ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಬೌಲಿಂಗ್ ಗೆ ಐಪಿಎಲ್ ಪಂದ್ಯದ ಮುಂಬೈ ಇಂಡಿಯನ್ಸ್ ತಂಡದಲ್ಲಿ ರನ್ ಸುರಿಮಳೆಗೈದಿದ್ದ ಸೂರ್ಯ ಕುಮಾರ್ ಯಾದವ್ ಅವರು ಅಭ್ಯಾಸದ ಪಂದ್ಯದಲ್ಲಿ ಕೇವಲ 37 ಎಸೆತಗಳಿಗೆ ಬರೋಬ್ಬರಿ 120 ರನ್ ಬಾರಿಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಐಪಿಎಲ್ ಕ್ರಿಕೆಟ್ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ರೋಚಕ ಅರ್ಧ ಶತಕ ಸಿಡಿಸಿ ಆತಕ್ಟ್ರೇಲಿಯಾ ಪ್ರವಾಸಕ್ಕೆ ತಾನು ಆಯ್ಕೆ ಆಗದ ಕಾರಣ ಆಯ್ಕೆ ಸಮಿತಿಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದರು.

ಸದ್ಯಕ್ಕೆ ದೇಶಿಯ ಕ್ರಿಕೆಟ್ನತ್ತ ಗಮನ ಕೇಂದ್ರಿಕರಿಸಿದ್ದಾರೆ. ಆರಂಭವಾಗುವ ಸೈಯದ್ ಮುಫ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಅಭ್ಯಾಸ ನಡೆಸುತ್ತಿರುವ ಟಿ ಟ್ವೆಂಟಿ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಕೇವಲ 37 ಎಸೆತಗಳಿಗೆ 120 ರನ್ ಗಳಿಸಿ ತನ್ನ ಬ್ಯಾಟಿಂಗ್ ವೈಖರಿಯನ್ನು ಬಿಸಿಸಿಐ ಗೆ ಮುಟ್ಟುವಂತೆ ತೋರಿಸಿದ್ದಾರೆ. ಡಿ’ಟೀಂ ನಲ್ಲಿ ಆಟವಾಡಿದ ಅರ್ಜುನ್ ತೆಂಡುಲ್ಕರ್ ಸೂರ್ಯಕುಮಾರ್ ಯಾದವ್ ಗೆ ಬೌಲಿಂಗ್ ಮಾಡಿದರು.

ಇದರಲ್ಲಿ 13 ನೇ ಓವರ್ ನಲ್ಲಿ ಅರ್ಜುನ್ ತೆಂಡುಲ್ಕರ್ ಭಾರಿ ರನ್ ಗಳನ್ನು ನೀಡಿದರು. ಅರ್ಜುನ್ ಮಾಡಿದ ಓವರ್ ನಲ್ಲಿ ಸೂರ್ಯ ಕುಮಾರ್ ಯಾದವ್ 21 ರನ್ ಗಳಿಸಿದರು. ಕೊನೆಯಲ್ಲಿ ರೈಟ್ ಹ್ಯಾಂಡ್ ಆಟಗಾರನ ಜೊತೆಯಾಡಿ ಬರೋಬ್ಬರಿ 10 ಬೌಂಡರಿ, 9 ಸಿಕ್ಸರ್ ಬಾರಿಸುವುದರ ಮುಖಾಂತರ ಸೂರ್ಯ ಕುಮಾರ್ ಯಾದವ್ ತನ್ನ ಇಮೇಜ್ ಅನ್ನು ಉತ್ತಮವಾಗಿ ಕಟ್ಟಿಕೊಳ್ಳುತ್ತಿದ್ದಾರೆ. ಅರ್ಜುನ್ ತೆಂಡುಲ್ಕರ್ ಮೂರನೇಯ ಓವರ್ ನಲ್ಲಿ ಸಿದ್ದಾರ್ಥ್ ಆಕ್ರೆ ಅವರ ವಿಕೆಟ್ ಪಡೆದು ನಾಲ್ಕು ಓವರ್ ಗಳಿಗೆ 33 ರನ್ ನೀಡಿದರು.

ಒಟ್ಟಾರೆಯಾಗಿ 13 ನೇ ಐಪಿಎಲ್ ಟೂರ್ನಿಯಲ್ಲಿ ಆರಂಭವಾದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮುಖಾಂತರ ರನ್ ಬೇಟೆ ಮುಂದುವರಿದಿದೆ. ಐಪಿಎಲ್ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಐದು ಭಾರಿ ಆಟ ಆಡಿರುವ ಸೂರ್ಯ ಕುಮಾರ್ ಯಾದವ್ ಒಟ್ಟಾರೆಯಾಗಿ 480 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ, ಹೀಗೆ ಮುಂದುವರೆದು ಭಾರತ ರಾಷ್ಟೀಯ ತಂಡದಲ್ಲಿ ಆಡಬೇಕು ಎಂಬ ಹೆಬ್ಬಾಸೆ ಅವರದ್ದು.