ಕೋರೋಣ ಎಂಬ ಮಾರಣಾಂತಿಕ ಹೆಮ್ಮಾರಿಯಿಂದ ಅಕ್ಷರಶಃ ಭಾರತ ಸೇರಿದಂತೆ ಇಡೀ ವಿಶ್ವ ನಲುಗಿ ಹೋಗಿತ್ತು. ಬೃಹತ್ ಭಾರತ ದೇಶದಲ್ಲಿ ಎಂದು ಕಂಡು ಕೇಳರಿಯದ ಸಾವು ನೋವುಗಳನ್ನು ನಾವೆಲ್ಲರೂ ಕಂಡೆವು. ಅದೃಷವಶಾತ್ ಈಗ ಪರಿಸ್ಥಿತಿ ನಿಧಾನವಾಗಿ ಮರಳಿ ಮೊದಲಿನ ಸಹಜ ಸ್ಥಿತಿಗೆ ಬರುತ್ತಿದೆ. ಒಂದೊಂದಾಗಿ ನೆಲಕಚ್ಚಿದ ಉದ್ಯಮಗಳು ಇದೀಗ ತೆರೆದುಕೊಳ್ಳುತ್ತಿವೆ. ಇನ್ನು ಎಲ್ಲಕ್ಕಿಂತ ಪ್ರಮುಖವಾದ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿ ದೇಶದ ವಿದ್ಯಾರ್ಥಿ ವರ್ಗ ಆತಂಕದ ಸ್ಥಿತಿಯಲ್ಲಿ ಇತ್ತು.

ಆದರೆ ಕೋರೋಣ ಸೋಂಕು ಕಡಿಮೆಯಾಗುತ್ತಾ ಸಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಮುಂದಿನ ಜೀವನ ಗುರಿಯಾಗಿಸಿಕೊಂಡು ಕೆಲ ದಿನಗಳ ಹಿಂದೆ 8 9 10 ಮತ್ತು ಹನ್ನೆರಡನೇ ತರಗತಿಗಳನ್ನು ತೆರೆಯಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಪುಣ್ಯ ಎಂಬಂತೆ ಈ ನಿರ್ಣಯದಿಂದ ಇಲ್ಲಿಯವರೆಗೆ ಯಾವುದೇ ವಿಧ್ಯಾರ್ಥಿಗಳು ಸಹ ಕೋರೋಣ ಸೋಂಕಿಗೆ ಒಳಪಟ್ಟಿಲ್ಲ.

ಈ ಹಿನ್ನಲೆಯಲ್ಲಿ ಮತ್ತು ರಾಜ್ಯದ ಎಲ್ಲೆಡೆ ಸೊಂಕಿತರರ ಪ್ರಮಾಣ ತಗ್ಗುತ್ತ ಹೋಗುತ್ತಿರುವುದನ್ನು ಗಮನಿಸಿ ರಾಜ್ಯದ ಖ್ಯಾತ ಶಿಕ್ಷಣ ತಜ್ಞರು ಸಂಪೂರ್ಣವಾಗಿ ಎಲ್ಲಾ ತರಗತಿಗಳನ್ನು ಆರಂಭಿಸಲು ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರ ಗುರುವಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದದಾರೆ ಎಂದು ಹೇಳಲಾಗುತ್ತಿದೆ. ಹೌದು ರಾಜ್ಯದ ಶ್ರೇಷ್ಠ ಶಿಕ್ಷಣ ತಜ್ಞರುಗಳಾದ ಶ್ರೀಪಾದ್ ಭಟ್, ಡಾ ಸಿಲ್ವಿಯಾ, ವೆಂಕಟೇಶ್ ಅವರು ಸೇರಿದಂತೆ ಇನ್ನು ಅನೇಕರು ಶಾಲೆಗಳನ್ನು ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಆರಂಭಿಸುವಂತೆ ಕೋರಿ ನಮ್ಮ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ಸುರೇಶ ಕುಮಾರ್ ಮತ್ತು ವೈದ್ಯಕೀಯ ಸಚಿವ ಕೆ ಸುಧಾಕರ್ ಮುಂತಾದವರು ಈ ಕುರಿತು ಸಭೆ ನಡೆಸಿದ್ದು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಡು ನೋಡಬೇಕಾಗಿದೆ. ಒಟ್ಟಾರೆಯಾಗಿ ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ಶಾಲೆಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾದರೂ ಅಚ್ಚರಿ ಪಡಬೇಕೆನಿಲ್ಲ. ಆದರೆ ಸರ್ಕಾರ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸರ್ಕಾರ ಶಾಲೆ ಆರಂಭಿಸುವದೋ ಕಾಡು ನೋಡಬೇಕು.