ಶಾಕಿಂಗ್, ಕೊರೋನಾ ಸೋಂಕು ಇರುವಿಕೆಯನ್ನು ಪತ್ತೆಮಾಡುತ್ತವೆ ಅಂತೆ ಈ ನಾಯಿಗಳು

ಕೊರೋನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಗಣನೀಯ ಮಟ್ಟದಲ್ಲಿ ಏರಿಕೆಯಾಗುತ್ತಾ ಹೋಗುತ್ತಿದೆ. ಜಗತ್ತಿನ ಎಲ್ಲಾ ವಿಜ್ಞಾನಿಗಳು ಇದರ ಬಗ್ಗೆ ವಿಚಿತ್ರ ವಿಚಿತ್ರ ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತಹ ಒಂದು ಸಂಶೋಧನೆಯ ಬಗ್ಗೆ ಫಿನ್ಲೆಂಡಿನ ಸಂಶೋಧಕರು ಈಗ ಪ್ರಕಟಪಡಿಸಿದ್ದಾರೆ. ಹೌದು ಸಾಮಾನ್ಯವಾಗಿ ಕೊರೋನಾ ವೈರಸ್ ಸೋಂಕಿನ ಪತ್ತೆಗೆ ರಕ್ತಪರೀಕ್ಷೆ ಅಥವಾ ಗಂಟಲು ದ್ರವದ ಪರೀಕ್ಷೆಯ ಮೂಲಕ ಪಾಲಿಮರೇಸ್ ಚೇನ್ ರಿಯಾಕ್ಷನ್ ಅಂದರೆ ಪಿಸಿಆರ್ ಟೆಸ್ಟ್ ಅನ್ನು ಮಾಡುತ್ತಾರೆ. ಆದರೆ ಒಂದು ನಾಯಿ ಎಲ್ಲ ಟೆಸ್ಟ್ ಗಳಿಗಿಂತ ಉತ್ತಮವಾಗಿ ಮತ್ತು ನಿಖರವಾಗಿ ವೈರಸ್ ಇರುವ ಸೋಂಕನ್ನು ಪತ್ತೆ ಹಚ್ಚುವುದು ಎಂದು ಫಿನ್ಲ್ಯಾಂಡಿನ ಸಂಶೋಧಕರು ಹೇಳಿದ್ದಾರೆ.

ಹೌದು ಆ ನಾಯಿ ಹೆಸರು ಸ್ನಿಫರ್. ಇದರ ಮೂಗು ಅಷ್ಟರಮಟ್ಟಿಗೆ ಸೂಕ್ಷ್ಮವಾಗಿರುತ್ತದೆ ಅಂತೆ. ಕೇವಲ ಕೊರೋನಾ ಪೀಡಿತನ ಮೂತ್ರದ ವಾಸನೆ ನೋಡಿಯೇ ಆ ವ್ಯಕ್ತಿ ಪಾಸಿಟಿವ್ ಅಥವಾ ನೆಗೆಟಿವ್ ಎಂದು ಗುರುತಿಸಬಲ್ಲವು. ಫಿನ್ಲೆಂಡ್ ದೇಶದ ಹೆಲ್ಸಂಕಿ ಯುನಿವರ್ಸಿಟಿ ಸಂಶೋಧಕರು ತರಬೇತಿ ಕೊಡಲ್ಪಟ್ಟ ಸ್ನಿಫರ್ ಜಾತಿಯ ನಾಯಿಗಳಿಂದ ಇದು ಸಾಧ್ಯ ಎಂಬ ಅಚ್ಚರಿಯ ಮಾಹಿತಿಯೊಂದನ್ನು ತಿಳಿಸಿದ್ದಾರೆ. ಈಗಾಗಲೇ ಇದು ಪ್ರಯತ್ನದ ಹಂತದಲ್ಲಿದೆ ಮತ್ತು ಇದನ್ನು ನಂಬಬಹುದು ಎಂದು ವಿಜ್ಞಾನಿಗಳ ತಂಡದ ಜಾಕ್ಮನ್ ಎಂಬ ಸಂಶೋಧಕರು ಪ್ರತಿಪಾದಿಸಿದ್ದಾರೆ.

%d bloggers like this: