ಸ್ವಚ್ಛ ನಗರಗಳಲ್ಲಿ ನಮ್ಮ ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ

ಮೈಸೂರಿಗೆ ಮತ್ತೆ ಕೈ ತಪ್ಪಿದ ಸ್ವಚ್ಚ ನಗರಿ ಕೀರ್ತಿ, ಕೇಂದ್ರ ಸರ್ಕಾರ 2021 ನೇ ಸಾಲಿನ ಸ್ವಚ್ಚ ನಗರಗಳ ಪಟ್ಟಿಯನ್ನ ಘೋಷಣೆ ಮಾಡಿದೆ.ಆದರೆ ಸಾಂಸ್ಕೃತಿಕ ನಗರಿ ಮೈಸೂರಿಗೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಸಿಕ್ಕಿದ್ದರು ಕೂಡ ಮೊದಲ ಸ್ಥಾನ ಪಡೆಯುವಲ್ಲಿ ವಿಫಲವಾಗಿ ಸ್ವಚ್ಚ ನಗರ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಕಳೆದ 2015 ಮತ್ತು 2016 ರ ವರ್ಷದಲ್ಲಿ ಸತತ ಎರಡು ಬಾರಿಯೂ ಕೂಡ ದೇಶದ ಸ್ವಚ್ಚ ನಗರ ಪೈಕಿ ನಂಬರ್ ಒನ್ ಸ್ಥಾನ ಪಡೆದಿದ್ದ ಮೈಸೂರಿಗೆ ಇದೀಗ ಸಮಗ್ರ ವಿಭಾಗದಲ್ಲಿ ಹನ್ನೊಂದನೇ ಸ್ಥಾನ ದೊರೆತಿದೆ. ಆದರೆ ಸಮಾಧಾನಕರ ವಿಚಾರ ಅಂದರೆ ಅರಮನೆ ನಗರಿ ಮೈಸೂರು ಈ ಸಲ ವಿವಿಧ ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ.

ಕೇಂದ್ರದ ವಸತಿ ಮತ್ತು ನಗರಾಭಿವೃದ್ದಿ ವ್ಯವಹಾರಗಳ ಸಚಿವಾಲಯವು ರಾಷ್ಟ್ರ ಮಟ್ಟದಲ್ಲಿ ಸ್ವಚ್ಚ ಸರ್ವೇಕ್ಷಣ್ ಅನ್ನು 2015 ರಿಂದ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮ ಆರಂಭವಾದ ಎರಡು ವರ್ಷಗಳಲ್ಲಿ ಮೈಸೂರು ದೇಶದ ನಂಬರ್ ಒನ್ ಸ್ವಚ್ಚ ನಗರ ಎಂಬ ಕೀರ್ತಿಗೆ ಹೆಸರುವಾಸಿಯಾಗಿತ್ತು. ಇದೀಗ ಸಾಂಸ್ಕೃತಿಕ ನಗರಿ ಮೈಸೂರು ನಗರ ಸಮಗ್ರ ವಿಭಾಗದಲ್ಲಿ 11 ನೇ ಸ್ಥಾನ ಪಡೆದರು ಕೂಡ ಸ್ವಯಂ ಸುಸ್ಥಿರ ನಗರಗಳ ಪೈಕಿ ಮೈಸೂರು ನಗರ ದೇಶಕ್ಕೆ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ಫೈವ್ ಸ್ಟಾರ್ ರ್ಯಾಂಕಿಂಗ್ ನೊಂದಿಗೆ ತ್ಯಾಜ್ಯ ಮುಕ್ತ ನಗರ ಗಳ ಪೈಕಿ ಏಳನೇ ಸ್ಥಾನದ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ.

ಇನ್ನು ಸಫಾಯಿ ಮಿತ್ರ ಸುರಕ್ಷಾ ಪ್ರಶಸ್ತಿಯಲ್ಲಿ ಮೈಸೂರು ನಗರ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಅದರೊಂದಿಗೆ ಪೌರ ಕಾರ್ಮಿಕರ ಸಮವಸ್ತ್ರ ವಿನ್ಯಾಸ ಪ್ರಶಸ್ತಿ ವಿಭಾಗದಲ್ಲಿ ಮೈಸೂರು ಎರಡನೇ ಸ್ಥಾನ ಪಡೆದುಕೊಂಡಿದೆ. 2021 ಸಾಲಿನ ಸ್ವಚ್ಚ ನಗರ ಪ್ರಶಸ್ತಿಗೆ ಮಧ್ಯ ಪ್ರದೇಶದ ಇಂದೋರ್ ನಗರ ಆಯ್ಕೆಯಾಗಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಇಂದೋರ್ ನಗರ ಸ್ವಚ್ಚ ನಗರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇಂದೋರ್ ನಗರ ನಂತರ ಗುಜರಾತಿನ ಸೂರತ್ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶದ ವಿಜಯವಾಡ ನಗರವಿದೆ.

ಕೇಂದ್ರ ಸರ್ಕಾರ ನೀಡುವ ಈ ಸ್ವಚ್ಚ ನಗರ ಪುರಸ್ಕಾರವನ್ನು ನಗರಾಭಿವೃದ್ದಿ ಸಚಿವರಾದ ಭೈರತಿ ಬಸವರಾಜ್ ಸ್ವೀಕರಿಸಿದರು. ಕರ್ನಾಟಕದ ಮೈಸೂರು ನಗರ, ತುಮಕೂರು, ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಮತ್ತು ಉದ್ಯಾನ ನಗರಿ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಸ್ವಚ್ಚ ನಗರ ಪುರಸ್ಕಾರ ಕೂಡ ಲಭಿಸಿದೆ. ಇನ್ನು ಈ ಸಲದ ಸ್ವಚ್ಚ ಸರ್ವೇಕ್ಷಣೆಯಲ್ಲಿ ನಲವತ್ತು ಲಕ್ಷಕ್ಕೂ ಅಧಿಕ ಮಂದಿಯನ್ನು ಹೊಂದುವ ಮೂಲಕ ಗಾರ್ಡನ್ ಸಿಟಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

%d bloggers like this: