ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಅವರನ್ನ ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದ ಉದ್ಯಮಿ

ಶ್ರೀಮಂತರ ಪಟ್ಟಿಯಲ್ಲಿ ಹೊಸ ಉದ್ಯಮಿ ಎಂಟ್ರಿ! ಹಿಂದೆ ಸರಿದ ಅಂಬಾನಿ ಮತ್ತು ಜಾಕ್ ಮಾ ಏಷ್ಯಾದ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಚೀನಾ ದೇಶದ ಆನ್ಲೈನ್ ಉದ್ಯಮಿಯಾಗಿರುವ ಜಾಕ್ ಮಾ ಅವರಿಗೆ ಸೈಡ್ ಹೊಡೆದು ವಾಟರ್ ಬಾಟಲ್ ನ ಬೃಹತ್ ಉದ್ಯಮಿಯಾಗಿರುವ ಜಾಂಗ್ ಶನ್ ಜಾಂಗ್ ಅವರು ಇದೀಗ ಶ್ರೀಮಂತರ ಪಟ್ಟಿ ಸೇರ್ಪಡೆಗೊಂಡು ದಿಗ್ಗಜರನ್ನು ಆಶ್ಚರ್ಯಗೊಳಿಸಿದ್ದಾರೆ. ಹೌದು ಒಂದಷ್ಟು ವರ್ಷಗಳ ಶ್ರೀಮಂತರ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದ್ದ ಘಟಾನುಘಟಿ ಶ್ರೀಮಂತರಾದ ಅಂಬಾನಿ, ಜಾಕ್ ಮಾ ಇತರೆ ವ್ಯಕ್ತಿಗಳನ್ನು ಏಕಾಏಕಿ ಹಿಂದಿಕ್ಕಿ ಶಾನ್ ಜಾಂಗ್ ಅವರು ತನ್ನ ವ್ಯಾಪರ, ವಹಿವಾಟುಗಳಲ್ಲಿ ಅತ್ಯಧಿಕ ಸಾಧನೆ ಮಾಡಿ ಇದೀಗ ಏಷ್ಯಾದ 1ನೇ ಶ್ರೀಮಂತರಾಗಿದ್ದಾರೆ.

ಶಾನ್ ಜಾಂಗ್ ಅವರು ಆರಂಭದಲ್ಲಿ ಪತ್ರಿಕೋದ್ಯಮ, ಕೃಷಿ ಹಾಗೂ ಆರೋಗ್ಯ ಸಂಸ್ಥೆಗಳನ್ನು ಹುಟ್ಟು ಹಾಕಿ ಉದ್ಯಮಲೋಕಕ್ಕೆ ವಿಭಿನ್ನವಾದ ರೂಪರೇಷೆ ನೀಡಿದ್ದರು. ಇದೀಗ ಇವರ ಒಟ್ಟು ಆಸ್ತಿಯ ಮೌಲ್ಯ 77.9 ಶತಕೋಟಿ ಡಾಲರ್ ಏರಿಕೆಯಾಗಿದ್ದು ಬ್ಲೂಮ್ ಬರ್ಗ್ ನೂರು ಕೋಟಿ ಒಡೆಯರ ಲಿಸ್ಟ್ ನಲ್ಲಿ ಜಾಂಗ್ ಶೆನ್ ಜಾಂಗ್ ಅವರು 11ನೇ ಸ್ಥಾನವನ್ನು ಪಡೆದಿದ್ದಾರೆ. ವಿಶೇಷ ಅಂದರೆ ಪತ್ರಿಕೋದ್ಯಮ ಮತ್ತು ಆರೋಗ್ಯ ಇವೆರಡು ಕ್ಷೇತ್ರ ಸೇವಾವಲಯ ವಾಗಿದ್ದರು ಸಹ ಈ ಕ್ಷೇತ್ರಗಳಲ್ಲಿ ಆದಾಯ ಗಳಿಸಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಇವರೇ ಮೊದಲಿಗರಾಗಿದ್ದಾರೆ.

66 ವರ್ಷದ ಶಾನ್ ಜಂಗ್ ಅತೀ ವೇಗವಾಗಿ ಶ್ರೀಮಂತರ ಪಟ್ಟಿಯಲ್ಲಿ ಸೇರಿ ಇತಿಹಾಸ ನಿರ್ಮಾಣ ಮಾಡಿದ್ದಾರೆ, ಈ ಶಾನ್ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಅವರನ್ನು ಹಿಂದಿಕ್ಕಲು ಪ್ರಮುಖ ಕಾರಣವಾಗಿರುವುದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಸಂಸ್ಥೆಯ ಷೇರು ಮೌಲ್ಯವು ಗಣನೀಯವಾಗಿ ಕುಸಿತಕಂಡಿದೆ. ಸರಿ ಸುಮಾರು 18ಶತಕೊಟಿಯಷ್ಟು ಆದಾಯ ನಷ್ಟ ಹೊಂದಿದ್ದು ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಅಂಬಾನಿಯವರ ವ್ಯಾಪಾರ ವಹಿವಾಟುಗಳು ಕುಸಿತ ಕಾಣುತ್ತಿರುವುದರಿಂದ ಇವರ ಆದಾಯದಲ್ಲಿ ಭಾರಿ ಪ್ರಮಾಣದ ಏರಿಳಿಕೆ ಕಂಡು ಇದೀಗ ಇವರ ಆದಾಯ 76.9 ಶತಕೊಟಿ ಡಾಲರ್ ನಷ್ಟಿದೆ ಎಂದು ಷೇರುಮಾರುಕಟ್ಟೆಯ ಮೂಲಗಳು ಬಹಿರಂಗ ಪಡಿಸಿವೆ.

%d bloggers like this: