ಸುನಿಲ್ ಗವಾಸ್ಕರ್ ಅವರ ಸಾಧನೆಗೆ ಮತ್ತೊಂದು ಗರಿ

ಭಾರತ ಕ್ರಿಕೆಟ್ ಜಗತ್ತಿನ ದಂತಕಥೆ ಲಿಟಲ್ ಮಾಸ್ಟರ್ ಎಂದು ಕರೆಯಲ್ಪಡುವ ಸುನಿಲ್ ಗವಾಸ್ಕರ್. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. 73 ವಯಸ್ಸಿನ ಸುನಿಲ್ ಗವಾಸ್ಕರ್ ವಿಶ್ವ ಕ್ರಿಕೆಟ್ ಕಂಡಂತಹ ದೈತ್ಯ ಪ್ರತಿಭೆಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ ನಲ್ಲಿ 10000 ರನ್ನುಗಳನ್ನು ಪೂರೈಸಿದ ಮೊದಲ ಆಟಗಾರ ಇದೇ ನಮ್ಮ ಭಾರತದ ಸುನಿಲ್ ಗವಾಸ್ಕರ್. ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರಿಗೂ ಸ್ಪೂರ್ತಿ ಈ ಸುನಿಲ್ ಗವಾಸ್ಕರ್. ಇಷ್ಟೆಲ್ಲಾ ಸಾಧನೆಗಳು ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದು ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಒಂದು ಕ್ರಿಕೆಟ್ ಕ್ರೀಡಾಂಗಣಕ್ಕೆ ಒಬ್ಬ ಆಟಗಾರ ಹೆಸರನ್ನು ಇಡುವುದೆಂದರೆ ಅದು ಸಾಮಾನ್ಯದ ಸಂಗತಿಯಲ್ಲ.

ಆದರೆ ಇಂತಹ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದಾರೆ ಸುನಿಲ್ ಗವಾಸ್ಕರ್. ಆದರೆ ಈ ಕ್ರೀಡಾಂಗಣ ನಮ್ಮ ದೇಶದಲ್ಲಿ ಇದೆ ಎಂದು ತಪ್ಪಾಗಿ ಭಾವಿಸಬೇಡಿ. ಬದಲಾಗಿ ಈ ಕ್ರೀಡಾಂಗಣ ಇರುವುದು ಇಂಗ್ಲೆಂಡ್ನಲ್ಲಿ. ಹೌದು ಕ್ರಿಕೆಟ್ ಆಟದ ತವರೂರು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್ ದೇಶದ ಲೀಸೆಸ್ಟರ್ ಕ್ರಿಕೆಟ್ ಕ್ಲಬ್ ಇದೀಗ ತಮ್ಮ ಕ್ರೀಡಾಂಗಣಕ್ಕೆ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಇಡಲು ಮುಂದಾಗಿದೆ. ಇದಕ್ಕೆ ಪ್ರತಕ್ರಿಯಿಸಿರುವ ಸುನಿಲ್ ಅವರು ಒಂದು ಕ್ರೀಡಾಂಗಣಕ್ಕೆ ನನ್ನ ಹೆಸರು ಇಡುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಲೀಸೆಸ್ಟರ್ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ನಗರಗಳಲ್ಲಿ ಒಂದು ಎಂದು ಹೇಳಿದ್ದಾರೆ.

%d bloggers like this: