ಶತಮಾನಗಳ ನಂತರ ಗ್ರಹಗತಿಗಳಲ್ಲಿ ಬದಲಾವಣೆ, ಈ 5 ರಾಶಿಯವರಿಗೆ ಅದೃಷ್ಟ ಹಾಗೂ ಯಶಸ್ಸು

ಬರೋಬ್ಬರಿ ಇನ್ನೂರ ಐವತ್ತು ವರ್ಷಗಳ ನಂತರ ಈ ಹೊಸ ವರ್ಷದಲ್ಲಿ ಅಪರೂಪವಾಗಿ ಗ್ರಹಗತಿಗಳು ತಮ್ಮ ಸ್ಥಾನವನ್ನು ಬಹಳ ವೈಶಿಷ್ಟ್ಯ ಪೂರ್ಣವಾದ ರಾಶಿಗಳ ಮೇಲೆ ಅಲಂಕರಿಸಲಿದ್ದು ಆ ಆರು ರಾಶಿಗಳಿಗೆ ಮಹತ್ವಪೂರ್ಣವಾದ ಪ್ರಭಾವ ಬೀರಲಿವೆ. ಆ ಆರು ರಾಶಿಗಳ ಜನರ ಜೀವನದಲ್ಲಿ ಮಹತ್ತರವಾದ ಬೆಳವಣಿಗೆಗಳು ನಡೆಯಲಿವೆ ಮತ್ತು ಅವರಿಗೆ ಈ ವರ್ಷದಿಂದ ಅಧೃಷ್ಟ ಅವರ ಬೆನ್ನಿಂದೆ ಇರುತ್ತದೆ ಎಂದು ಜ್ಯೋತಿಷ್ಯಶಾಸ್ತ್ಲದಲ್ಲಿ ಹೇಳಲಾಗಿದೆ, ಹಾಗಾದರೆ ಯಾವ ರಾಶಿಗಳ ಮೇಲೆ ಈ ವಿಶೇಷ ಗ್ರಹಗಳು ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿಯೋಣ.

ಮೇಷ: ಈ ಮೇಷ ರಾಶಿರವರಿಗೆ ಧನ್ಯತಾ ಭಾವ ಹೆಚ್ಚಾಗಲಿದ್ದು ವಿನಯ ವಿಧೇಯತೆಯಿಂದ ಕೆಲಸ ಕಾರ್ಯಗಳನ್ನು ಮಾಡಲು ಆರಂಭಿಸುತ್ತಾರೆ, ಯಾವುದೇ ರೀತಿಯ ಆತುರ, ಗೊಂದಲ ಇಲ್ಲದೆ ತಾಳ್ಮೆಯಿಂದ ತಮ್ಮ ಬುದ್ದಿಕೌಶಲ್ಯ ಮೆರೆದು ಯಶಸ್ವಿಯಾಗುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳು ಇವರನ್ನು ಹರಿಸಿ ಬರಲಿವೆ. ಇನ್ನು ಇವರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ವೃಷಭ: ಈ ವೃಷಭ ರಾಶಿಯವರಿಗೆ ಅತ್ಯುತ್ತಮ ಉನ್ನತ ಅಧಿಕಾರಗಳು ದೊರೆಯಲಿವೆ, ನಿಮ್ಮ ವೃತ್ತಿ ಕ್ಷೇತ್ರಗಳಲ್ಲಿ ಸ್ಥಾನ ಮಾನ ಗೌರವ ಲಭಿಸುತ್ತದೆ. ನಿಮ್ಮ ಉದ್ಯೋಗದಲ್ಲಿ ನಿಮಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಕುಟುಂಬದಲ್ಲಿ ಸುಖ, ಶಾಂತಿ, ಸಂತೋಷ ಏರ್ಪಡುತ್ತದೆ. ಮನೆಯಲ್ಲಿ ಶುಭಕಾರ್ಯ ನೆರೆವೇರಲಿದೆ ಉತ್ತಮವಾದ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದಾಗಿದೆ.

ಮಿಥುನ: ಈ ರಾಶಿಯವರಿಗೆ ಯೋಗಬಲವಿದೆ, ಜೀವನದಲ್ಲಿ ಬಯಸಿದ ಆಸೆಗಳು ಈಡೇರುವ ಸಮಯ ಸನಿಹವಾಗುತ್ತಿವೆ. ಆದರೆ ತಾಳ್ಮೆ ಇರಲಿ ಅಂದುಕೊಂಡ ಕೆಲವು ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತದೆ. ನಿಮ್ಮ ಕೆಲಸಗಳಿಗೆ ಕಿರಿಕಿರಿ ಉಂಟಾಗುವ ಸಾದ್ಯತೆ ಇರುತ್ತದೆ ಇದಕ್ಕೆ ಪ್ರತಿಕ್ರಿಯಿಸಬೇಡಿ ನಿಶ್ಚಿಂತೆಯಿಂದ ನಿಮ್ಮ ಕರ್ತವ್ಯ ನಿರ್ವಹಿಸಿ ನಿಮ್ಮ ವ್ಯಕ್ತಿತ್ವದಲ್ಲಿ ಮಾತುಗಾರಿಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ ಇದರಿಂದ ಶುಭಫಲ ದೊರೆಯುತ್ತದೆ.

ಸಿಂಹ: ಈ ರಾಶಿಯವರಿಗೆ ನಿಮ್ಮ ಪ್ರಗತಿಯನ್ನು ಕಂಡು ಇತರರು ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಬಹುದು, ಆದ್ದರಿಂದ ನಿಮ್ಮ ಜೀವನದಲ್ಲಿ ಆಗುತ್ತಿರುವ ಪ್ರಗತಿಯನ್ನು ಸಿಗುತ್ತಿರುವ ಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಕರಾತ್ಮಕ ಬದಲಾವಣೆ ಕಾಣಲಿದೆ. ಆರ್ಥಿಕವಾಗಿ ಹಣದ ಹರಿವು ಹೆಚ್ಚಾಗುತ್ತದೆ ನೀವು ಅಂದುಕೊಂಡ ಕೆಲಸ ಕಾರ್ಯಗಳು ಯಾವುದೇ ರೀತಿಯ ತೊಂದರೆ ತಾಪತ್ರಯ ವಿಲ್ಲದೆ ನಿರ್ವಿಘ್ನವಾಗಿ ನಡೆಯಲು ಪ್ರತಿದಿನ ಗಣೇಶನ ಪ್ರಾರ್ಥನೆ ಮಾಡಿ ಒಳಿತಾಗುತ್ತದೆ.

ಮೀನ: ಈರಾಶಿಯವರಿಗೆ ಜೀವನದಲ್ಲಿ ಶುಭ ಫಲಗಳು ದೊರೆಯುತ್ತವೆ ಆದರೆ ಕೆಲವು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ ಅನಾವಶ್ಯಕವಾಗಿ ಇತರರಿಗೆ ಸಾಲ ಕೊಡಿಸುವುದು, ಕೊಡುವುದಕ್ಕೆ ಹೋಗಬೇಡಿ. ಇದು ನಿಮ್ಮ ನೆಮ್ಮದಿಯನ್ನು ಕೆಡಿಸುತ್ತವೆ. ಹಣಕಾಸು ವಿಚಾರದಲ್ಲಿ ಹೆಚ್ಚು ಜಾಗೃತೆಯಿಂದ ಇರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ಬೆರೆಯುವುದರಿಂದ ನಿಮಗೆ ಸಹಾಯವಾಗುತ್ತದೆ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಸಂಕೋಚ ಸರಿಸಿ ಆದಷ್ಟು ಮುಕ್ತವಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಬೆರೆಯರಿ ಇದರಿಂದ ನಿಮಗೆ ನಿಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಧೈರ್ಯ ಹೆಚ್ಚಾಗುತ್ತದೆ.

%d bloggers like this: