇ ಬೇರೆ ಕೆಲವು ಪೋಷಕರು ತಾವು ಆರ್ಥಿಕವಾಗಿ ಸಧೃಡವಾಗಿದ್ದರೂ ಸಹ ಶಾಲೆಯ ಶುಲ್ಕವನ್ನು ಕಟ್ಟದೇ ಕೊರೋನ ವೈರಸ್ ಲಾಕ್ಡೌನ್ ಕಾರಣವನ್ನು ಹೇಳಿ ಶುಲ್ಕ ಪಾವತಿಸದೇ ಇರುವುದು ಸಮಂಜಸವಲ್ಲ.

ಇವರು ಶುಲ್ಕ ಭರಿಸದೇ ಹೋದರೆ ಶಾಲೆಯ ನಿರ್ವಹಣೆ ಖರ್ಚ, ಸಿಬ್ಬಂದಿಗಳಿಗೆ, ಶಿಕ್ಷಕರಿಗೆ ಸಂಬಳ ನೀಡುವುದಾದರೂ ಹೇಗೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಮಾಡಿವೆ. ಅಂತಿಮವಾಗಿ ಪೋಷಕರು ಹೇಳುವ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಹ ನಿಕೃಷ್ಟ ಪರಿಸ್ಥಿತಿಯಲ್ಲಿಯೂ ಶುಲ್ಕವನ್ನು ಇಳಿಸದೇ ಡೆಡ್ ಲೈನ್ ನೀಡುವುದು ಒಳ್ಳೆಯದಲ್ಲ ಸರ್ಕಾರ ಖಾಸಗಿ ಶಾಲೆಗಳಿಗೆ ಶುಲ್ಕದ ವಿಚಾರದಲ್ಲಿ ನಿಯಂತ್ರಿಸಿ ಲಗಾಮು ಹಾಕುತ್ತಿಲ್ಲ ಎಂದು ಅಸಮಾಧಾನಗೊಂಡರು. ಸಭೆಯಲ್ಲಿ ಎರಡೂ ಸಂಘಟನೆಗಳನ್ನು ಉದ್ದೇಶಿಸಿ ಸಮಸ್ಯೆ ಈ ವಿಚಾರವಾಗಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಬೇಕು ಶಾಲಾ ಆಡಳಿತ ಮಂಡಳಿಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿಕೊಂಡು ಪೋಷಕರಿಗೆ ಆಹ್ವಾನಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

%d bloggers like this: