ಶಿವಣ್ಣ ಅವರ ಮಫ್ತಿ ಚಿತ್ರವನ್ನು ಹೋಲುತ್ತಿದೆ ತೆಲುಗಿನ ಈ ಹೊಸ ಚಿತ್ರದ ಪೋಸ್ಟರ್, ಅಭಿಮಾನಿಗಳಲ್ಲಿ ಗೊಂದಲ

ಟಾಲಿವುಡ್ ನ ಹಿರಿಯ ನಟ, ಟಾಲಿವುಡ್ ಲೆಜೆಂಡ್ ಎಂದೇ ಖ್ಯಾತಿಯಾಗಿರುವ ನಂದಮೂರಿ ಬಾಲಕೃಷ್ಣ ಅವರ ನಟನೆಯ 107ನೇ ಚಿತ್ರದ ಶೂಟಿಂಗ್ ಸ್ಟಾರ್ಟ್ ಆಗಿದೆ. ಹೌದು ನಂದಮೂರಿ ಬಾಲಕೃಷ್ಣ ಅವರು ಇದುವರೆಗೆ 106 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಬ್ಬ ನಾಯಕ ನಟ 106 ಚಿತ್ರಗಳಲ್ಲಿ ನಟಿಸಬೇಕಾದರೆ ಅವನ ಫ್ಯಾನ್ ಗಳು ಎಷ್ಟರ ಮಟ್ಟಿಗೆ ಇವರ ಬಗ್ಗೆ ಕ್ರೇಜ್ ಹೊಂದಿರಬಹುದು ಎಂಬುದು ಅರ್ಥವಾಗುತ್ತದೆ. ನಂದಮೂರಿ ಬಾಲಕೃಷ್ಣ ಅವರ 107 ನೇ ಸಿನಿಮಾಗೆ ಎನ್.ಬಿ.ಕೆ 107 ಎಂದು ಹೆಸರಿಡಲಾಗಿದೆ. ಇತ್ತೀಚಿಗೆ ಎನ್ಬಿಕೆ 107 ಚಿತ್ರದ ಮಹೂರ್ತ ನೆರವೇರಿತು. ಈ ಚಿತ್ರದ ಮುಹೂರ್ತ ನಡೆದ ದಿನವೇ ಚಿತ್ರೀಕರಣ ಸಹ ಆರಂಭವಾಗಿದೆ. ಚಿತ್ರೀಕರಣ ಆರಂಭವಾದ ಮೊದಲ ದಿನವೇ ಫೈಟ್ ಸೀನ್ ಒಂದನ್ನು ಶೂಟ್ ಮಾಡಿದ್ದಾರೆ.

ರಾಮ ಲಕ್ಷ್ಮಣ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದು, ಮೊದಲ ದಿನವೇ ಆಕ್ಷನ್ ಸೀನ್ ಶೂಟ್ ಮಾಡಿದ್ದಾರೆ. ಆಕ್ಷನ್ ಸೀನ್ ಶೂಟ್ ಆದ ಬೆನ್ನಲ್ಲೇ ನಂದಮೂರಿ ಬಾಲಕೃಷ್ಣ ಅವರ ಮೊದಲ ಗೆಟಪ್ ರಿವಿಲ್ ಆಗಿದೆ. ಬಿಡುಗಡೆಯಾದ ಮೊದಲ ಪೋಸ್ಟರ್ ನಲ್ಲಿ ಬಾಲಚಂದ್ರ ಅವರು ಬ್ಲಾಕ್ ಶರ್ಟ್ ಮತ್ತು ಪಂಚೆಯಲ್ಲಿ ಮಿಂಚುತ್ತಿದ್ದಾರೆ. ಇವರ ಲುಕ್ ನೋಡುತ್ತಿದ್ದರೆ ಸ್ಯಾಂಡಲ್ವುಡ್ ನ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಸಿನಿಮಾ ನೆನಪಿಗೆ ಬರುತ್ತದೆ. ಇನ್ನು ಈ ಚಿತ್ರದ ಮೊದಲ ಪೋಸ್ಟರನ್ನು ನೋಡಿದ ಸ್ಯಾಂಡಲ್ ವುಡ್ ಮಂದಿ ಅಯ್ಯೋ ಇದು ಶಿವಣ್ಣ ಅವರ ಮಫ್ತಿ ಸಿನಿಮಾದ ರಿಮೇಕಾ ಎಂದು ಹುಬ್ಬೇರಿಸಿ ಪ್ರಶ್ನೆ ಕೇಳುತ್ತಿದ್ದಾರೆ. ಇದು ಕನ್ನಡ ಚಿತ್ರದ ರಿಮೇಕ್ ಹೌದೋ ಅಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

%d bloggers like this: