ಜನ ಸಿನಿಮಾಗಳನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಾರೊ ಗೊತ್ತಿಲ್ಲ ಆದರೆ ಕಿರುತೆರೆಯನ್ನು ಮಾತ್ರ ಎಲ್ಲರೂ ಇಷ್ಟಪಡುತ್ತಾರೆ. ಎಷ್ಟೋ ಗೃಹಿಣಿಯರಿಗೆ ಕಿರುತೆರೆಯಲ್ಲಿ ಬರುವಂತಹ ಧಾರಾವಾಹಿಗಳು ಅವರ ಜೀವನದ ಭಾಗವೇ ಆಗಿವೆ. ಅದರಲ್ಲೂ ಕಿರುತೆರೆಯ ನಟ-ನಟಿಯರಿಗೆ ನಮ್ಮ ಜನ ತೋರುವ ಪ್ರೀತಿ ಅಭಿಮಾನ ಗೌರವ ಊಹೆಗೆ ನಿಲುಕದ್ದು.
ಅದೆಷ್ಟು ಕಿರುತೆರೆಯ ಕಲಾವಿದರು ಜನರ ಪ್ರೀತಿ ಅಭಿಮಾನ ಗಳಿಸಿ ಚಿತ್ರರಂಗಕ್ಕೂ ಬಂದಉದಾಹರಣೆಗಳು ಸಾಕಷ್ಟಿವೆ. ಈಗ ನಾವು ಹೇಳ ಹೊರಟಿರುವುದು ಅಂತಹುದೇ ಕಿರುತೆರೆಯ ಖ್ಯಾತ ನಟಿಯ ಬಗ್ಗೆ. ಹೌದು ಅವರ್ಯಾರು ಅಲ್ಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಮೂಲಕ ಕನ್ನಡದ ಮನೆ ಮಾತಾದ ಮೊಕ್ಷಿತ ಪೈ.
ಹೌದು ಈ ನಟಿ ಈಗ ತಮ್ಮ ಹುಟ್ಟುಹಬ್ಬಇರುವ ಕಾರಣ ತಾವು ಕಷ್ಟಪಟ್ಟು ದುಡಿದ ಸಂಪಾದನೆಯಲ್ಲಿ ತಮ್ಮ ಕನಸಿನ ಕಾರೊಂದನ್ನು ಖರೀದಿ ಮಾಡಿದ್ದಾರೆ. ಸುಮಾರು 15 ಲಕ್ಷ ಬೆಲೆಬಾಳುವ ಹುಂಡೈ ಕಂಪನಿಯ ಕಾರನ್ನು ಮೊಕ್ಷಿತ ಪೈ ಅವರು ಕೊಂಡುಕೊಂಡಿದ್ದಾರೆ.
ಈ ವಿಷಯವನ್ನು ಸ್ವತಃ ಮೋಕ್ಷಿತ ಅವರೇ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಹಂಚಿಕೊಂಡಿದ್ದಾರೆ. ಅವರ ಈ ಫೋಟೋಗೆ ಅಭಿಮಾನಿಗಳು ಕೂಡ ತುಂಬಾ ಪ್ರೀತಿಯಿಂದ ಶುಭಹಾರೈಸಿದ್ದಾರೆ. ಕಿರುತೆರೆಗೆ ಬರುವ ಮುನ್ನ ಶಾಲಾ ಮಕ್ಕಳಿಗೆ ಟ್ಯೂಷನ್ ಹೇಳಿ ಜೀವನ ನಡೆಸುತ್ತಿದ್ದ ಮೋಕ್ಷಿತ ಅವರು ಇದೀಗ ಎಲ್ಲರ ಮನೆ ಮಾತಾಗಿದ್ದಾರೆ.