ಶೀಘ್ರದಲ್ಲೇ ಶುರುವಾಗುತ್ತಿದೆ ಕನ್ನಡದ ಬಿಗ್ ಬಾಸ್, ಈ ಸಲ ಎರಡೆರಡು ಬಿಗ್ ಬಾಸ್

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಈ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ನಾಡಿನ ಮನೆ ಮನಗಳಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಈ ರಿಯಾಲಿಟಿ ಶೋ ಗೆ ಅಂತಾನೇ ಒಂದು ಪ್ರೇಕ್ಷಕ ವರ್ಗಾನೇ ಇದೆ. ಮನೆ ಮಂದಿಯೆಲ್ಲಾ ರಿಲ್ಯಾಕ್ಸ್ ಮೂಡ್ ನಲ್ಲಿ ನೋಡುವ ಈ ಬಿಗ್ ಬಾಸ್ ರಿಯಾಲಿಟಿ ಶೋ ಎಂಟನೇ ಅವತರಣೆಕೆಯಲ್ಲಿ ಅಂತ್ಯ ಕಂಡಿದೆ. ಇದೀಗ ಈ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೆ ಆರಂಭವಾಗಲಿದೆ. ಈ ಬಾರಿಯ ಬಿಗ್ ಬಾಸ್ ವಿಶೇಷತೆಯಿಂದ ಕೂಡಿರಲಿದೆ. ಕಳೆದ ಬಾರಿಯೇ ಕಿರುತೆರೆ ಕಲಾವಿದರನ್ನ ಕರೆಸಿ ಮಿನಿ ಬಿಗ್ ಬಾಸ್ ಅಂತ ಕಾರ್ಯಕ್ರಮ ಮಾಡಿದ್ರು ಪರಮೇಶ್ವರ ಗುಂಡ್ಕಲ್. ಕಲರ್ಸ್ ಕನ್ನಡದ ಬಿಝಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರ ಕಲ್ಪನೆಯಲ್ಲಿ ಮೂಡಿಬಂದ ಮಗದೊಂದು ಯೋಜನೆ ಈ ಮಿನಿ ಸೀಸನ್ ಬಿಗ್ ಬಾಸ್.

ಇದು ಓಟಿಟಿ ವೂಟ್ ನಲ್ಲಿ ಪ್ರಸಾರವಾಗಲಿದೆ. ಕಳೆದ ಬಾರಿ ವೂಟ್ ನಲ್ಲಿ ಪ್ರಸಾರವಾದ ಮಿನಿ ಬಿಗ್ ಬಾಸ್ ಈ ಬಾರಿ 42 ದಿನಗಳ ಕಾಲ ಇರಲಿದೆ. ಈ ಮಿನಿ ಬಿಗ್ ಬಾಸ್ ಆಗಸ್ಟ್ ತಿಂಗಳಿನಲ್ಲಿ ಪ್ರಸಾರ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅದರಂತೆ ಈ ಮಿನಿ ಸೀಸನ್ ಬಿಗ್ ಬಾಸ್ ನಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹೆಸರು ಮಾಡಿ ಜನಪ್ರಿಯರಾಗಿರುವ ವ್ಯಕ್ತಿಗಳು ಸ್ಪರ್ಧಿಗಳಾಗಿ ಇರಲಿದ್ದಾರಂತೆ. ಅದೇ ರೀತಿ ಬಿಗ್ ಬಾಸ್ ಸೀಸಸ್9 ಎಲ್ಲವೂ ಯೋಜನೆ ಅಂತೆ ಅಕ್ಟೋಬರ್ ನಲ್ಲಿ ಆರಂಭವಾಗಲಿದೆಯಂತೆ. ಈ ಬಿಗ್ ಬಾಸ್ ಶೋನ ವಾರಾಂತ್ಯದಲ್ಲಿ ಪಂಚಾಯ್ತಿ ನಡೆಸಲು ಬರುವ ಕಿಚ್ಚ ಸುದೀಪ್ ಅವರ ನಿರೂಪಣೆ, ಹಾಸ್ಯ ಚಟಾಕಿ, ಸ್ಪರ್ಧಾರ್ಥಿಗಳಿಗೆ ನೀಡುವ ಸಲಹೆ, ಮಾರ್ಗದರ್ಶನ ಜೊತೆಗೆ ತಪ್ಪು ಮಾಡಿ ಓವರ್ ಡವ್ ಮಾಡುವ ಕಂಟೆಂಸ್ಟೆಂಟ್ ಗಳಿಗೆ ಕೊಡುವ ಖಡಕ್ ವಾರ್ನಿಂಗ್, ಮಾತಲ್ಲೇ ಚಾಟಿ ಬೀಸುವ ಸುದೀಪ್ ಅವರನ್ನು ನೋಡಲು ಏನೋ ಒಂಥರಾ ಚಂದ ಆನಂದ.

ಈ ಬಾರಿಯ ವಿಶೇಷ ಅಂದರೆ ಸುದೀಪ್ ಅವರು ಬಿಗ್ ಬಾಸ್ ಮಿನಿ ಸೀಸನ್ ನಲ್ಲಿಯೂ ಕೂಡ ನಿರೂಪಣೆಯ ಜವಬ್ದಾರಿ ಹೊರಲಿದ್ದಾರೆ. ಹಾಗಾಗಿ ಕಿಚ್ಚ ಸುದೀಪ್ ಅವರನ್ನ ಎರಡೂ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಕಣ್ತುಂಬಿಕೊಳ್ಳಬಹುದು. ಬಿಗ್ ಬಾಸ್ ಮನೆಯಂತೂ ಪ್ರತೀ ಸೀಸನ್ ನಲ್ಲಿಯೂ ಹೇಗೆ ವಿಭಿನ್ನ ಆಕರ್ಷಕವಾಗಿ ಕಾಣುತ್ತದೆಯೋ ಅದೇ ರೀತಿ ಈ ಬಾರಿಯೂ ಕೂಡ ಅತ್ಯಾಕರ್ಷಕವಾಗಿ ಇರಲು ಸಕಲ ಸಿದ್ದತೆ ಕೂಡ ನಡೆಯುತ್ತಿದೆ. ಅದರ ಜೊತೆಗೆ ಒಂಭತ್ತೇ ಅವತರಿಣಿಕೆಗೆ ಯಾವ ಯಾವ ಕ್ಷೇತ್ರದಿಂದ ಸಾಧನೆ ಮಾಡಿದ ಸ್ಪರ್ಧಿಗಳನ್ನ ಆಯ್ಕೆ ಮಾಡಬೇಕು ಅನ್ನೋದರ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ತಂಡ ಕಾರ್ಯನಿರತವಾಗಿದೆ. ಇತ್ತ ಕಿಚ್ಚ ಸುದೀಪ್ ಅವರು ತಮ್ಮ ವಿಕ್ರಾಂತ್ ರೋಣ ಚಿತ್ರದ ಪ್ರಮೋಶನ್ ಕಾರ್ಯಗಳಲ್ಲಿ ಬಿಝಿ಼ಯಾಗಿದ್ದಾರೆ. ವಿಆರ್ ಸಿನಿಮಾ ರಿಲೀಸ್ ಆದ ನಂತರ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ಕಡೆ ಗಮನ ಹರಿಸಲಿದ್ದಾರೆ ಎಂದು ತಿಳಿದು ಬಂದಿದೆ.

%d bloggers like this: