ಗಾನವಿ ಲಕ್ಷ್ಮಣ್ ಅಂದರೆ ನೆನಪಿಗೆ ಅನೇಕರಿಗೆ ತಿಳಿಯುವುದಿಲ್ಲ. ಅದೇ ಮಗಳು ಜಾನಕಿ ಸೀರಿಯಲ್ ಗಾನವಿ ಅಂದಾಕ್ಷಣ ತಟ್ಟನೆ ಕಣ್ಮುಂದೆ ಬರುತ್ತಾರೆ. ಹೌದು ಖ್ಯಾತ ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಮಗಳು ಜಾನಕಿ ಸೀರಿಯಲ್ ಮೂಲಕ ಗಾನವಿ ಲಕ್ಷ್ಮಣ್ ಕಿರುತೆರೆಗೆ ಪರಿಚಯವಾದರು. ನಟಿ ಗಾನವಿ ತಮ್ಮ ಗಾಂಭೀರ್ಯ ನಟನೆಯ ಮೂಲಕವೇ ವೀಕ್ಷಕರ ಮನ ಗೆದ್ದು ಬಿಟ್ಟರು. ಈ ಮಗಳು ಜಾನಕಿ ಧಾರಾವಾಹಿ ನಟಿ ಗಾನವಿ ಅವರಿಗೆ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಇದಾದ ಬಳಿಕ ರಿಷಭ್ ಶೆಟ್ಟಿ ಅವರ ನಾಯಕತ್ವದ ಹೀರೋ ಎಂಬ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಡ್ತಿ ಪಡೆದರು ನಟಿ ಗಾನವಿ. ಈ ಹೀರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಗಾನವಿ ಜೋಡಿ ಪ್ರೇಕ್ಷಕರಿಗೆ ಇಷ್ಟವಾಯಿತು.

ಅದರಲ್ಲೂ ನೆನಪಿನ ಹುಡಿಗಿಯೇ ಎಂಬ ಹಾಡಿನ ಮೂಲಕ ಈ ಜೋಡಿ ಸಿನಿ ಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿತು. ಇದೀಗ ನಟಿ ಗಾನವಿ ಲಕ್ಷ್ಮಣ್ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಹೌದು ಎ.ಹರ್ಷ ನಿರ್ದೆಶನದ ವೇದ ಸಿನಿಮಾಗೆ ನಾಯಕಿಯಾಗಿ ನಟಿ ಗಾನವಿ ಲಕ್ಷ್ಮಣ್ ಆಯ್ಕೆ ಆಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಎ.ಹರ್ಷ ಕಾಂಬಿನೇಶನ್ ನ ನಾಲ್ಕನೇ ಸಿನಿಮಾ ಇದಾಗಿದೆ. ವಿಶೇಷ ಅಂದರೆ ವೇದ ಸಿನಿಮಾ ಶಿವಣ್ಣ ಅವರ 125ನೇ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಗೀತಾ ಶಿವರಾಜ್ ಕುಮಾರ್ ಅವರೇ ನಿರ್ಮಾಪಕಿಯಾಗಿದ್ದು, ಗಾನವಿ ಶಿವಣ್ಣ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಅವರಿಗೆ ತುಂಬಾ ಖುಷಿ ಆಗುತ್ತಿದ್ದು.

ಈ ಖುಷಿಗೆ ಪಾರವೇ ಇಲ್ಲ ಎಂಬಂತೆ ಗಾನವಿ ಅವರು ಎಕ್ಸೈಟ್ ಆಗಿದ್ದಾರಂತೆ. ಇನ್ನು ಗಾನವಿ ಅವರು ಹೀರೋ ಚಿತ್ರದಲ್ಲಿ ಮಾಡಿದ ನಟನೆ ಎ.ಹರ್ಷ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ಅವರ ನಟನೆಗೆ ಸೋತು ತಮ್ಮ ವೇದ ಚಿತ್ರಕ್ಕೆ ಇವರೇ ಸೂಕ್ತ ಎಂದು ನಟಿ ಗಾನವಿ ಲಕ್ಷ್ಮಣ್ ಅವರನ್ನು ವೇದ ಸಿನಿಮಾಗೆ ಆಯ್ಕೆ ಮಾಡಿಕೊಂಡೆವು ಎಂದು ನಟಿ ಗಾನವಿ ವೇದ ಚಿತ್ರಕ್ಕೆ ಹೇಗೆ ಆಯ್ಕೆ ಆದರು ಎಂದು ನಿರ್ದೇಶಕ ಎ.ಹರ್ಷ ತಿಳಿಸಿದರು. ಇನ್ನು ಈ ವೇದ ಸಿನಿಮಾಗೆ ಇದೇ ಡಿಸೆಂಬರ್ 6ರಂದು ಚಾಲನೆ ಸಿಕ್ಕಿದೆ. ವೇದ ಚಿತ್ರದಲ್ಲಿ ಗಾನವಿ, ಉಮಾಶ್ರೀ, ಅಧಿತಿ ಸಾಗರ್ ಸೇರಿದಂತೆ ಮತ್ತೊಂದಷ್ಟು ಖ್ಯಾತ ನಟರು ಕಾಣಿಸಿಕೊಳ್ಳಲಿದ್ದು, ಮ್ಯಾಜಿ಼ಕಲ್ ಕಂಪೋಸರ್ ಅರ್ಜುನ್ ಜನ್ಯಾ ಅವರ ಮ್ಯೂಸಿಕ್ ವೇದ ಚಿತ್ರಕ್ಕೆ ಇರಲಿದೆ ಎಂದು ತಿಳಿದು ಬಂದಿದೆ.