ಸೋಶಿಯಲ್ ಮೀಡಿಯಾ ಅಲ್ಲಿ ವೈರಲ್ ಆಗಿರುವ ‘ಕಚ್ಚಾ ಬಾದಾಮ್’ ಹಾಡಿನ ಒಡೆಯ ಇವರೇ ನೋಡಿ

ನಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತಿದ್ದ ಅನೇಕ ಪ್ರತಿಭೆಗಳು ಇಂದು ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ಎಲ್ಲರಿಗೂ ಚಿರಪರಿಚಿತರಾಗುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬದಾಮ್ ಬದಾಮ್ ಹಾಡಿನದ್ದೇ ಹವಾ. ಬಾದಾಮ್ ಬಾದಾಮ್ ಎಂಬ ಹಾಡನ್ನು ಸಾಮಾನ್ಯ ಜನರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವ ರೀಲ್ಸ್ ಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಈ ಹಾಡು ಸಕ್ಕತ್ ಕ್ರೇಜ್ ಹುಟ್ಟಿಸಿದೆ. ಇಷ್ಟರಮಟ್ಟಿಗೆ ವೈರಲ್ ಆಗಿರುವ ಈ ಕಚ್ಚಾ ಬಾದಾಮ್ ಹಾಡಿನ ಸೃಷ್ಟಿಕರ್ತ ಬುಭನ್ ಬಡ್ಯಾಕರ್.

ಬುಭನ್ ಬಡ್ಯಾಕರ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ನಿವಾಸಿ. ವೃತ್ತಿಯಲ್ಲಿ ಕಡಲೆಕಾಯಿ ವ್ಯಾಪಾರಿಯಾಗಿರುವ ಇವರು ವ್ಯಾಪಾರಕ್ಕೋಸ್ಕರ ಈ ಹಾಡನ್ನು ಕಟ್ಟಿದ್ದರು. ವ್ಯಾಪಾರಕ್ಕೋಸ್ಕರ ಬಿರ್ಭೂಮ್ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಕಡಲೆಕಾಯಿ ವ್ಯಾಪಾರ ಮಾಡುವವರು. ಗ್ರಾಹಕರನ್ನು ಆಕರ್ಷಿಸಲು ಈ ಹಾಡನ್ನು ಕಟ್ಟಿದರಂತೆ. ಈ ಹಾಡಿನ ಸಾಹಿತ್ಯ ಮತ್ತು ಸಂಯೋಜನೆ ಕುದ್ದು ಇವರದ್ದೇ ಆಗಿದೆ. ತಮ್ಮ ದ್ವಿಚಕ್ರ ವಾಹನದಲ್ಲಿ ಕಡಲೆಕಾಯಿಬೀಜ ಮಾರುವ ಜೀಲ ಮತ್ತು ತಕ್ಕಡಿಯನ್ನು ಇಟ್ಟುಕೊಂಡು ಊರುಗಳನ್ನು ಸುತ್ತಿ ಕಡಲೆಕಾಯಿ ಮಾರುವಾಗ ಬಾದಾಮ್ ಬಾದಾಮ್ ಎ ದಾದಾ ಕಚ್ಚಾ ಬಾದಾಮ್ ಎಂದು ಹಾಡು ಹಾಡಿ ಎಲ್ಲರನ್ನೂ ಇವರು ಆಕರ್ಷಸುತ್ತಿದ್ದರು.

ಈ ಹಾಡು ಇದೀಗ ದೇಶದಾದ್ಯಂತ ವೈರಲ್ ಆಗುತ್ತಿದೆ. ಕೇವಲ ವ್ಯಾಪಾರಕ್ಕೆಂದು ಕಟ್ಟಿದ್ದ ಈ ಹಾಡು ಇಂದು ಇವರಿಗೆ ಕನಸಿನಲ್ಲೂ ಕಾಣದಷ್ಟು ಹಣವನ್ನು ನೀಡಿದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ. ಕಚ್ಚಾ ಬಾದಾಮ್ ಹಾಡನ್ನು ಕೇಳಿದ ಗೋಧುಳಿಬೆಳ ಮ್ಯೂಸಿಕ್ ಸಂಸ್ಥೆ, ಈ ಹಾಡಿನ ರಿಮಿಕ್ಸ್ ಆವೃತ್ತಿಯನ್ನು ರಿಲೀಸ್ ಮಾಡಿದೆ. ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಹಾಡಿನ ಅಸಲಿ ಸೃಷ್ಟಿಕರ್ತನಿಗೆ ಇದರಿಂದ ಏನಾದರೂ ಹಣಕಾಸಿನ ಲಾಭವಾಯಿತೇ ಎಂದು ಸಾಮಾಜಿಕ ಮಾಧ್ಯಮದಿಂದ ಪ್ರಶ್ನೆಗಳು ಎದ್ದನಂತರ, ಒಂದಿಷ್ಟು ಮೊತ್ತದ ಸಂಭಾವನೆ ಭುಬನ್ ಅವರನ್ನು ಹುಡುಕಿಕೊಂಡು ಬಂದಿದೆ.

ಹೌದು ಗೋಧುಳಿಬೆಳ ಮ್ಯೂಸಿಕ್ ಸಂಸ್ಥೆ ಭುಬನ್ ಅವರಿಗೆ 3 ಲಕ್ಷ ರೂಪಾಯಿಗಳನ್ನು ನೀಡಿ, ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಅವರಿಗೆ 1.5 ಲಕ್ಷ ರೂಪಾಯಿಗಳ ಚೆಕ್ ನೀಡಲಾಗಿದ್ದು, ಉಳಿದ ಹಣವನ್ನು ಮುಂದಿನ ವಾರ ನೀಡಲಾಗುವುದು ಎಂದು ಗೋಧುಳಿಬೆಳ ಮ್ಯೂಸಿಕ್ ಸಂಸ್ಥೆಯ ಗೋಪಾಲ್ ಘೋಷ್ ಹೇಳಿದ್ದಾರೆ. ಭುಬನ್ ಅವರು ಈ ಹಾಡಿನ ಮೇಲೆ ಹಕ್ಕುಸ್ವಾಮ್ಯವನ್ನು ಹೊಂದಿದ್ದಾರೆ. ಹೀಗಾಗಿ ಹಣವನ್ನು ನೀಡಲಾಗಿದೆ ಎಂದು ಗೋಪಾಲ್ ಘೋಷ ಹೇಳಿದ್ದಾರೆ. ಇದಷ್ಟೇ ಅಲ್ಲದೆ ಪಶ್ಚಿಮಬಂಗಾಳದ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ, ಕಳೆದ ವಾರ ಪಶ್ಚಿಮ ಬಂಗಾಳದ ಪೊಲೀಸ್ ಪ್ರಧಾನ ಕಚೇರಿಗೆ ಭುಬನ್ ಬಡ್ಯಾಕಿಯಾ ಅವರನ್ನು ಕರೆದುಕೊಂಡು ಹೋಗಿ ಸನ್ಮಾನ ಮಾಡಿದರು.

%d bloggers like this: