ಶುಕ್ರವಾರದಂದು ಬಂದ ಶುಭ ಸುದ್ದಿ, ನಮ್ಮಲ್ಲೇ ತಯಾರಾಗಲಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ

ಇಡೀ ಜಗತ್ತು ಕೊರೋನಾದಿಂದ ಅಕ್ಷರಶಹ ನಲುಗಿಹೋಗಿದೆ. ಮಿತಿಮೀರಿ ಕೈ ತಪ್ಪಿರುವ ಸಾವು ನೋವುಗಳಿಂದ ಭೂಮಿ ಜರ್ಜರಿತವಾಗಿದೆ. ಯಾವಾಗ ಲಸಿಕೆ ಬರುತ್ತದೆಯೋ ಎಂದು ಪ್ರತಿಯೊಬ್ಬರೂ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದು ಅಂದರೆ ಶುಕ್ರವಾರದಂದು ಶುಭಸುದ್ದಿ ಒಂದು ಸಿಕ್ಕಿದೆ. ಅದೇನು ಎಂಬ ಕುತೂಹಲ ನಿಮ್ಮಲ್ಲಿ ಇದ್ದರೆ ಮುಂದೆ ಓದಿ. ಹೌದು ಈಗ ಕೊರೋನ ವೈರಸ್ ಗೆ ನಮ್ಮಲ್ಲೆ ತಯಾರಿಸಲಾದ ಲಸಿಕೆ ಒಂದು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಅತ್ಯುತ್ತಮ ಔಷಧ ತಯಾರಿಕಾ ಕಂಪನಿಗಳಲ್ಲಿ ಒಂದಾದ ಸಿಪ್ಲಾ ವು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ಅಭಿವೃದ್ಧಿಪಡಿಸಿರುವಂತಹ ಫಾವಿಪಿರವಿರ್ ಎಂಬ ಔಷಧಿಯನ್ನು ಬಿಡುಗಡೆ ಮಾಡುತ್ತಿದೆ.

ಅದರಲ್ಲೂ ಈ ಔಷಧಿಯು ಪರಿಣಾಮಕಾರಿ ರೀತಿಯಲ್ಲಿ ವೈರಸ್ಸಿನ ವಿರುದ್ಧ ಹೋರಾಡುವುದಲ್ಲದೆ ತುಂಬಾ ಅಗ್ಗದ ಬೆಲೆಯಲ್ಲಿ ಕೂಡ ಲಭ್ಯವಾಗಲಿದೆ. ಈ ಔಷಧವನ್ನು ಮೂಲತಹ ಜಪಾನ್ ದೇಶದ ಫ್ಯೂಸಿಫಾರ್ಮ್ ಅಭಿವೃದ್ಧಿಪಡಿಸಿದೆ. ಅಲ್ಲಿ ಇದು ಮಧ್ಯಮ ರೀತಿಯ ರೋಗಲಕ್ಷಣಗಳನ್ನು ಹೊಂದಿರುವಂತಹ ರೋಗಿಗಳಲ್ಲಿ ಪ್ರಯೋಗಿಸಿದಾಗ ಉತ್ತಮ ಫಲಿತಾಂಶ ತೋರಿಸಿದೆ ಎನ್ನಲಾಗುತ್ತಿದೆ. ಈಗ ಸಿಪ್ಲ ಕಂಪನಿ ಔಷಧಿಯನ್ನು ತಯಾರಿಸಲು ಪ್ರಾರಂಭ ಮಾಡಿದೆ ಮತ್ತು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮತಿಯನ್ನು ಕೂಡ ಕೋರಲಾಗಿದೆ. ಇದು ತುಂಬಾ ಅಗ್ಗವಾಗಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಔಷಧಿಗಳನ್ನು ಉತ್ಪಾದಿಸಲಾಗುವುದು ಎನ್ನಲಾಗುತ್ತಿದೆ.

%d bloggers like this: