ಸ್ಟೀವ್ ಸ್ಮಿತ್ ಅವರನ್ನು ತಂಡದಿಂದ ಹೊರಕ್ಕೆ ಹಾಕಿದ ರಾಜಸ್ಥಾನ ರಾಯಲ್ಸ್, ತಂಡಕ್ಕೆ ಹೊಸ ನಾಯಕ

ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಕಿಕ್ಔಟ್! ಆಸ್ಟ್ರೇಲಿಯಾದಲ್ಲಿ ಸರಣಿ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದು ಸೋಮವಾರದಂದು ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಅವರ ಮೋಸದಾಟ ಬಹಿರಂಗವಾಗಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್ ಮ್ಯಾನ್ ಗಳು ತಮ್ಮ ವಿಕೆಟ್ ಉಳಿಸಿಕೊಳ್ಳಲು ಲೆಗ್ ಮತ್ತು ಮಿಡ್ಡಲ್ ಸ್ಟಂಪ್ ಶಾರ್ಟ್ ಪಡೆದಿರುತ್ತಾರೆ. ಈ ಗಾರ್ಡ್ ಯಾವ ಅಂತರದಲ್ಲಿ ಬಾಲ್ ಬರುತ್ತಿದೆ ಎಂಬುದನ್ನು ತಿಳಿದು ಆಫ್ ಸ್ಟಂಪ್ ಬಳಸಿ ಸುರಕ್ಷತೆಯಿಂದ ಆಟ ಆಡಬಹುದ್ದಾಗಿರುತ್ತದೆ. ರಿಷಬ್ ಪಂತ್ ಅವರು ಸಹ ಸೋಮವಾರ ನಡೆದ ಈ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಈ ಗಾರ್ಡ್ ಪಡೆದಿದ್ದರು, ಆದರೆ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಈ ಗಾರ್ಡ್ ಅನ್ನು ಸ್ಟೀವ್ ಸ್ಮಿತ್ ಅವರು ತಮ್ಮ ಶೂನಿಂದ ಅಳಿಸಿಹಾಕಿದ್ದಾರೆ. ಸ್ಟೀವ್ ಸ್ಮಿತ್ ಗಾರ್ಡ್ ಅಳಿಸುತ್ತಿರುವುದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿ ಚರ್ಚೆಗೆ ಗ್ರಾಸವಾಗಿದೆ, ಇನ್ನು ಇದೇ ವಿಚಾರವಾಗಿ ಭಾರತ ತಂಡದ ಮಾಜಿ ಆಟಗಾರರು ಸಹ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸ್ಟೀವ್ ಸ್ಮಿತ್ ಮಾಡಿದ ಮೋಸದಿಂದ ಅಸಮಾಧಾನಗೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ಕೈಬಿಡಲು ಚಿಂತನೆ ನಡೆಸಿದೆ. ರಾಜಸ್ಥಾನ್ ರಾಯಲ್ಸ್ ತಂಡ, ಐಪಿಎಲ್ ಪಂದ್ಯಗಳಲ್ಲಿ ಹೇಳುವಂತಹ ಪ್ರದರ್ಶನ ನೀಡಿಲ್ಲ. ಐಪಿಎಲ್ ಆರಂಭದ ಮೊದಲ ಆವೃತ್ತಿಯಲ್ಲಿ ಜಯಭೇರಿ ಸಾಧಿಸಿದನ್ನು ಹೊರತು ಪಡಿಸಿದರೆ, ಉಳಿದ ಐಪಿಎಲ್ ಪಂದ್ಯಗಳಲ್ಲಿ ಪರಿಣಾಮಕಾರಿ ಪ್ರದರ್ಶನ ಬಂದಿಲ್ಲ.

ಇದಲ್ಲದೆ ಸೋಮವಾರ ನಡೆದ ಆಸ್ಟ್ರೇಲಿಯಾ ಮತ್ತು ಭಾರತ ಟೆಸ್ಟ್ ಕ್ರಿಕೆಟ್ ಅಂತ್ಯಗೊಂಡಿದ್ದು, ಇದರಲ್ಲಿ ಸ್ಟೀವ್ ಸ್ಮಿತ್ ಅವರ ನಡವಳಿಕೆಯಿಂದ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಆಕ್ರೋಶಗೊಂಡು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ಸ್ಟೀವ್ ಸ್ಮಿತ್ ಅವರನ್ನು ತೆಗೆದು, ಅವರ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರನ್ನು ತಂಡದ ಕ್ಯಾಪ್ಟನ್ ಆಗಿ ನಿಯೋಜಿಸಲು ಆಲೋಚಿಸಿದೆ. ಸಂಜು ಸ್ಯಾಮ್ಸನ್ ಅವರು ಸದ್ಯಕ್ಕೆ ಸೈಯ್ಯದ್ ಮುಫ್ತಾಕ್ ಅಲಿ ಟಿಟ್ವೆಂಟಿ ಟ್ರೋಫಿ ಪಂದ್ಯದಲ್ಲಿ ಕೇರಳ ತಂಡದ ನಾಯಕರಾಗಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ತಮ್ಮ ಆಟಗಾರರ ಪಟ್ಟಿಯನ್ನು ಜನವರಿ 21ರ ಒಳಗೆ ಕಳಿಸುವಂತೆ ಸೂಚಿಸಿದ್ದು ಫೆಬ್ರವರಿ 11ರಂದು ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

%d bloggers like this: