ಸುರಕ್ಷತೆಯಲ್ಲಿ ಸೊನ್ನೆ ಅಂಕ ಪಡೆದ ಹ್ಯೂಂಡಾಯಿ ಕಂಪನಿಯ ಪ್ರತಿಷ್ಠಿತ ಕಾರು

ಭಾರತೀಯ ಮಾರುಕಟ್ಟೆಗೆ ಅನೇಕ ಕಾರುಗಳು ಪರಿಚಯಗೊಳ್ಳುತ್ತವೆ. ಅವುಗಳಲ್ಲಿ ಎಲ್ಲವೂ ಕೂಡ ಗ್ರಾಹಕರಿಗೆ ಮೆಚ್ಚುಗೆ ಆಗಬೇಕು ಎಂದೇನಿಲ್ಲ. ಕಾರು ಪ್ರಿಯರಲ್ಲಿ ವಿವಿಧ ರೀತಿಯ ಅಭಿರುಚಿಗಳನ್ನು ಹೊಂದಿರುವವರು ಇರುತ್ತಾರೆ. ಕೆಲವರಿಗೆ ಕಾರಿನ ಹೊರ ಭಾಗದ ವಿನ್ಯಾಸ ಮತ್ತು ಅಡ್ವಾನ್ಸ್ ಫೀಚರ್ ಹೊಂದಿರುವ ಕಾರ್ ಗಳನ್ನ ಇಷ್ಟ ಪಡುತ್ತಾರೆ. ಇನ್ನು ಕೆಲವರಿಗೆ ಜಸ್ಟ್ ಆ ಕಾರು ಉತ್ತಮವಾಗಿ ಮೈಲೇಜ್ ನೀಡಬಲ್ಲದ ಎಂಬುದನ್ನ ನೋಡುವುದರ ಜೊತೆಗೆ ಕಾರಿನ ಬೆಲೆಗೆ ಪ್ರಾಶಸ್ತ್ಯ ನೀಡುತ್ತಾರೆ. ಯಾವುದೇ ಕಾರನ್ನು ಖರೀದಿ ಮಾಡಬೇಕಾದರೆ ಇದೆಲ್ಲಕ್ಕಿಂತ ಮುಖ್ಯವಾಗುವುದು ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆ ಎಷ್ಟರ ಮಟ್ಟಿಗೆ ಇದೆ ಎಂಬುದು. ಇದನ್ನ ಕಾರು ತಯಾರಾದ ನಂತರ ಕೆಲವು ಸಂಸ್ಥೆಗಳು ಕಾರಿನ ಶಕ್ತಿ ಸಾಮರ್ಥ್ಯ ಮತ್ತು ಅದರ ದಕ್ಷತೆ ಸುರಕ್ಷತೆಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಪರೀಕ್ಷೆಯಲ್ಲಿ ಒಂದಷ್ಟು ಕಾರುಗಳ ಪಾಸ್ ಆದರೆ ಇನ್ನೊಂದಷ್ಟು ಕಾರುಗಳು ಫೇಲ್ ಆಗುತ್ತವೆ. ಅಂತೆಯೇ ಇತ್ತೀಚೆಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹ್ಯೂಂಡೈ ಕಂಪನಿಯ ಟ್ಯುಸಾನ್ ಎಸ್.ಯೂ.ವಿ ಕಾರು ಅನುತ್ತೀರ್ಣವಾಗಿದೆ. ನವೆಂಬರ್ ತಿಂಗಳಲ್ಲಿ ಈ ಟ್ಯೂಸಾನ್ ಕಾರನ್ನು ಹ್ಯುಂಡೈ ಕಂಪನಿಯ ತನ್ನ ನ್ಯೂ ಜನರೇಶನ್ ಟ್ಯೂಸಾನ್ ಎಸ್.ಯೂ.ವಿ ಕಾರನ್ನ ಯುರೋ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ಗೆ ಒಳಪಡಿಸಿದಾಗ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಳ್ಳುವ ಮೂಲಕ ಪಾಸ್ ಆಗಿತ್ತು. ಆದರೆ ಮತ್ತೆ ಈ ಡಿಸೆಂಬರ್ ತಿಂಗಳಿನಲ್ಲಿ ಲ್ಯಾಟಿನ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ಗೆ ಒಳಪಡಿಸಿದಾಗ ಟ್ಯೂಸಾನ್ ಎಸ್ಯೂವಿ ಕಾರು ಜೀ಼ರೋ ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಫೇಲ್ ಆಗಿದೆ. ಈ ಟ್ಯೂಸಾನ್ ಎಸ್ಯೂವಿ ಕಾರಿನಲ್ಲಿ ಸೈಡ್ ಏರ್ ಬ್ಯಾಗ್ ಗಳನ್ನು ಉತ್ತಮ ಗುಣಮಟ್ಟದಲ್ಲಿ ಅಳವಡಿಸದ ಕಾರಣ ಈ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕಾರು ಫೇಲ್ ಆಗಿದೆ.

ಇದರಲ್ಲಿ ಮಕ್ಕಳು ಮತ್ತು ವೃದ್ದರು ಪ್ರಯಾಣ ಮಾಡುವುದು ಸುರಕ್ಷತೆಯಲ್ಲ ಎಂದು ತಿಳಿಸಲಾಗಿದೆ. ಇನ್ನು ಈ ಟ್ಯೂಸಾನ್ ಎಸ್.ಯು.ವಿ ಕಾರಿನಲ್ಲಿ ಹಿಂಭಾಗದ ಸೀಟಿನಲ್ಲಿ ಲ್ಯಾಪ್ ಬೆಲ್ಟ್ ಮಾತ್ರ ನೀಡಲಾಗಿದೆ. ನೋಡಲು ಆಕರ್ಷಕ ವಿನ್ಯಾಸ ಹೆಡ್ ಲ್ಯಾಂಪ್ ಹೊಂದಿರುವ ಟ್ಯೂಸಾನ್ ಕ್ರೋಮ್ ಸ್ಟ್ರಿಪ್ ಹೊಂದಿದೆ. ಇದು 19ಇಂಚಿನ ವ್ಹೀಲ್ ಹೊಂದಿದ್ದು, ಶಾರ್ಕ್ ಫಿನ್ ಆಂಟಿನಾ ಬಾಡಿ ಕಲರ್ ನಲ್ಲಿ ರೂಫ್ ರೈಲ್ ಮತ್ತು ಫ್ಲೋಟಿಂಗ್ ರೂಫ್ ಲೈನ್ ಹೊಂದಿದೆ. ಜೊತೆಗೆ ರೂಫ್ ಸ್ಪಾಯ್ಲರ್ ಎಸ್ಯುವಿ ಯಲ್ಲಿ 1.6 ಲೀಟರಿನ ಟರ್ಬೋ ಹೈಬ್ರೀಡ್ ಎಂಜಿನ್ ಅನ್ನು ಒಳಗೊಂಡಿದ್ದು, 227 ಬಿಎಚ್ಪಿ ಪವರ್ ಮತ್ತು 350 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆಯ ಸಾಮರ್ಥ್ಯವನ್ನ ಹೊಂದಿದೆ.

%d bloggers like this: