ಶಿಕ್ಷಣದಲ್ಲಿ ಹಿಂದೆ ಉಳಿಯುತ್ತಿದ್ದಿರಾ, ಹಾಗಾದರೆ ಮನೆಯಲ್ಲಿ ಈ ಫೋಟೋ ಇಡಿ, ಬಹು ದೊಡ್ಡ ಸುಧಾರಣೆ ಕಾಣುವಿರಿ

ಸಾಮಾನ್ಯವಾಗಿ ತಂದೆ ತಾಯಿಗಳು ನಮ್ಮ ಮಕ್ಕಳು ಹೆಚ್ಚು ವಿಧ್ಯಾಭ್ಯಾಸ ಹೊಂದಬೇಕು ಉತ್ತಮವಾದ ನೌಕರಿ ಪಡೆಯಬೇಕು ಎಂಬುದು ಎಲ್ಲಾ ತಂದೆ ತಾಯಿಗಳ ಅಭಿಲಾಷೆ. ಆದರೆ ಈ ರೀತಿಯ ಕನಸುಗಳು ಎಲ್ಲಾ ತಂದೆತಾಯಿಗಳಿಗೂ ನನಸಾಗುವುದಿಲ್ಲ ಕಾರಣ ಮಕ್ಕಳು ಅವರ ಕನಸಿನ ರೀತಿ ವರ್ತಿಸುವುದಿಲ್ಲ, ಗುರಿ ಮುಟ್ಟುವುದಿಲ್ಲ. ಹಾಗದರೆ ಇಂತಹ ಸಮಸ್ಯೆಗಳಿಗೆ ಕಾರಣ ಏನು ಎಂಬುದಕ್ಕೆ ಜ್ಯೋತಿಷ್ಯರು ಪರಿಹಾರ ಸೂಚಿಸುವುದು ಈ ದಕ್ಷಿಣಾಮೂರ್ತಿ ಸ್ವಾಮಿಯ ಪೋಟೋವನ್ನು ಮನೆಯ ಅಂಗಳ ಅಂದರೆ ಹಾಲ್ ನಲ್ಲಿ ಇಡಬೇಕು ಎಂಬುದು ಅವರ ಸಲಹೆ ಸೂಚನೆಗಳು.

ಈ ದಕ್ಷಿಣಾಮೂರ್ತಿಯ ಪೋಟೋವನ್ನು ಮನೆಯಲ್ಲಿ ಅದರಲ್ಲೂ ಹಾಲ್ ನಲ್ಲಿ ಇಟ್ಟಾಗ ಮಕ್ಕಳು ಮನೆಯ ಸದಸ್ಯರು ಆ ಸ್ವಾಮಿಯ ಪೋಟೋವನ್ನು ಅವಾಗವಾಗ ನೋಡುತ್ತಾ ಇರುತ್ತಾರೆ ಇದರಿಂದ ಆ ಸ್ವಾಮಿಯ ಕೃಪೆಗೆ ಪಾತ್ರರಾಗಿ ಅವರ ಎಲ್ಲಾ ದೋಷಗಳು ಪರಿಹಾರ ವಾಗುತ್ತವೆ. ವಿಧ್ಯಾರ್ಥಿಗಳಲ್ಲಿ ಹೆಚ್ಚು ಚಂಚಲತೆ ಸಾಮಾನ್ಯ. ಮಕ್ಕಳಿಗೆ ತುಂಟತನ ಜಾಸ್ತಿ ಇರುತ್ತದೆ ಅವರಿಗೆ ಓದುವ ಹವ್ಯಾಸ ಕ್ಕಿಂತ ಆಟದ ಕಡೆ ಗಮನ ಹೆಚ್ಚು,ಓದಿನಲ್ಲಿ ಏಕಾಗ್ರತೆ ಇರುವುದಿಲ್ಲ ಕಾರಣ ಅವರಿಗೆ ಬಾಲಗ್ರಹ ದೋಷವಿರುತ್ತದೆ.

ಈ ಬಾಲಗ್ರಹ ದೋಷ ನಿವಾರಣೆಗಾಗಿಯೇ ಮನೆಯಲ್ಲಿ ದಕ್ಷಿಣಾಮೂರ್ತಿ ಪೋಟೋವನ್ನು ಇರಿಸಲಾಗುತ್ತದೆ, ಈ ಸ್ವಾಮಿಯ ದರ್ಶನದಿಂದ ಇಂತಹ ಸಮಸ್ಯೆಗಳು ಪರಿಹಾರ ಆಗುತ್ತವೆ. ದಕ್ಷಿಣಾಮೂರ್ತಿಯ ಮಹತ್ವ ಏನೆಂದು ತಿಳಿಯಬೇಕು. ದಕ್ಷಿಣಾ ಮೂರ್ತಿ ಸ್ವಾಮಿಯು ದೇವಾನು ದೇವತೆಗಳಲ್ಲಿ ಅತ್ಯಂತ ಶ್ರೇಷ್ಠಕರ ಸಂಕಲ್ಪ ಹೊಂದಿರುವಂತಹ ಏಕೈಕ ದೇವರು ಈ ದಕ್ಷಿಣಾಮೂರ್ತಿ ಸ್ವಾಮಿ. ದಕ್ಷಿಣ ಅಂದರೆ ಅಪಮೃತ್ಯು, ಸಾವಿನ ಸೂಚಕ ಎಂದರ್ಥ ಇಂತಹ ದಕ್ಷಿಣದಿಕ್ಕಿನ ಅಭಿಮುಖವಾಗಿ ನಿಂತಿರುವಂತಹ ದೇವರು ಆದ್ದರಿಂದ ಎಲ್ಲಾ ದೇವರಿಗಿಂತ ದಕ್ಷಿಣಾಮೂರ್ತಿ ಸ್ವಾಮಿಯು ಮಹತ್ವ ಪಡೆಯುತ್ತದೆ.

ಮನೆಯಲ್ಲಿ ಯಾವ ರೀತಿಯ ಪೋಟೋ ಇಡಬೇಕು ಯಾವ ವಿಗ್ರಹ ಇಟ್ಟು ಯಾವ ರೀತಿಯ ನೈವೇದ್ಯ ಇಡಬೇಕು ಎಂಬುದನ್ನು ತಿಳಿದುಕೊಳ್ಳ ಬೇಕಾಗಿರುವುದು ಕೂಡ ಮುಖ್ಯ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಂಕಲ್ಪ ಇರುತ್ತದೆ. ಪ್ರತಿಯೊಂದು ಸಂಕಲ್ಪದ ಹಿಂದೆ ಒಂದೊಂದು ದೋಷ ಪರಿಹಾರ ಹಿನ್ನೆಲೆ ಇದುತ್ತದೆ. ಹಾಗೆ ಈ ಬಾಲಗ್ರಹ ದೋಷಕ್ಕೆ ದಕ್ಷಿಣಾ ಮೂರ್ತಿಯ ಪೋಟೋವನ್ನು ಮನೆಯ ಅಂಗಳದಲ್ಲಿ ಇಡಬೇಕು ಎಂಬುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉತ್ತಮ ಎಂದು ತಿಳಿಸುತ್ತಾರೆ.

%d bloggers like this: