ಕೆಲವೊಂದು ಸಲ ಯಾರೋ ಮಾಡಿದ ತಪ್ಪಿಗೆ ಮತ್ತೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ ಎಂಬುದನ್ನು ನಾವು ಹಲವಾರು ಬಾರಿ ಕೇಳಿರುತ್ತೇವೆ. ಈಗ ಅದೇ ರೀತಿಯ ಘಟನೆಯೊಂದು ನಡೆದಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ ಅದರಲ್ಲೂ ನಮ್ಮ ದೇಶದಲ್ಲಿ ಕ್ರಿಕೆಟಿಗರು ಸಿನಿಮಾ ತಾರೆಯರು ಏನಾದರು ಮಾಡಿದರೆ ಅದು ಕಾಡ್ಗಿಚ್ಚಿನಂತೆ ಪಸರಿಸಿಬಿಡುತ್ತದೆ. ಹೌದು ಸದ್ಯ ಯಾವುದೇ ಟೂರ್ನಿಗಳು ಇಲ್ಲದ ಕಾರಣ ಎಲ್ಲಾ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ.

ಸದ್ಯ ಭಾರತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಎಡಗೈ ಓಪನರ್ ಶಿಖರ್ ಧವನ್ ಅವರು ಭಾರತದ ಪವಿತ್ರ ತೀರ್ಥ ಕ್ಷೇತ್ರವಾದ ವಾರಣಾಸಿಯ ಪ್ರವಾಸದಲ್ಲಿ ಇದ್ದಾರೆ. ಈ ಪ್ರವಾಸದ ನಡುವೆ ಅಚಾತುರ್ಯ ಘಟನೆ ಒಂದು ನಡೆದಿದೆ. ಹೌದು ಗಂಗಾ ನದಿಯ ದೊಣಿಯಲ್ಲಿ ವಿಹರಿಸುತ್ತಿರುವ ಸಮಯದಲ್ಲಿ ಶಿಖರ್ ಧವನ್ ಅಲ್ಲಿ ಹಾರಾಡುತ್ತಿದ್ದ ಸೈಬೀರಿಯನ್ ಹಕ್ಕಿಗಳಿಗೆ ಆಹಾರ ತಿನ್ನಿಸಿ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.

ಈಗ ಈ ಫೋಟೋ ಇಂದು ಸಿಕ್ಕಾಪಟ್ಟೆ ಸುದ್ದಿಯಾಗಿ ಶಿಖರ್ ಧವನ್ ವಿಹಾರ ಮಾಡಿದ್ದ ದೋಣಿಯ ನಾವಿಕರಾದ ಸೋನು ಸಹಾನೆ ಮತ್ತು ಪ್ರದೀಪ್ ಸಹಾನೆ ಅವರು ದಂಡ ತೇರುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ದೇಶವ್ಯಾಪಿ ಕಾಡುತ್ತಿರುವ ಹಕ್ಕಿಜ್ವರ. ಹೌದು ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಮಾರಣಾಂತಿಕವಾಗಿ ಕಾಡುತ್ತಿದೆ. ಹೀಗಾಗಿ ಸ್ಥಳೀಯ ಸರಕಾರಗಳು ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿವೆ.

ಈ ಹಿನ್ನೆಲೆಯಲ್ಲಿ ವಾರಣಾಸಿ ಗಂಗಾ ನದಿಯ ದಡದಲ್ಲಿರುವ ಯಾವುದೇ ಪಕ್ಷಿಗಳಿಗೆ ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ನೀಡಬಾರದು ಎಂದು ಸ್ಥಳೀಯ ಸಂಸ್ಥೆಗಳು ಆದೇಶ ಹೊರಡಿಸಿತ್ತು. ಆದರೆ ಕ್ರಿಕೆಟಿಗ ಶಿಖರ್ ಧವನ್ ಪ್ರವಾಸಕ್ಕೆಂದು ಆಗಮಿಸಿರುವ ಸಂದರ್ಭದಲ್ಲಿ ಈ ನಿಯಮದ ಉಲ್ಲಂಘನೆಯಾಗಿದ್ದು ಇದೀಗ ಸೋನು ಮತ್ತು ಪ್ರದೀಪ್ ಅವರು ಅದರ ದಂಡವನ್ನು ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.