ಶ್ರೀಮಂತರ ಪಟ್ಟಿಯಿಂದ ಅತಿ ಕೆಳಗೆ ಹೋದ ಮುಖೇಶ್ ಅಂಬಾನಿ

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸದ್ಯಕ್ಕೆ ಜಗತ್ತು ನಿಂತಿರುವುದು ಅಕ್ಷರಶ ದುಡ್ಡಿನ ಮೇಲೆ ಎಂದರೆ ಅದರಲ್ಲಿ ಯಾವ ಸಂಶಯವೂ ಇಲ್ಲ. ಕೆಲವು ಜನರಿಗೆ ದಿನನಿತ್ಯದ ಹೊಟ್ಟೆಪಾಡಿಗಾಗಿಯೇ ದುಡಿಯುವುದು ಮತ್ತು ಗಳಿಸುವುದು ಕಷ್ಟವಾಗಿರುತ್ತದೆ ಆದರೆ ಇನ್ನೂ ಕೆಲವು ಜನರಿಗೆ ಕೋಟಿಕೋಟಿ ಹಣ ಲೆಕ್ಕಕ್ಕೆ ಬರುವುದಿಲ್ಲ. ಅದರಲ್ಲೂ ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥರಾಗಿರುವ ಮುಖೇಶ್ ಅಂಬಾನಿ ಅವರು ನಿಜಕ್ಕೂ ಲಕ್ಷ್ಮಿಪುತ್ರನೆ ಎನ್ನಬಹುದು. ಹೌದು ಭಾರತ ದೇಶದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಹೊಂದಿರುವ ಮುಖೇಶ್ ಅಂಬಾನಿಯವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದರು.

ಹೌದು 2020 ಜಗತ್ತಿಗೆ ಎಲ್ಲಾ ರೀತಿಯಿಂದ ಕಂಟಕವಾಗಿ ಕಾಡಿದ್ದರೆ ಮುಖೇಶ್ ಅಂಬಾನಿ ಅವರು ಮಾತ್ರ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಪಟಪಟನೆ ನಾಲ್ಕನೇ ಸ್ಥಾನಕ್ಕೆ ಏರಿ ಕುಂತರು. ಬ್ಲೂಮ್ ಬರ್ಗ್ ಎಂಬ ಸಂಸ್ಥೆ ಜನೆವರಿಯಲ್ಲಿ ಬಿಡುಗಡೆ ಮಾಡಿದ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯವರು ನಾಲ್ಕನೆಯ ಸ್ಥಾನ ಪಡೆದು ರಾರಜಿಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ವಿಶ್ವದ ಅತಿ ದೊಡ್ಡ ಕಂಪನಿಗಳಾದ ಗೂಗಲ್ ಹಾಗೂ ಫೇಸ್ಬುಕ್ ಗಳು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರಿಯಲ್ಲಿ ಹೂಡಿಕೆ ಮಾಡಿದ್ದು.

ಆದರೆ ಇತ್ತೀಚೆಗೆ ಬಿಡುಗಡೆಯಾದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ಟೆನ್ ಹೆಸರುಗಳಲ್ಲಿ ಅಂಬಾನಿ ಅವರ ಹೆಸರೇ ಇಲ್ಲ. ಹೌದು ಇದೇ ವರ್ಷಾರಂಭದಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದ ಅಂಬಾನಿ ದಿಡೀರನೆ ಕುಸಿತ ಕಂಡು ಈಗ ಹನ್ನೊಂದನೆಯ ಸ್ಥಾನದಲ್ಲಿದ್ದಾರೆ. ಅವರ ಆಸ್ತಿಯ ಮೌಲ್ಯ 6.6 ಲಕ್ಷಕೋಟಿ ಗಳಿಂದ 5.6 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ರಿಲಯನ್ಸ್ ಶೇರುಗಳ ಹೊಸ ತಿದ್ದುಪಡಿಯಿಂದಾಗಿ ಈ ಹಠಾತ್ ಕುಸಿತ ಕಂಡು ಬಂದಿದೆ ಎನ್ನಲಾಗುತ್ತಿದೆ. ರಿಲಯನ್ಸ್ ಇಂಡಸ್ಟ್ರಿಯ ಒಂದು ಶೇರಿನ ಮೌಲ್ಯದ ಶೇಕಡ 16 ರಷ್ಟು ಇಳಿಕೆಯಾಗಿದ್ದು ಅಂಬಾನಿಯವರ ಸ್ಥಾನ ಕಡಿಮೆಯಾಗಲು ಮುಖ್ಯ ಕಾರಣವಾಗಿದೆ.

%d bloggers like this: