ಶನಿ ದೇವನ ಕೃಪೆ ನಿಮ್ಮ ಮೇಲೆ ಇದ್ದರೆ ಈ ಸೂಚನೆಗಳು ಸಿಗುತ್ತವೆ

ನಿಮ್ಮ ಶಾರೀರಿಕ ಲಕ್ಷಣಗಳು ನಿಮ್ಮ ಮೇಲೆ ಶನಿಗ್ರಹ ಇರುವುದನ್ನು ಗುರುತಿಸಬಹುದಾಗಿದೆ. ಶನಿದೇವರು ನಿಮ್ಮ ಜೀವನದಲ್ಲಿ ಬಂದರೆ ನೀವು ಭಯ ಪಡಬೇಕಾಗಿಲ್ಲ ಅದು ನಿಮ್ಮ ಶನಿದೇವರ ಕೃಪೆ ಎಂದು ಭಾವಿಸಬೇಕು. ನಿಮ್ಮ ಕಷ್ಟಗಳ ಪರಿಹಾರಕ್ಕಾಗಿ ಶನಿದೆವರು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುತ್ತಾರೆ, ಸೂರ್ಯ ಪುತ್ರರಾಗಿರುವ ಶನಿದೆವರು ವ್ಯಕ್ತಿಗಳ ಸದ್ಗುಣ ಮತ್ತು ದುರ್ಗುಣಗಳನ್ನು ಆಧರಿಸಿ ಸಮಯವನ್ನು ನಿರ್ಧರಿಸಿ ಆ ವ್ಯಕ್ತಿಗೆ ಶಿಕ್ಷಿಸುತ್ತಾನೆ ಸಲಹುತ್ತಾನೆ. ಶನಿ ದೇವರು ನ್ಯಾಯ, ನೀತಿ ಸತ್ಯ, ಧರ್ಮದ ಸಂಕೇತವಾಗಿರುತ್ತಾರೆ. ಶನಿಯು ಪ್ರಾಮಾಣಿಕ ವ್ಯಕ್ತಿಗಳಿಗೆ ಸದಾ ಒಳ್ಳೆಯದನ್ನೆ ಬಯಸುತ್ತಾನೆ.

ಇನ್ನು ಧರ್ಮಗ್ರಂಥಗಳಲ್ಲಿ ತಿಳಿಸಿರುವ ಹಾಗೆ ಶನಿದೇವರು ಯಾರಲ್ಲಿ ಇರುತ್ತಾರೆ ಎಂಬುದನ್ನು ನಿಮ್ಮ ಶಾರೀರಿಕ ಲಕ್ಷಣಗಳನ್ನು ನೋಡಿ ತಿಳಿಯಬಹುದಾಗಿದೆ. ಈ ಶನಿ ಪ್ರಭಾವ ಇರುವ ವ್ಯಕ್ತಿಗಳು ತೆಳ್ಳಗೆ ಇರುತ್ತಾರೆ ಮತ್ತು ನೀಳವಾಗಿ ಸಮೃದ್ದವಾದ ಕೇಶವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಇನ್ನು ಕೆಲವರಿಗೆ ಬಾಲ್ಯದಲ್ಲಿ ಎಲುಬು, ಮೂಳೆ ಮುರಿತ ದಂತಹ ಸಮಸ್ಯೆ ಕಂಡು ಬರುತ್ತದೆ. ಶನಿ ಕೃಪೆ ಹೊಂದಿರುವಂತಹ ವ್ಯಕ್ತಿಗಳು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ, ಭಾವನಾತ್ಮಕ ಜೀವಿಯಾಗಿರುತ್ತಾರೆ. ಇವರು ಸುಳ್ಳು ಮೋಸ ಮಾಡುವ ವ್ಯಕ್ತಿಗಳಿಂದ ದೂರವಿರಲು ಇಷ್ಟಪಡುತ್ತಾರೆ.

ಯಶಸ್ಸಿಗಾಗಿ ನಿರಂತರ ಪ್ರಯತ್ನ ಇವರದ್ದಾಗಿರುತ್ತದೆ. ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವ ವ್ಯಕ್ತಿತ್ವ ಇವರದ್ದಲ್ಲ, ಎಂತಹ ಕಡು ಕಷ್ಟಗಳನ್ನು ಎದುರಿಸುವ ಸಾಮಾರ್ಥ್ಯ ಇವರಲ್ಲಿ ಉದುಗಿರುತ್ತದೆ. ಶನಿಗ್ರಹ ದೋಷ ಪರಿಹಾರಕ್ಕಾಗಿ ನೀವು ಪ್ರತಿ ಶನಿವಾರ ಶನಿದೇವರ ದರ್ಶನ ಪಡೆದು ಕಪ್ಪು ವಸ್ತ್ರವನ್ನು ದಾನ ಮಾಡಬೇಕು. ಮತ್ತು ಅರಳೀಮರದ ಕೆಳಗೆ ಎಳ್ಳೆಣ್ಣೆಯ ದೀಪ ಹಚ್ಚಿ ಪೂಜಿಸಬೇಕು ಜೊತೆಗೆ ಕೆಲವರಿಗೆ ಎಳ್ಳೆಣ್ಣೆಯನ್ನು ದಾನ ಮಾಡಿದರೆ ನಿಮ್ಮ ಎಲ್ಲಾ ಶನಿ ದೋಷಗಳು ನಿವಾರಣೆ ಆಗುತ್ತವೆ ಎಂದು ಹಿರಿಯರು ತಿಳಿಸುತ್ತಾರೆ.

%d bloggers like this: