ಸಿಂಹವನ್ನು ದತ್ತು ತೆಗೆದುಕೊಂಡ ಕನ್ನಡದ ಮೊದಲ ಹಾಗೂ ಏಕೈಕ ನಟ

ಕನ್ನಡ ಚಿತ್ರರಂಗದ ಚಾಕ್ಲೇಟ್ ವಿಲನ್ ಅಂತ ಕರೆಸಿಕೊಳ್ಳುವ ನಟ ವಸಿಷ್ಠ ಸಿಂಹ ತಮ್ಮ ಕಂಚಿನ ಕಂಠ, ಹಾಗೂ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಹೆಂಗಳೆಯರ ಮನಗೆದ್ದಿದ್ದಾರೆ. ಟಗುರು ಚಿತ್ರದ ಚಿಟ್ಟೆ ಪಾತ್ರಕ್ಕೆ ಜೀವತುಂಬಿ ನಟಿಸಿ ಚಿಟ್ಟೆ ಅಂತಾನೇ ಹೆಸರುವಾಸಿಯಾಗಿರುವ ವಸಿಷ್ಠಸಿಂಹ ಹೊಸ ವರ್ಷದಂದು ಸಿಂಹ ವನ್ನು ದತ್ತು ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ನಟ ನಟಿಯರು ಪ್ರಾಣಿಪ್ರಿಯರು ಅದರಲ್ಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಮೃಗಾಲಯದಲ್ಲಿ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ, ಜೊತೆಗೆ ಕಾಮಿಡಿ ಸ್ಟಾರ್ ನಟ ಚಿಕ್ಕಣ್ಣ ಕೂಡ ಮೃಗಾಲಯದಲ್ಲಿ ಪ್ರಾಣಿಯೊಂದನ್ನು ದತ್ತು ತೆಗೆದುಕೊಂಡಿದ್ದಾರೆ. ಇದೀಗ ನಟ ವಸಿಷ್ಠ ಸಿಂಹ ಕೂಡ ಆ ಸಾಲಿಗೆ ಸೇರಿಕೊಂಡಿದ್ದಾರೆ.

ಹೊಸ ವರ್ಷದ ಅಂಗವಾಗಿ ಬೆಂಗಳೂರಿನ ರಾಷ್ಟ್ರೀಯ ಬನ್ನೇರುಘಟ್ಟ ಜೈವಿಕ ಕೇಂದ್ರಕ್ಕೆ ಭೇಟಿಕೊಟ್ಟಿದ್ದ ವಸಿಷ್ಠ ಸಿಂಹ ಮೃಗಾಲಯದಲ್ಲಿದ್ದ ಎಂಟು ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಈ ಸಿಂಹಕ್ಕೆ ತಮ್ಮ ತಂದೆಯ ಹೆಸರಾದ ವಿಜಯ ನರಸಿಂಹ ಎಂದು ಹೆಸರಿಟ್ಟಿದ್ದಾರೆ. ಈ ಎಂಟುತಿಂಗಳ ಸಿಂಹ ವಿಶೇಷವಾಗಿ ಕಂಡಿದ್ದು ಡಾ.ರಾಜ್ ಕುಮಾರ್ ಅವರು ಹುಟ್ಟಿದ ಏಪ್ರೀಲ್ 24 ರಂದು ಈ ಸಿಂಹವು ಹುಟ್ಟಿದ್ದಾಗಿದೆ, ವಸಿಷ್ಠ ಸಿಂಹ ಸಿಂಹವನ್ನು ದತ್ತು ಪಡೆದಿರುವ ಮೊದಲ ನಟರಾಗಿದ್ದಾರೆ. ವಸಿಷ್ಠ ಅವರನ್ನು ಬಿಟ್ಟರೆ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಹಸು, ಕುದುರೆಯಂತಹ ಹಲವಾರು ಪ್ರಾಣಿಗಳ ದಂಡೇ ಇದೆ.

%d bloggers like this: