ಶೂಟಿಂಗ್ ವೇಳೆ ನಿಯಂತ್ರಣ ತಪ್ಪಿ ಕಾಲಿಗೆ ಪೆಟ್ಟು ಮಾಡಿಕೊಂಡ ಕನ್ನಡ ನಟಿ

ಕನ್ನಡ ಚಿತ್ರರಂಗದಲ್ಲಿ ಇಂದಿನ ಅನೇಕ ಯುವ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ನಿಜ ಜೀವನದ ವೈಯಕ್ತಿಕ ವಿಚಾರ ಮತ್ತು ವ್ಯಕ್ತಿತ್ವದ ಮೂಲಕ ಆಗಾಗ ಸುದ್ದಿಯಾಗುತ್ತಲೆ ಇರುತ್ತಾರೆ. ಅಂತಹ ಸೆಲೆಬ್ರಿಟಿಗಳ ಪೈಕಿ ನಟಿ ಸಂಯುಕ್ತಾ ಹೆಗಡೆ ಕೂಡ ಪ್ರಮುಖರು. ಇದೀಗ ಸಂಯುಕ್ತಾ ಹೆಗಡೆ ಅವರು ಸುದ್ದಿಯಾಗಿರುವುದು ಕಾಲಿಗೆ ಪೆಟ್ಟಾಗಿ. ಹೌದು ನಟಿ ಸಂಯುಕ್ತಾ ಹೆಗಡೆ ಅವರು ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ರಕ್ಷಿತ್ ಶೆಟ್ಟಿ ಅವರ ಜೊತೆ ಅಭಿನಯಿಸಿದ ನಟಿ ಸಂಯುಕ್ತಾ ಹೆಗಡೆ ತಮ್ಮ ಚೊಚ್ಚಲ ಚಿತ್ರದಲ್ಲೇ ತನ್ನ ಚಿನುಕುರುಳಿ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ರು. ಈ ಚಿತ್ರದ ಯಶಸ್ಸಿನ ನಂತರ ಸಂಯುಕ್ತಾ ಅವರಿಗೆ ತೆಲುಗು, ತಮಿಳು ಸಿನಿಮಾದ ಜೊತೆಗೆ ಹಿಂದಿ ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋಗಳಲ್ಲಿಯೂ ಕೂಡ ಸ್ಪರ್ಧಿಸಿ ಅಲ್ಲಿಯೂ ಕೂಡ ಹೆಸರು ಮಾಡಿದರು. ಅದಾದ ನಂತರ ಕಾಲೇಜ್ ಕುಮಾರ, ಒಮ್ಮೆ ನಿಶಬ್ದ ಒಮ್ಮೆ ಯುದ್ದ, ತುರ್ತು ನಿರ್ಗಮನ ಅಂತಹ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದರ ಜೊತೆಗೆ ಇದೀಗ ಕ್ರೀಮ್ ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಈ ಕ್ರೀಮ್ ಚಿತ್ರದ ಸಾಹಸ ದೃಶ್ಯ ಸನ್ನಿವೇಶ ಚಿತ್ರೀಕರಣ ನಡೆಯಬೇಕಾದರೆ ನಟಿ ಸಂಯುಕ್ತಾ ಹೆಗಡೆ ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಸಾಹಸ ದೃಶ್ಯದಲ್ಲಿ ಸಂಯುಕ್ತಾ ಹೆಗಡೆ ಕಾಲೆತ್ತಿ ಹೊಡೆಯುವ ದೃಶ್ಯ ಇರುತ್ತದೆ. ಇದೇ ಸಂಧರ್ಭದಲ್ಲಿ ಸಂಯುಕ್ತಾ ಹೆಗಡೆ ಅವರ ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದೆ. ಸಂಯುಕ್ತಾ ಪೆಟ್ಟು ಬಿದ್ದ ತಕ್ಷಣ ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಕೂಗಿಗೆ ಭಯಬಿದ್ದ ಚಿತ್ರತಂಡ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕ್ರೀಮ್ ಚಿತ್ರಕ್ಕೆ ಅಗ್ನೀ ಶ್ರೀಧರ್ ಅವರ ಕಥೆಯಿದ್ದು, ಅಭಿಷೇಕ್ ಬಸಂತ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಸಂಯುಕ್ತಾ ಹೆಗ್ಡೆ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸಲಹೆಯ ಮೇರೆಗೆ ಹದಿನೈದು ದಿನಗಳ ವಿಶ್ರಾಂತಿ ಇರಲಿದ್ದಾರೆ. ನಟಿ ಸಂಯುಕ್ತಾ ಹೆಗಡೆ ತಮ್ಮ ನಟನೆ ಮತ್ತು ನೇರ ನಿಷ್ಟುರ ವ್ಯಕ್ತಿತ್ವ ದಮೂಲಕ ತನ್ನದೇಯಾದ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ನಟಿ ಸಂಯುಕ್ತಾ ಹೆಗಡೆ ಅವರಿಗೆ ಶೂಟಿಂಗ್ ನಲ್ಲಿ ಈ ರೀತಿ ಅವಘಡ ಸಂಭವಿಸಿರುವುದಕ್ಕೆ ಅವರ ಅಭಿಮಾನಿಗಳಿಗೆ ಮತ್ತು ಅವರ ಗೆಳೆಯರ ಬಳಗ, ಕುಟುಂಬದವರಿಗೆ ದುಃಖ ಪಡುವಂತಾಗಿದೆ.

%d bloggers like this: