‘ಸ್ಟ್ರಾಬೆರಿ’ ಗೆ ಕೈ ಹಾಕಿದ ರಕ್ಷಿತ್ ಶೆಟ್ಟಿ ಅವರು

ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಎಂದರೆ ತಪ್ಪಾಗಲಾರದು. ನಟ ಮತ್ತು ನಿರ್ದೇಶಕ ಎಂಬ ಪಟ್ಟದ ಜೊತೆಗೆ ಮತ್ತೊಂದು ಪಟ್ಟವನ್ನು ಮೂಡಿಗೆರಿಸಿಕೊಳ್ಳಲು ರಕ್ಷಿತ್ ಕಾತುರದಲ್ಲಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಓದಿದ್ದು ಇಂಜಿನಿಯರಿಂಗ್ ಆದರೂ ಅವರ ಒಲವು ಇದ್ದದ್ದು ಚಿತ್ರರಂಗದ ಕಡೆಗೆ. ರಕ್ಷಿತ್ ಶೆಟ್ಟಿ ಅವರು ಶಾರ್ಟ್ ಫಿಲಂ ಗಳೊಂದಿಗೆ ತಮ್ಮ ಸಿನಿಪಯಣ ವನ್ನು ಪ್ರಾರಂಭಿಸಿದ್ದರು. ಎಷ್ಟೋ ಶಾರ್ಟ್ ಫಿಲಂಗಳು ರಿಲೀಸ್ ಆಗದಿದ್ದರೂ ಕೂಡ ಧೃತಿಗೆಡದ ರಕ್ಷಿತ್ ಶೆಟ್ಟಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಾಯುತ್ತಿದ್ದರು. ಅವರ ಕಷ್ಟಕ್ಕೆ ಪ್ರತಿಫಲವೆಂಬಂತೆ, ನಮ್ ಏರಿಯಾಲಿ ಒಂದು ದಿನ, ತುಘಲಕ್ ಎಂಬ ಚಿತ್ರಗಳಲ್ಲಿ ನಟಿಸಿದರಾದರೂ ನಿರೀಕ್ಷಿತ ಯಶಸ್ಸು ಕಂಡು ಬರಲಿಲ್ಲ.

ರಕ್ಷಿತ್ ಶೆಟ್ಟಿ ಅವರಿಗೆ ಸಿನಿರಂಗದ ಪಯಣದಲ್ಲಿ ಭರ್ಜರಿ ಹಿಟ್ ಕೊಟ್ಟಿದ್ದು 2013 ರಲ್ಲಿ ರಿಲೀಸ್ ಆದ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ. ಈ ಚಿತ್ರದ ಯಶಸ್ಸು ನಿರೀಕ್ಷೆಯನ್ನು ಮೀರಿ ಭರ್ಜರಿ ಯಶಸ್ಸು ತಂದುಕೊಟ್ಟಿತು. ರಕ್ಷಿತ್ ಶೆಟ್ಟಿ ಅವರಿಗೆ ಅಭಿನಯದ ಜೊತೆಗೆ ನಿರ್ದೇಶನದಲ್ಲೂ ಆಸಕ್ತಿ ಇತ್ತು. ಈಗ ರಕ್ಷಿತ್ ಶೆಟ್ಟಿ ನಟ, ನಿರ್ದೇಶಕ ಎಂಬ ಪಟ್ಟದ ಜೊತೆಗೆ ಇನ್ನೊಂದು ಪಟ್ಟವನ್ನು ಹೆಗಲೇರಿಸಲು ಹೊರಟಿದ್ದಾರೆ. ಹೌದು ರಕ್ಷಿತ್ ಶೆಟ್ಟಿ ತಮ್ಮದೇ ಆದ ನಿರ್ಮಾಣ ಸಂಸ್ಥೆಯೊಂದನ್ನು ತಗೆದಿದ್ದಾರೆ. ಅದಕ್ಕೆ ಪರಂವಃ ಸ್ಪಾಟ್ಲೈಟ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಈ ಸಂಸ್ಥೆಯಿಂದ ಮೊದಲನೇ ಚಿತ್ರ ರೆಡಿ ಆಗುತ್ತಿದೆ. ಈ ಚಿತ್ರದ ಹೆಸರು ಸ್ಟ್ರಾಬೆರಿ.

ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಜೊಯೆಲ್ ಶಮನ್ ಡಿಸೋಜ ಛಾಯಾಗ್ರಹಣ ನೀಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ, ರಾಹುಲ್ ವಸಿಷ್ಟ ಅವರ ಸಂಕಲನವಿದೆ. ಈ ಚಿತ್ರವನ್ನು ಅರ್ಜುನ್ ಲೂವಿಸ್ ಬರೆದು ನಿರ್ದೇಶಿಸಿದ್ದಾರೆ. ರಿವರ್ಸ್ ಸ್ಕ್ರೀನ್ ಪ್ಲೇ ನಲ್ಲಿ ಸಾಗುವ ಈ ಚಿತ್ರವನ್ನು ನಿರ್ದೇಶಿಸಿರುವ ಅರ್ಜುನ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಶೃತಿ ಹರಿಹರನ್ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಒಂದು ಮೊಟ್ಟೆಯ ಕಥೆಯ ಬೀರ್ಬಲ್ ಮತ್ತು ಗರುಡ ಗಮನ ವೃಷಭ ವಾಹನ ಚಿತ್ರದ ವಿನೀತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತ ಎನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮತ್ತೊಮ್ಮೆ ನಿಷ್ಕಲ್ಮಶ ಪ್ರೀತಿಯ ಭರವಸೆ ಸಿಕ್ಕಾಗ ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆಯೇ ಸ್ಟ್ರಾಬೆರಿ. ಶೃತಿ ಹರಿಹರನ್ ಅವರು ಅಮೃತ ಎನ್ನುವ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದ್ದಾರೆ.

%d bloggers like this: