ಶೋ ಅಲ್ಲಿ ಗೆದ್ದು ರಾಜಾ ರಾಣಿ ಪಟ್ಟ ಗಳಿಸಿದ ಕನ್ನಡದ ಪ್ರಸಿದ್ಧ ಕಿರುತೆರೆ ಜೋಡಿ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ರಾಜಾ ರಾಣಿ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ, ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯ ಬೊಂಬೆ ಪಾತ್ರದ ಖ್ಯಾತಿಯ ನಟಿ ನೇಹಾ ಗೌಡ ದಂಪತಿ ವಿಜೇತರಾಗಿದ್ದಾರೆ. ಹೌದು ನೂತನ ದಂಪತಿಗಳು ಪರಸ್ಪರ ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದಾರೆ ಎಂಬುದರ ಮೇರೆಗೆ ಒಂದಷ್ಟು ವಿವಿಧ ಪ್ರಶ್ನೆ ಮತ್ತು ಆಟಗಳನ್ನು ಆಡಿಸುವುದರ ಮೂಲಕ ರಾಜಾ ರಾಣಿ ಶೋ ಉತ್ತಮ ಜನ ಮೆಚ್ಚುಗೆ ಪಡೆದಿತ್ತು. ಈ ಕಾರ್ಯಕ್ರಮದ ಫಿನಾಲೆಗೆ ವಿಶೇಷ ಅತಿಥಿಯಾಗಿ ನಟಿ ಶುಭಪೂಂಜಾ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 8ರ ವಿಜೇತ ಮಂಜು ಪಾವಗಡ ಆಗಮಿಸಿ ಹಾಡು ಹಾಡಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

ಜೊತೆಗೆ ಈ ಕಾರ್ಯಕ್ರಮದ ಸ್ಪರ್ಧಿಗಳಿಗೆ ವಿವಿಧ ಮಾದರಿಯ ಪ್ರಶಸ್ತಿಗಳನ್ನು ಕೂಡ ನೀಡಿದ್ದಾರೆ. ತರಲೆ, ತಮಾಷೆಯಲ್ಲಿ ನೆನಪಿರಲಿ ಎಂಬ ಅವಾರ್ಡ್ ನೀಡಿದರು. ಈ ಅವಾರ್ಡ್ ನಲ್ಲಿ ಚಂದನ್ ಶೆಟ್ಟಿ ಅವರಿಗೆ ಅತೀ ನೊಂದ ವ್ಯಕ್ತಿ ಎಂಬ ಅವಾರ್ಡ್ ನೀಡಲಾಯಿತು. ರೂಪಾ ಮತ್ತು ಪ್ರಶಾಂತ್ ದಂಪತಿಗಳಿಗೆ ಕ್ರೈಯಿಂಗ್ ಜೋಡಿ ಅವರ್ಡ್ ಸೇರಿದಂತೆ ಪ್ರತಿ ಸ್ಪರ್ಧಿಗಳಿಗೂ ವಿಭಿನ್ನ ರೀತಿಯ ಅವಾರ್ಡ್ ನೀಡಲಾಗಿದೆ. ಈ ರಾಜಾರಾಣಿ ಕಾರ್ಯಕ್ರಮದಲ್ಲಿ ನಟಿ ಹರಿಣಿ ಮತ್ತು ಶ್ರೀಕಾಂತ್ ದಂಪತಿಗಳು ನಾಲ್ಕನೇ ಸ್ಥಾನ ಪಡೆದುಕೊಂಡರೆ, ಮೂರನೇ ಸ್ಥಾನವನ್ನು ಚಂದನ್ ಶೆಟ್ಟಿ ಮತ್ತು ನಿವೇದಿತಾ ದಂಪತಿಗಳು ಪಡೆದುಕೊಂಡರು. ಎರಡನೇ ಸ್ಥಾನ ಪಡೆದು ಇಶಿತಾ ಮುರುಗ ದಂಪತಿಗಳು ರನ್ನರ್ ಅಪ್ ಆದರು. ಇನ್ನು ನಟಿ ನೇಹಾಗೌಡ ಮತ್ತು ಚಂದನ್ ದಂಪತಿಗಳು ರಾಜಾ ರಾಣಿ ಕಿರೀಟವನ್ನು ತಮ್ಮದಾಗಿಸಿಕೊಂಡು ವಿಜೇತರಾಗಿದ್ದಾರೆ.

ಇನ್ನು ನಟಿ ನೇಹಾಗೌಡ ಇತ್ತೀಚೆಗೆ ಇದೇ ಶೋನಲ್ಲಿ ಹೆಣ್ಣು ಮಗುವೊಂದನ್ನ ದತ್ತು ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ನಟಿ ನೇಹಾಗೌಡ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯಲ್ಲಿ ಬೊಂಬೆ ಎಂಬ ಹೆಸರಿನಿಂದಲೇ ಅಪಾರ ಜನಪ್ರಿಯತೆ ಪಡೆದಿದ್ದರು. ನೇಹಾ ಗೌಡ ಸ್ಯಾಂಡಲ್ವುಡ್ನ ಪ್ರಸಿದ್ಧ ನಟಿಯಾದ ಸೋನುಗೌಡ ಅವರ ಸೋದರಿ. ಅಕ್ಕನಂತೆಯೇ ಬಣ್ಣದ ಲೋಕದಲ್ಲಿ ನೇಹಾಗೌಡ ಕೂಡ ಹೆಸರು ಮಾಡಿದ್ದಾರೆ. ಕನ್ನಡ ಕಿರುತೆರೆ ಅಲ್ಲದೆ ತಮಿಳು ಮತ್ತು ತೆಲುಗು ಧಾರಾವಾಹಿಯಲ್ಲಿಯೂ ಕೂಡ ನಟಿಸಿದ್ದಾರೆ. ತೆಲುಗಿನ ಸ್ವಾತಿ ಚಿನುಕುಲು ಎಂಬ ಧಾರಾವಾಹಿಯಲ್ಲಿ ಮೈಥಿಲಿ ಪಾತ್ರದಲ್ಲಿ ನಟಿಸಿ ಅಲ್ಲಿಯೂ ಕೂಡ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನೇಹಾಗೌಡ 2018ರಲ್ಲಿ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.

%d bloggers like this: