ಸಮಾಜದಲ್ಲಿ ನೀವು ಏನಾದರೂ ಗೌರವ, ಕೀರ್ತಿ ಸ್ಥಾನ ಮಾನ ಗಳಿಸಿದರೆ ನಿಮಗೆ ಹಿತೈಷಿಗಳಿಗಿಂತ ಶತ್ರುಗಳು ಹುಟ್ಟಿಕೊಳ್ಳುವುದೇ ಹೆಚ್ಚು. ಅದರಲ್ಲಿಯೂ ಈ ಶತ್ರುದೃಷ್ಠಿ ಗಳಲ್ಲಿ ವಿವಿಧ ರೀತಿಯಲ್ಲಿದ್ದಾರೆ ಸಂಬಂಧ ಶತ್ರುದೃಷ್ಠಿ ಇವರು ಸಂಬಂಧಿಕರಾಗಿದ್ದು ನಿಮ್ಮ ಬೆಳವಣಿಗೆ ನೋಡಿ ಒಳಗೊಳಗೆ ಅಸೂಯೆ ಹೊಟ್ಟೆ ಕಿಚ್ಚಿನಿಂದ ನಿಮ್ಮ ಅಧಃಪತನವನ್ನೇ ನಿರೀಕ್ಷೆ ಮಾಡುವಂತಹವರಾಗಿರುತ್ತಾರೆ. ಇನ್ನು ಸ್ನೇಹಿತರ ಶತ್ರುದೃಷ್ಠಿ ಇವರು ಯಾವಾಗ ಒಳಿತನ್ನು ಮಾಡುತ್ತಾರೆ, ಕೆಡುಕನ್ನು ಬಯಸುತ್ತಾರೆ ಎಂಬುದನ್ನು ತಿಳಿಯುವುದು ಕಷ್ಟಕರವಾಗಿದೆ. ಇದರ ಜೊತೆಗೆ ಸ್ತ್ರೀಶತ್ರು ದೃಷ್ಠಿ ಹೀಗೆ ಬೇರೆ ಬೇರೆ ರೀತಿಯಾಗಿ ಶತ್ರುಗಳು ನಿಮಗೆ ಅರಿವಿಲ್ಲದೆ ನಿಮ್ಮ ಬಳಿಯೆ ಇರುತ್ತಾರೆ.

ಹಿರಿಯರ ಮಾತಿನಂತೆ ಶತ್ರುಗಳು ಇದ್ದಷ್ಟು ನೀವು ಜೀವನದಲ್ಲಿ ಬೆಳವಣಿಗೆ ಹೊಂದುತ್ತೀರಿ. ಇವರ ವಿರುದ್ದ ನಾವು ಗೆಲ್ಲಲೇಬೇಕು ಎಂಬ ಹಠ ನಿಮ್ಮನ್ನು ಜೀವನದಲ್ಲಿ ಸಾಧಿಸುವಂತೆ ಪ್ರೇರೇಪಿಸುತ್ತದೆ. ಆದರೆ ಶತ್ರುದೃಷ್ಠಿ ಇಷ್ಟಕ್ಕೆ ಸೀಮಿತವಾಗಿದ್ದರೆ ಪರವಾಗಿಲ್ಲ ಇದು ಇತಿ ಮಿತಿ ಮೀರಿ ಮೃತ್ಯು ಅಪಾಯಕ್ಕೆ ಸಿಲುಕಿಸುವಂತಹ ಹಂತಕ್ಕೆ ತಲುಪಿದರೆ ಶತ್ರುದೋಷ ಪರಿಹಾರ ಮಾಡಿಸಲೇಬೇಕಾಗುತ್ತದೆ. ಇದನ್ನು ನೀವು ಮನೆಯಲ್ಲಿಯೇ ನಿಮ್ಮಿಷ್ಟದ ದೇವರ ಸನ್ನಿಧಿಯಲ್ಲಿ ಈ ನಿಯಮವನ್ನು ಪಾಲಿಸಿದರೆ ಈ ಶತ್ರು ದೋಷದಿಂದ ಮುಕ್ತಿಗೊಳ್ಳ ಬಹುದಾಗಿದೆ. ಶತ್ರುಗಳಿಂದ ಈ ಪ್ರಾಣಾಪಾಯ ಬರುವುದು ಸಾಮಾನ್ಯವಾಗಿ ಹಣಕಾಸು ವಿಚಾರದಲ್ಲಿ ಅಸಮಾಧಾನಗೊಂಡಾಗ ಈ ಮುನಿಸು ಕೋಪ ಸಾಯಿಸುವ ಹಂತಕ್ಕೆ ಹೋಗಬಹುದು ಶತ್ರುಗಳ ಕೋಪಕ್ಕೆ ಬಲಿಯಾಗಬಹುದು.

ಇದಕ್ಕೆ ಪ್ರತಿಯಾಗಿ ನಾವು ಎಳ್ಳೆಣ್ಣೆ, ಬೇವಿನೆಣ್ಣೆ ಮತ್ತು ಹರಳೆಣ್ಣೆ ದೀಪದ ನಿಯಮವನ್ನು ಪಾಲಿಸಿ ಈ ಶತ್ರು ದೋಷಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಳ್ಳೆಣ್ಣೆಯಲ್ಲಿ ಈ ಎಳ್ಳು ಶನಿತತ್ವವನ್ನು ಸೂಚಿಸಿದರೆ, ಈ ಹರಳೆಣ್ಣೆಯಲ್ಲಿ ಹರಳು ಸಹ ಶನಿತತ್ವವನ್ನು ತೋರುತ್ತದೆ. ಇದರ ಜೊತೆಗೆ ವಿಶೇಷವಾಗಿ ಬೇವಿನ ಎಣ್ಣೆ ಈ ಮೂರು ಎಣ್ಣೆಯನ್ನು ಮಿಶ್ರಣ ಮಾಡಿ ದೀಪ ಹಚ್ಚಿದರೆ ಶತ್ರುದೋಷದ ನಿವಾರಣೆಗೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರತಿ ಭಾನುವಾರ, ಶುಕ್ರವಾರ ಮತ್ತು ಮಂಗಳವಾರ ಈ ಎಳ್ಳೆಣ್ಣೆ, ಬೇವಿನೆಣ್ಣೆ, ಹರಳೆಣ್ಣೆ ಈ ಮೂರು ಎಣ್ಣೆಯನ್ನು ಮಿಶ್ರಣವಾಗಿಸಿ ನಿಶಬ್ದವಾದ ಕಗ್ಗತ್ತಲ ರಾತ್ರಿಯಲ್ಲಿ ಮನೆಯ ಅಂಗಳದಲ್ಲಿ ಯಾರು ಇಲ್ಲದ ಸಮಯ ನೋಡಿ ದೀಪ ಹಚ್ಚಬೇಕು.

ಈ ದೀಪ ಹಚ್ಚುವ ಮುನ್ನ ದೀಪದ ಬತ್ತಿಗೆ ಕೆಂಪು ಆಕೃತಿ ನೀಡಬೇಕು. ಬತ್ತಿ ಈ ಕೆಂಪು ಆಕೃತಿಗೆ ಬರಲು ಬತ್ತಿಗೆ ಕುಂಕುಮವನ್ನು ಲೇಪನಮಾಡಿ ಈ ಮೂರು ಮಿಶ್ರಿತ ಎಣ್ಣೆಯ ದೀಪವನ್ನು ಮಧ್ಯರಾತ್ರಿಯಲ್ಲಿ ನಿಮ್ಮ ಇಷ್ಟದ ಮನೆ ದೇವರನ್ನು ಸ್ಮರಿಸುತ್ತಾ ನಿಮ್ಮ ಶತ್ರುಗಳ ಹೆಸರನ್ನು ಹೇಳುತ್ತಾ ದೀಪ ಹಚ್ಚಬೇಕು. ಇದು ನಿರಂತರವಾಗಿ ನಾಲ್ಕು ವಾರಗಳ ಕಾಲ ನಡೆಯಬೇಕು. ಈ ರೀತಿ ಶತ್ರುಗಳ ಹೆಸರಿನಿಂದ ದೀಪ ಹಚ್ಚಿದರೆ ಶತ್ರುದೋಷ ನಿವಾರಣೆ ಶೀಘ್ರ ಪರಿಹಾರ ವಾಗುತ್ತದೆ ಎಂದು ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.