ಸ್ಟಾರ್ ನಟನ ಚಿತ್ರಗಳಿಗೆ ಚಿತ್ರಮಂದಿರಗಳಿಂದ ನಿಷೇಧದ ಭೀತಿ

ಖ್ಯಾತ ನಟ ದುಲ್ಕರ್ ಸಲ್ಮಾನ್ ಮಲಯಾಳಂ ನ ಸುಪ್ರಸಿದ್ದ ನಟ. ನಟ ದುಲ್ಕರ್ ಸಲ್ಮಾನ್ ಯಾವಾಗಲೂ ವಿಭಿನ್ನ ರೀತಿಯ ಕಥೆಗಳನ್ನು ಆರಿಸಿಕೊಂಡು ಪ್ರೇಕ್ಷಕರ ಮನಗೆಲ್ಲುತ್ತಾರೆ. ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಬಾಲಿವುಡ್ ನಟರು ಕೂಡ ಇವರ ಅಭಿಮಾನಿಗಳೇ. ಹೌದು ಹಲವಾರು ಬಾಲಿವುಡ್ ನಟ ನಟಿಯರು ದುಲ್ಕರ್ ಸಲ್ಮಾನ್ ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಫಾಲೋ ಮಾಡುತ್ತಾರೆ. ಇತ್ತೀಚೆಗೆ ದುಲ್ಕರ್ ಸಲ್ಮಾನ್ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ ಕೇರಳ ಫಿಲಂ ಎಕ್ಸ್ಹಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ದುಲ್ಕರ್ ಸಲ್ಮಾನ್ ಅವರ ಚಿತ್ರಗಳಿಗೆ ನಿಷೇಧ ಹೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹೌದು ದುಲ್ಕರ್ ಸಲ್ಮಾನ್ ಅವರ ನಟನೆಯ ಸೆಲ್ಯೂಟ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇನ್ನೇನು ಚಿತ್ರ ಬಿಡುಗಡೆಯಾಗಬೇಕಿದೆ.

ಆದರೆ ಈ ಹಿಂದೆ ಸೆಲ್ಯೂಟ್ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದೀಗ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದೆ. ಇದೇ ಕಾರಣದಿಂದ ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟ ಸೆಲ್ಯೂಟ್ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಸೆಲ್ಯೂಟ್ ಸಿನಿಮಾ ನಮ್ಮ ಜೊತೆಗಿನ ಒಪ್ಪಂದದಂತೆ ಥಿಯೇಟರುಗಳಲ್ಲಿ ಬಿಡುಗಡೆ ಮಾಡಬೇಕು. ದುಲ್ಕರ್ ಸಲ್ಮಾನ್ ಮತ್ತು ನಿರ್ಮಾಣ ಸಂಸ್ಥೆಯು ಈ ನಿಯಮವನ್ನು ಪಾಲಿಸದಿದ್ದರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಥಿಯೇಟರ್ನಲ್ಲಿ ರಿಲೀಸ್ ಮಾಡುವುದಾಗಿ ಅವರೇ ಸಹಿ ಹಾಕಿಕೊಟ್ಟ ಒಪ್ಪಂದ ಪತ್ರ ನಮ್ಮ ಹತ್ತಿರ ಇದೆ. ಒಪ್ಪಂದದಂತೆ ಅವರು ಅವರ ಮಾತನ್ನು ಪಾಲಿಸುತ್ತಿಲ್ಲ. ಈ ಒಪ್ಪಂದ ಪತ್ರಕ್ಕೆ ಅವರು ಗೌರವ ಕೊಡುತ್ತಿಲ್ಲ.

ಹೀಗಾಗಿ ಅನಿವಾರ್ಯವಾಗಿ ನಿಷೇಧದ ಮಾತು ಇಲ್ಲಿ ಬರುತ್ತದೆ ಎಂದು ಕೇರಳ ಫಿಲಂ ಎಕ್ಸ್ಹಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಒಕ್ಕೂಟದ ಪ್ರತಿನಿಧಿ ಕೆ ವಿಜಯ್ ಕುಮಾರ್ ಹೇಳಿದರು. ಒಂದು ವೇಳೆ ಸೆಲ್ಯೂಟ್ ಚಿತ್ರತಂಡ ಈ ಚಿತ್ರವನ್ನು ನೇರವಾಗಿ ಒಟಿಟಿಟಿಗಳಲ್ಲೇ ರಿಲೀಸ್ ಮಾಡುವುದಾದರೆ ಇನ್ನುಮುಂದೆ ದುಲ್ಕರ್ ಸಲ್ಮಾನ್ ಅವರ ಎಲ್ಲಾ ಚಿತ್ರಗಳನ್ನು ಥಿಯೇಟರಿಗೆ ಬಾರದಂತೆ ನಿಷೇಧ ಹೇರಲಾಗುತ್ತದೆ ಎಂದು ಫಿಲ್ಮ್ ಎಕ್ಸ್ಹಿಬಿಟರ್ಸ್ ಯುನೈಟೆಡ್ ಆರ್ಗನೈಸೇಷನ್ ಆಫ್ ಕೇರಳ ಹೇಳಿದೆ. ಆದರೆ ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಕೊಟ್ಟಂತೆ ಎನ್ನುವ ಗಾದೆ ಮಾತಿನಂತೆ ವ್ಯಕ್ತವಾಗುತ್ತಿದೆ. ಏಕೆಂದರೆ ಸಲ್ಯೂಟ್ ಚಿತ್ರದ ನಿರ್ಮಾಣ ಸಂಸ್ಥೆ ತಗೆದುಕೊಂಡಿರುವ ಈ ನಿರ್ಧಾರಕ್ಕೆ ನಟ ದುಲ್ಕರ್ ಸಲ್ಮಾನ್ ಅವರ ಚಿತ್ರಗಳಿಗೆ ನಿಷೇಧ ಹೇರುತ್ತಿರುವುದು ಎಷ್ಟು ಸರಿ ಎಂಬ ಚರ್ಚೆಗಳು ನಡೆಯುತ್ತಿವೆ.

%d bloggers like this: