ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ನಾಯಕರಾಗಿದ್ದ ಹಾಲಿ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರಿಗೆ ಲಘು ಹೃದಯಾಘಾತ!ಸೌರವ್ ಗಂಗೂಲಿ ಅವರನ್ನು ಕೊಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಈಗಾಗಲೇ ಅವರ ಚಿಕಿತ್ಸೆಗಾಗಿ ವುಡ್ ಲ್ಯಾಂಡ್ ಆಸ್ಪತ್ರೆಯಲ್ಲಿ ಒಂಭತ್ತು ವೈದ್ಯರ ತಂಡ ರಚನೆ ಮಾಡಲಾಗಿದ್ದು. ಈ ತಂಡಕ್ಕೆ ಕರ್ನಾಟಕದ ಖ್ಯಾತ ಶಸ್ತ್ರ ಚಿಕಿತ್ಸೆ ತಜ್ಞರಾಗಿರುವ ಡಾ.ದೇವಿಶೆಟ್ಟಿಯವರು ಸೇರಿಕೊಂಡಿದ್ದಾರೆ, ಇವರ ಜೊತೆಗೆ ಹೃದಯ ತಜ್ಞ ಆರ್.ಕೆ ಪಾಂಡೆ ವರ್ಚುವಲ್ ಮೂಲಕ ಪಾಲ್ಗೊಳ್ಳೂತ್ತಿದ್ದಾರೆ.

48 ವರ್ಷದ ಸೌರವ್ ಗಂಗೂಲಿಯವರು ಈಗಾಗಲೇ ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಿಸಿಕೊಂಡಿದ್ದಾರೆ, ಆದ್ದರಿಂದ ಇವರಿಗೆ ಮತ್ತೊಮ್ಮೆ ಸರ್ಜರಿ ಮಾಡುವ ಅಗತ್ಯವಿಲ್ಲ, ಗಂಗೂಲಿ ಅವರಿಗೆ ಹೃದಯದ ರಕ್ತನಾಳಗಳಲ್ಲಿದ್ದ ನಾಲ್ಕು ಬ್ಲಾಕ್ ಗಳನ್ನು ತೆಗೆಯಲಾಗಿದೆ ಜೊತೆಗೆ ಹೃದಯಕ್ಕೆ ಒಂದು ಸ್ಟಂಟ್ ಕೂಡ ಅಳವಡಿಸಿದ್ದೇವೆ ಇದೀಗ ಅವರಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ವುಡ್ ಲ್ಯಾಂಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವುಡ್ ಲ್ಯಾಂಡ್ ಆಸ್ಪತ್ರೆಯ ಸಿಇಓ ಆಗಿರುವ ಡಾ.ರುಪಾಲಿ ಬಸು ಅವರು ತಿಳಿಸಿದ್ದಾರೆ.

ಕನ್ನಡಿಗ ಖ್ಯಾತ ಶಸ್ತ್ರ ಚಿಕಿತ್ಸೆ ತಜ್ಞ ಡಾ.ದೇವಿ ಶೆಟ್ಟಿ ಅವರು ಇಂದು (ಮಂಗಳವಾರ) ಕೊಲ್ಕತ್ತಾದ ವುಡ್ ಲ್ಯಾಂಡ್ ವೈದ್ಯರ ತಂಡದ ಜೊತೆ ಸೇರಿಕೊಂಡಿದ್ದಾರೆ, ಇನ್ನು ಗಂಗೂಲಿಯವರ ಆರೋಗ್ಯ ಸರಿಯಿಲ್ಲ ಎಂದು ತಿಳಿದ ಗಣ್ಯರ ದಂಡು ಆಸ್ಪತ್ರೆಯಲ್ಲಿ ಜಮಾವಣೆ ಯಾಗಿತ್ತು. ಪಶ್ಚಿಮ ಬಂಗಾಳದ ರಾಜಕೀಯ ನಾಯಕರು ಆಗಮಿಸಿದ್ದರು. ಜೊತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಆಸ್ಪತ್ರೆಗೆ ಭೇಟಿ ಗಂಗೂಲಿಯವರ ಆರೋಗ್ಯ ವಿಚಾರಿಸಿದರು. ಇನ್ನು ಗಂಗೂಲಿ ಯವರಿಗೆ ಆಂಜಿಯೋಪ್ಲಾಸ್ಕಿಕ್ ಸರ್ಜರಿ ಅಗತ್ಯವಿಲ್ಲದ ಕಾರಣ ಬುಧವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರ ತಂಡ ತಿಳಿಸಿದ್ದಾರೆ.