ಮಂತ್ರಕ್ಕೆ ಮಾವಿನಕಾಯಿ ಉದುರುತ್ತಾ ಎಂದು ನೀವು ಎಷ್ಟೋ ಭಾರಿ ಅಂದಿರುತ್ತೀರಿ. ಯಂತ್ರ ಮಂತ್ರಗಳಿಂದ ಜೀವನದಲ್ಲಿ ಬದಲಾವಣೆ ಆಗಿಬಿಡುತ್ತಾ ಇವೆಲ್ಲಾ ಮೂಢನಂಬಿಕೆ. ನಾವು ಮಾಡುವ ಕೆಲಸದಲ್ಲಿ ಶ್ರದ್ದಾಭಕ್ತಿ, ಬದ್ದತೆ ಇದ್ದರೆ ಯಾವುದನ್ನು ಬೇಕಾದರೂ ಸಂಪಾದಿಸಬಹುದು, ಗೆಲ್ಲಬಹುದು ಎಂದು ಕೆಲವು ನಂಬಿಕೆಗಳನ್ನು ಜರಿಯುತ್ತಾರೆ. ಕೆಲವೊಮ್ಮೆ ನಂಬಿಕೆಗಳನ್ನು ನಾವೇ ಅಂದರೆ ಮನುಷ್ಯರಾದ ನಾವು ಮುಢನಂಬಿಕೆಯಾಗಿ ಸಹ ಈ ಒಂದು ಮಂತ್ರದ ಪರಿವರ್ತಿಸಿರುತ್ತೇವೆ.

ಆದರೆ ಅದೇ ನಂಬಿಕೆಗಳು ಕೆಲವು ಸಲ ನಂಬಲು ಸಾಧ್ಯವಾಗದ ರೀತಿಯಲ್ಲಿ ಮಹತ್ತರ ಪ್ರಭಾವ ಪರಿಣಾಮ ಬೀರಿ ಅದರ ಮೌಲ್ಯ ಅರಿತು ಆ ಮಂತ್ರಶಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಹಾಗಾದರೆ ಯಾವುದು ಆ ಮಂತ್ರ ಎಂದು ನೀವು ತಿಳಿಯಲೇಬೇಕು. ಹೌದು ನೀವು ಶಿವನ ಆರಾಧಕರಾಗಿದ್ದರೆ ಶಿವನನ್ನು ನಂಬುವುದಾದರೆ ಅವನ ಕೃಪೆ ನಿಮ್ಮದಾಗಬೇಕೆಂಬ ಅಭಿಲಾಷೆ ನಿಮ್ಮಲ್ಲಿದ್ದರೆ ಈ ಮಂತ್ರವು ನಿಮ್ಮನ್ನು ಶಿವನ ಅನುಗ್ರಹ ಆಗುವಂತೆ ಮಾಡುತ್ತದೆ. ಅದು ಈ ರೀತಿಯಾಗಿ ನಿಮ್ಮ ಎರಡೂ ಕೈಗಳನ್ನು ಜೋಡಿಸಿ ಪರಮೇಶ್ವರನನ್ನು ಸ್ಮರಿಸುತ್ತಾ ಓಂ ಜೋಂ ಸಃ ಎಂದು ಪ್ರತಿನಿತ್ಯ ಬೆಳಿಗ್ಗೆ ಶಿವನನ್ನು ಪ್ರಾರ್ಥಿಸಬೇಕು.

ಈ ರೀತಿಯಾಗಿ ಪ್ರತಿದಿನ ಬೆಳಿಗ್ಗೆ ಓಂ ನಮಃ ಶಿವಾಯ, ಓಂ ಜೋಂ ಸಃ ಎಂಬ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರೆವೇರುತ್ತವೆ, ಜೊತೆಗೆ ಮಕ್ಕಳು ವಿಧ್ಯಾಭ್ಯಾಸದಲ್ಲಿ ಹಿಂದುಳಿದಿದ್ದರೆ ಅವರಿಗೆ ಏಕಾಗ್ರತೆ ಹೆಚ್ಚಾಗಿ ಓದಲು ಆಸಕ್ತಿ ಬರುತ್ತದೆ. ಇನ್ನು ಮನೆಯ ಹಿರಿಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಪರಿಹಾರವಾಗುತ್ತದೆ, ಈ ಮಂತ್ರವು ನಿಮಗೆ ಶುಭಕರ ವಿಚಾರಗಳನ್ನು ತಂದೊಡ್ಡುತ್ತದೆ. ಇದೊಂದು ಮೃತ್ಯುಂಜಯ ಮಂತ್ರವಾಗಿದ್ದು ನಿಮ್ಮ ಎಲ್ಲಾ ಸಂಕಷ್ಟುಗಳು ನಿವಾರಣೆಯಾಗಿ ನಿಮ್ಮ ಇಷ್ಟಾರ್ಥ ಸಿದ್ದಿಯಾಗುತ್ತದೆ, ನಿಮ್ಮ ಮೇಲೆ ಶಿವನ ಅನುಗ್ರಹ ಸದಾ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.