ಸ್ನಾನ ಮಾಡುವಾಗ ಹುಡುಗಿಯರು ಹೆಚ್ಚಾಗಿ ಈ ನಾಲ್ಕು ತಪ್ಪುಗಳನ್ನು ಮಾಡಲೇಬೇಡಿ

ಎಲ್ಲರೂ ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಗೊತ್ತಿದ್ದು ಅಥವಾ ಗೊತ್ತಿರೋದು ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಹುಡುಗಿಯರು ತಮ್ಮ ಸೌಂದರ್ಯ ಸಂಬಂಧಿಸಿದ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿರುತ್ತಾರೆ. ಆದರೂ ಕೂಡ ಕೆಲವೊಮ್ಮೆ ಮಾಹಿತಿಗಳ ಜ್ಞಾನವಿಲ್ಲದೆ ಕೆಲವು ತಪ್ಪುಗಳನ್ನು ಮಾಡಿ ಸಮಸ್ಯೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಸ್ನಾನ ಮಾಡುವಾಗ ಈಗ ನಾವು ಹೇಳುವ 4 ತಪ್ಪುಗಳನ್ನು ನೀವು ಮಾಡುತ್ತಿದ್ದರೆ ಇಂದೇ ಅವುಗಳನ್ನು ಬಿಟ್ಟು ಬಿಡಿ. ಮೊದಲನೆಯದು ಅತಿ ಬಿಸಿಯಾದ ಅಥವಾ ಅತಿ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದು, ಹೌದು ಹುಡುಗಿಯರು ಚಳಿಗಾಲವಿದ್ದರೆ ತುಂಬಾ ಬಿಸಿನೀರಿನಿಂದ ಹಾಗೆ ಬೇಸಿಗೆಯಲ್ಲಿ ಅತಿ ತಣ್ಣನೆಯ ನೀರಿನಿಂದ ಸ್ನಾನ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಈ ರೀತಿಯಾಗಿ ನಮ್ಮ ಚರ್ಮ ಬಯಸುವ ಅವಶ್ಯಕತೆಗಿಂತ ಹೆಚ್ಚಿನ ತನ್ನಣೆಯ ಅಥವಾ ಬಿಸಿಯಾದ ನೀರನ್ನು ಸ್ನಾನಮಾಡುವುದರಿಂದ ಸ್ಕಿನ್ ಪ್ರೊಬ್ಲೆಂ ಅಂದರೆ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ ಆದ್ದರಿಂದ ಯಾವುದೇ ಕಾಲದಲ್ಲೂ ಕೂಡ ಉಗುರು ಬೆಚ್ಚನೆಯ ನೀರನ್ನು ಸ್ನಾನ ಮಾಡುವುದು ಒಳಿತು.

ಎರಡನೆಯದಾಗಿ ತುಂಬಾ ಹೆಣ್ಣುಮಕ್ಕಳು ಮಾರುಕಟ್ಟೆಗೆ ಬಂದ ಹೊಸ ಹೊಸ ಶಾಂಪೂಗಳನ್ನು ಬದಲಿಸುತ್ತಲೇ ಇರುತ್ತಾರೆ. ಇದರಿಂದ ಸ್ಕಿನ್ ಡ್ಯಾಮೇಜ್ ಆಗುತ್ತದೆ ಅಲ್ಲದೆ ನಿಮ್ಮ ಕೂದಲು ಸಹ ಉದುರುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದೇ ವಿಧದ ಶಾಂಪುವಿಗೆ ಹೊಂದಿಕೊಳ್ಳುವುದು ಉತ್ತಮ. ಮೂರನೆಯದಾಗಿ ಕೆಲವೊಬ್ಬ ಹುಡುಗಿಯರು ಪ್ರತಿನಿತ್ಯವೂ ಕೂದಲಿಗೆ ಶಾಂಪೂ ಹಾಕುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ, ಈ ರೀತಿ ಮಾಡಬಾರದು. ಇದರಿಂದ ಹೇರ್ ಫಾಲ್ ಆಗುವುದು. ನಾಲ್ಕನೆಯದಾಗಿ ಕೆಲವೊಬ್ಬರು ಸ್ನಾನದ ನಂತರ ಮೈ ಒರೆಸಿಕೊಳ್ಳುವಾಗ ಸೋಪಿನ ಅಥವಾ ಶಾಂಪೂವಿನ ನೊರೆ ಇದ್ದರೆ ಅದನ್ನು ಸಹ ಟವಲ್ ನಿಂದ ಒರೆಸಿಕೊಳ್ಳುತ್ತಾರೆ. ಮತ್ತೆ ಆ ಟವೆಲನ್ನು ನಾವು ಮುಖಕ್ಕೆ ಬೆಳೆಸಿದಾಗ ಪಿಂಪಲ್ ಆಗುವ ಸಾಧ್ಯತೆ ಇರುತ್ತದೆ.

%d bloggers like this: