ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ 2 ಸಿನಿಮಾ ಸಕ್ಸಸ್ ಕಂಡಿದೆ. ಯಂಗ್ ಅಂಡ್ ಎನರ್ಜಿಟಿಕ್ ಹ್ಯಾಟ್ರಿಕ್ ಹೀರೋ ಅವರ 125 ನೇ ಸಿನಿಮಾ ಫಿಕ್ಸ್ ಆಗಿದೆ. ಹೌದು ಇದುವರೆಗೆ ಒಟ್ಟು 124 ಸಿನಿಮಾಗಳಲ್ಲಿ ಶಿವಣ್ಣ ಅಭಿನಯಿಸಿದ್ದು, 125 ನೇ ಸಿನಿಮಾ ರೆಡಿ ಆಗುತ್ತಿದೆ. ತಮ್ಮದೇ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವೇದ ಎಂದು ಹೆಸರಿಡಲಾಗಿದೆ. ಗೀತಾ ಪಿಕ್ಚರಸ್ ಮೂಲಕ ಗೀತಾ ಶಿವರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, 1960 ರ ಸಮಯದಲ್ಲಿ ನಡೆಯುವ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಶಿವಣ್ಣ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಒಂದು ಲುಕ್ ನಲ್ಲಿ ವಯಸ್ಸಾದವರಂತೆ ಇನ್ನೊಂದು ಶೇಡ್ ನಲ್ಲಿ ಯಂಗ್ ಆಗಿ ಕಾಣಿಸಿದ್ದಾರೆ.

ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಮೊದಲ ಬಾರಿಗೆ ಪಾವನ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಪಾವನ ಅವರ ಪಾತ್ರ ಮತ್ತು ಪಾತ್ರದ ಹೆಸರು ಏನು ಎಂಬುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಶಿವಣ್ಣ ಈ ಚಿತ್ರದಲ್ಲಿ ಡಬಲ್ ಆಕ್ಟಿಂಗ್ ಮಾಡುತ್ತಿಲ್ಲ. ಬದಲಾಗಿ 2 ಶೇಡ್ ನ ಲುಕ್ ಇದೆ. ಈಗ ಸದ್ಯಕ್ಕೆ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ಇರುವ ಲುಕ್ ಒಂದು ರೀತಿಯಾದರೆ ಯಂಗ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಇನ್ನೊಂದು ಶೇಡ್. ಯಂಗ್ ಲುಕ್ ನಲ್ಲಿ ಶಿವಣ್ಣ ತ್ರಿಲ್ಲಿಂಗ್ ಆಕ್ಷನ್ ಗಳೊಂದಿಗೆ ಏಕ್ದಂ ಖಡಕ್ ಆಗಿರುತ್ತಾರೆ. ಈ ಚಿತ್ರವು ಎಮೋಷನಲ್, ಆಕ್ಷನ್,ಡ್ರಾಮಾ ಫಿಲ್ಮ್ ಜೊತೆಗೆ ಪಕ್ಕಾ ಫ್ಯಾಮಿಲಿ ಕಾಮಿಡಿ ಸಿನಿಮಾ. 1965 ರಲ್ಲಿ ಕಾಣಸಿಗುತ್ತಿದ್ದ ಹಳ್ಳಿಗಳು ಈಗ ಸಿಗುವುದಿಲ್ಲ. ಹಾಗಾಗಿ ಸೆಟ್ನಲ್ಲಿಯೇ ಪೂರ್ತಿ ಚಿತ್ರೀಕರಣ ನಡೆಯಲಿದೆ.

ಹೀಗಾಗಿ ಸೆಟ್ ಹಾಕುವುದರಿಂದ ನಿರಂತರವಾಗಿ ಚಿತ್ರೀಕರಣ ಮಾಡುತ್ತಿಲ್ಲ. ಇದು ಶಿವಣ್ಣ ಅವರ 125 ನೇ ಸಿನಿಮಾ ಎಂಬುದು ವಿಶೇಷ. ಯುನಿವರ್ಸಲ್ ಆಗಿರೋ ಸಿನಿಮಾ ಮಾಡಬೇಕು ಎಲ್ಲರನ್ನೂ ಹಂಡ್ರೆಡ್ ಪರ್ಸೆಂಟ್ ಮೆಚ್ಚಿಸುವುದು ಕಷ್ಟದ ಕೆಲಸ. ಒಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತದೆ ಎಂದು ನಿರ್ದೇಶಕ ಹರ್ಷ ಹೇಳಿದರು. ಇನ್ನು ವೇದ ಚಿತ್ರದಲ್ಲಿ ನಟಿ ಶ್ವೇತಾ ಚಂಗಪ್ಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಹರ್ಷ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದು, ಈ ಚಿತ್ರದ ಪಾತ್ರಕ್ಕೆ ನಾನು ಸರಿಯಾಗಿ ಹೊಂದುತ್ತೇನೆ ಎಂದು ಹೇಳಿದಾಗ ನಾನು ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದೇನೆ. ಅಲ್ಲದೆ ಶಿವಣ್ಣನವರ ಜೊತೆ ಇದು ನನ್ನ ಮೊದಲ ಸಿನಿಮಾ ಎಂದು ಶ್ವೇತ ಚಂಗಪ್ಪ ಹೇಳಿದರು. ಶ್ರೀರಂಗಪಟ್ಟಣದ ಸಮೀಪದ ಹಳ್ಳಿಗಳಲ್ಲಿ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.