ಶೂಟಿಂಗ್ ಆರಂಭವಾಗುವ ಮೊದಲೇ ಈ ಚಿತ್ರಕ್ಕೆ 400 ಕೋಟಿ ಆಫರ್

ತೆಲುಗು ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ ಪುಷ್ಪ ಸಿನಿಮಾ ಅದ್ದೂರಿ ಪ್ರದರ್ಶನ ನೀಡಿದೆ. ಪ್ರೇಕ್ಷಕರು ಸಿನಿಮಾ ಮೇಲಿಟ್ಟಿದ್ದ ನಿರೀಕ್ಷೆಯನ್ನು ಸ್ವಲ್ಪ ಹುಸಿ ಮಾಡಿದ ಪುಷ್ಪ ಸಿನೆಮಾ ಕಲೆಕ್ಷನ್ನಲ್ಲಿ ಮಾತ್ರ ಕಾಂಪ್ರಮೈಸ್ ಆಗಿಲ್ಲ. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಪುಷ್ಪ ಸಿನಿಮಾ ಕೇವಲ ತೆಲಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಸದ್ದು ಮಾಡಿದೆ. ಬಾಲಿವುಡ್ನಲ್ಲಿ ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಮೊದಲ ಚಿತ್ರವಾಗಿದೆ. ಈ ಸಿನೆಮಾದ ಅದ್ದೂರಿತನ ದೃಶ್ಯ ವೈಭವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪುಷ್ಪ ಸಿನಿಮಾ ಬಾಕ್ಸಾಫೀಸ್ ನಲ್ಲಿ ಇದುವರೆಗೆ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಒಟಿಟಿಯಲ್ಲಿಯೂ ಕೂಡ ಪುಷ್ಪ ಸಿನಿಮಾ ರಿಲೀಸ್ ಆಗಿದ್ದು, ಇನ್ನೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ನೀಡುತ್ತಿದೆ. ವಿಶ್ವಮಟ್ಟದಲ್ಲಿ ಇಷ್ಟು ದೊಡ್ಡ ಗಳಿಕೆ ಮಾಡಿರುವ ಪುಷ್ಪ ಸಿನಿಮಾ, ಇದೀಗ ಪುಷ್ಪ 2 ಸದ್ದು ಮಾಡಲು ರೆಡಿ ಆಗುತ್ತಿದೆ. ಪುಷ್ಪ ಸಿನಿಮಾದ ಅದ್ದೂರಿತನ, ದೃಶ್ಯವೈಭವ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಪುಷ್ಪ 2 ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಪುಷ್ಪ ಚಿತ್ರದ ಮೂಲಕ ನಟ ಅಲ್ಲು ಅರ್ಜುನ್ ಇದೇ ಮೊದಲ ಬಾರಿಗೆ ಬಾಲಿವುಡ್ಗೆ ಕಾಲಿಟ್ಟಂತಾಗಿದ್ದು, ಮೊದಲ ಚಿತ್ರದಲ್ಲಿ ಯಶಸ್ಸು ಕಂಡಿದ್ದಾರೆ. ಈ ಸಿನೆಮಾ ಹಿಂದಿ ಗಲ್ಲಾ ಪೆಟ್ಟಿಗೆಯಲ್ಲಿ 91 ಕೋಟಿ ರೂಪಾಯಿ ಬಾಚಿಕೊಂಡಿದೆ.

ಕೋವಿಡ್ ಕಾಣಿಸಿಕೊಂಡ ನಂತರದಲ್ಲಿ ಥಿಯೇಟರ್ ಗಳು ಬಂದ್ ಆದ ಬೆನ್ನಲ್ಲಿ ಒಟಿಟಿ ಯದ್ದೇ ಹವಾ. ಬಹುಬೇಗನೇ ಒಟಿಟಿ ವ್ಯಾಪ್ತಿ ಹೆಚ್ಚುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳ ಮೇಲೆ ಒಟಿಟಿ ಸಂಸ್ಥೆಗಳು ಕಣ್ಣಿಡುತ್ತಿವೆ. ಥಿಯೇಟರ್ ಗು ಮೊದಲೇ ಸಿನಿಮಾಗಳು ತಮ್ಮ ಪ್ಲಾಟ್ ಫಾರಂ ನಲ್ಲಿ ರಿಲೀಸ್ ಆದರೆ, ಅದಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತದೆ ಎಂಬುದು ಒಟಿಟಿ ಸಂಸ್ಥೆಗಳ ನಿಲುವು. ಪುಷ್ಪ 2 ಸಿನಿಮಾದ ಶೂಟಿಂಗ್ ಇನ್ನೇನು ಶುರುವಾಗಲಿದೆ ಅದಕ್ಕೂ ಮೊದಲೇ ಈ ಚಿತ್ರಕ್ಕೆ 400 ಕೋಟಿ ರೂಪಾಯಿಯ ಬೇಡಿಕೆ ಬಂದಿದೆ.

ಪುಷ್ಪ 2 ಸಿನಿಮಾಕ್ಕೆ 400 ಕೋಟಿ ರೂಪಾಯಿ ಬೇಡಿಕೆ ಬಂದದ್ದು ಒಟಿಟಿಯಿಂದ ಅಲ್ಲ. ಚಿತ್ರಮಂದಿರದ ಹಕ್ಕನ್ನು ನೀಡುವಂತೆ ಕೋರಿ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಾಲ್ಕು ನೂರು ಕೋಟಿ ರೂಪಾಯಿ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಮಾಡಲು ಚಿತ್ರದ ಥಿಯೇಟರ್ ಹಕ್ಕುಗಳನ್ನು ನೀಡುವಂತೆ ಉತ್ತರ ಭಾರತದ ನಿರ್ಮಾಣ ಸಂಸ್ಥೆ ಮುಂದೆ ಬಂದಿದ್ದು ದೊಡ್ಡ ಮೊತ್ತದ ಆಫರ್ ನೀಡಿದೆ. ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಟ್ಟಾರೆಯಾಗಿ ಮೊದಲನೆಯ ಅವತರಣಿಕೆಗಿಂತ ಎರಡನೇ ಅವತರಣಿಕೆ ಸದ್ದು ಮಾಡುವುದರಲ್ಲಿ ಎರಡು ಮಾತಿಲ್ಲ.

%d bloggers like this: