ಸಿದ್ಧವಾಯಿತು ರಶ್ಮಿಕಾ ಮಂದಣ್ಣ ಅವರ ಮೊಟ್ಟಮೊದಲ ಬಾಲಿವುಡ್ ಚಿತ್ರ

ಕಿರಿಕ್ ಪಾರ್ಟಿ ಖ್ಯಾತಿಯ ನಮ್ಮ ಕೊಡಗಿನ ಬೆಡಗಿಯ ಅದೃಷ್ಟ ಕುಲಾಯಿಸಿದಂತೆ ಕಾಣುತ್ತಿದೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದೆ ಇಟ್ಟಿದ್ದು ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಈ ಬಣ್ಣದ ಲೋಕವೇ ಹಾಗೆ. ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಒಂದು ಚಿತ್ರ ಯಶಸ್ಸು ಕಂಡರೆ ಸಾಕು. ಇನ್ನು ಸ್ಟಾರ್ ಪಟ್ಟ ಮೂಡಿಗೆರಿದರಂತೂ ಮುಗಿಯಿತು. ಈಗ ರಶ್ಮಿಕಾ ಅವರು ಕೂಡ ಯಶಸ್ಸಿನ ಶಿಖರ ತಲುಪುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಕ್ರಷ್ ಎಂದೇ ಹೆಸರಾಗಿದ್ದ ರಶ್ಮಿಕಾ ಮಂದಣ್ಣ, ದಕ್ಷಿಣ ಭಾರತದ ಅನೇಕ ಭಾಷೆಗಳಲ್ಲಿಯೂ ನಟಿಯಾಗಿ ನಟಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡವರು.

ಕನ್ನಡದ, ತಮಿಳು, ತೆಲುಗು ಭಾಷೆಯ ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ರಶ್ಮಿಕಾ ಅವರಿಗೆ ಈ ಅದೃಷ್ಟ ದೊರಕಿದೆ. ಪುಷ್ಪಾ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿದ ರಶ್ಮಿಕಾ, ಪುಷ್ಪ ಟು ಚಿತ್ರದಲ್ಲೂ ಮಿಂಚಲಿದ್ದಾರೆ. ಇನ್ನು ತಮಿಳು ಚಿತ್ರರಂಗದಲ್ಲೂ ರಶ್ಮಿಕ ಅವರದೇ ಹವಾ. ಇತ್ತೀಚೆಗೆ ದಳಪತಿ ವಿಜಯ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ.

ಏಕೆಂದರೆ ಇವರು ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿವೆ. ಇದೀಗ ರಶ್ಮಿಕಾ ಅವರ ಸಿನಿ ಕೇರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲು ಎಂಬುವಂತೆ ಬಾಲಿವುಡ್ ಗೂ ಕಿರಿಕ್ ಬೆಡಗಿ ಎಂಟ್ರಿಕೊಟ್ಟಾಗಿದೆ. ಹೌದು ಸಿದ್ಧಾರ್ಥ್ ಮಲ್ಹೋತ್ರ ನಾಯಕನಟರಾಗಿ ಅಭಿನಯಿಸುತ್ತಿರುವ ಮಿಷನ್ ಮಜನೂ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರವಾಗಿದೆ. ಶಂತನು ಬಾಗಚಿ ಅವರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪರ್ಮಿತ್ ಸೇಟಿ, ಜಾಕಿರ್ ಹುಸೇನ್, ಶರೀಫ್ ಹಶ್ಮಿ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಮಿಷನ್ ಮಜನೂ ಚಿತ್ರವನ್ನು ರೂನಿ ಸೋಲಿ, ಅಮರ್ ಬುಟಾಲಾ ಹಾಗೂ ಗರಿಮಾ ಮೆಹತಾ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಡಬ್ಬಿಂಗ್ ಹಾಗೂ ಎಡಿಟಿಂಗ್ ಕೆಲಸಗಳು ಮಾತ್ರ ಬಾಕಿ ಇದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡ ಚಿತ್ರತಂಡ ಜೂನ್ 10 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಹ ಗೆಟ್ ರೆಡಿ, ಖಂಡಿತವಾಗಿ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾ ಇದು ಎಂದು ಟ್ವೀಟ್ ಮಾಡಿದ್ದಾರೆ.

%d bloggers like this: