ಸ್ವತಃ ಕನ್ನಡದಲ್ಲೇ ಡಬ್ ಮಾಡಿ ತಮ್ಮ ಹೊಸ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿರುವ ನಟಿ ಸಾಯಿ ಪಲ್ಲವಿ ಅವರು

ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ ಚಿತ್ರ ಕನ್ನಡದಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ. ಈ ಚಿತ್ರ ರಿಲೀಸ್ ಮಾಡುವ ಜವಾಬ್ದಾರಿಯನ್ನು ಕನ್ನಡ ಚಿತ್ರರಂಗದ ಯಶಸ್ವಿ ಸಂಸ್ಥೆಯೊಂದು ವಹಿಸಿಕೊಂಡಿದೆ. ಹೌದು ಸಾಯಿ ಪಲ್ಲವಿ ಅಂದರೆ ಸಾಕು ಥಟ್ಟನೆ ನೆನಪಾಗೋದು ನಗು. ಆ ನಗುವಿನ ಜೊತೆಗೆ ಡ್ಯಾನ್ಸ್. ಬಳ್ಳಿಯಂತೆ ನಗುಮೊಗದೊಂದಿಗೆ ಆಕರ್ಷಕವಾಗಿ ಸೆಳೆಯುವ ಈ ಸಹಜ ಸುಂದರಿಯನ್ನ ಎಲ್ಲರೂ ತಮ್ಮ ಮನೆಯ ಹುಡುಗಿಯಂತೆ ಕಾಣುತ್ತಾರೆ. ಸಾಯಿ ಪಲ್ಲವಿ ಅವರ ಸಿನಿಮಾಗಳನ್ನ ಪ್ರೇಕ್ಷಕರು ಇಡೀ ಕುಟುಂಬ ಸಮೇತ ಹೋಗಿ ನೋಡುತ್ತಾರೆ. ಸಾಯಿ ಪಲ್ಲವಿ ಅವರು ಒಬ್ಬ ನಟಿಯಾಗಿ ಎಷ್ಟು ಇಷ್ಟವಾಗುತ್ತಾರೋ, ಅಷ್ಟೇ ಅವರ ವ್ಯಕ್ತಿತ್ವದಿಂದಾನೂ ಕೂಡ ಅಚ್ಚು ಮೆಚ್ಚಾಗುತ್ತಾರೆ. ವೈದ್ಯೆಯಾಗಿರುವ ಅವರು ಇತ್ತೀಚೆಗೆ ಮನುಷ್ಯತ್ವ, ಮಾನವೀಯ ಮೌಲ್ಯ ವಿಚಾರಗಳ ಬಗ್ಗೆ ಮಾತಾನಾಡಿದಾಗ ಎಲ್ಲೆಡೆ ಭಾರಿ ಮೆಚ್ಚುಗೆಗೆ ಪಾತ್ರವಾದರು.

ಸಾಯಿಪಲ್ಲವಿ ಅವರು ತೆಲುಗು,ತಮಿಳು ಮತ್ತು ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಭಾಷೆಯಲ್ಲಿ ಕನ್ನಡದಲ್ಲಿ ಮಾತ್ರ ಏಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆ ಅನೇಕ ವರ್ಷಗಳಿಂದ ಕನ್ನಡ ಸಿನಿ ಪ್ರೇಕ್ಷಕರು ಕೇಳುತ್ತಲೇ ಇದ್ದರು. ಅದಕ್ಕೆ ಕನ್ನಡ ಸಿನಿಮಾ ಆಫರ್ ಅವರಿಗೆ ಸಿಕ್ಕಿದ್ಯೋ ಅಥವಾ ಅವರಿಗೆ ಇಷ್ಟವಾದ ಕಥೆ ಅವರಿಗೆ ಸಿಕ್ಕಿಲ್ಲವೋ ಗೊತ್ತಿಲ್ಲ. ಆದರೆ ಇದೀಗ ನಟಿ ಸಾಯಿ ಪಲ್ಲವಿ ಅವರ ಚಿತ್ರ ಕನ್ನಡಕ್ಕೂ ಡಬ್ ಆಗಿದೆ. ಹೌದು ತಮಿಳಿನ ಗಾರ್ಗಿ ಸಿನಿಮಾ ಕನ್ನಡಕ್ಕೂ ಕೂಡ ಡಬ್ ಆಗಿದೆ. ಸ್ವತಃ ನಟಿ ಸಾಯಿ ಪಲ್ಲವಿ ಅವರೇ ಧ್ವನಿ ನೀಡಿರುವುದು ವಿಶೇಷ. ಇನ್ನು ಈ ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡಲು ಸಾಯಿ ಪಲ್ಲವಿ ಅವರು ಬೆಂಗಳೂರಿಗೆ ಬಂದಿದ್ದರು. ಶೀತಲ್ ಶೆಟ್ಟಿ ಅವರ ಸಹಕಾರದೊಂದಿಗೆ ಸಾಯಿ ಪಲ್ಲವಿ ಅವರು ಡಬ್ ಮಾಡಿದ್ದರು. ಈ ಗಾರ್ಗಿ ಸಿನಿಮಾ ಇದೇ ಮೇ 10ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ.

ಅಂದು ಸಾಯಿ ಪಲ್ಲವಿ ಅವರ 30ನೇ ವರ್ಷದ ಜನ್ಮದಿನಾಚರಣೆ ಹಿನ್ನೆಲೆ ಅಂದೇ ಗಾರ್ಗಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಗಾರ್ಗಿ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈ ಚಿತ್ರಕ್ಕೆ ರವಿಚಂದ್ರನ್, ರಾಮಚಂದ್ರನ್, ಐಶ್ವರ್ಯ ಲೇಕ್ಷಿ, ಥಾಮಸ್ ಜಾರ್ಜ್ ಮತ್ತು ಗೌತಮ್ ರಾಮಚಂದ್ರನ್ ಜಂಟಿಯಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಗೌತಮ್ ರಾಮಚಂದ್ರನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಗಾರ್ಗಿ ಚಿತ್ರದಲ್ಲಿ ಸಾಯಿ ಪಲ್ಲವಿ ಅವರೊಟ್ಟಿಗೆ ಕಾಳಿ ವೆಂಕಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗೋವಿಂದ್ ವಸಂತ ರಾಗ ಸಂಯೋಜನೆ ಮಾಡಿದ್ದಾರೆ. ಗಾರ್ಗಿ ಚಿತ್ರದ ಕನ್ನಡ ಅವತರಿಣಿಕೆಯನ್ನ ಕೆ.ಆರ್.ಜಿ ಸ್ಟೂಡಿಯೋಸ್ ಅವರ ಬ್ಯಾನರಡಿಯಲ್ಲಿ ಕಾರ್ತಿಕ್ ಗೌಡ ಅವರು ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಅವರು ಕನ್ನಡಕ್ಕೆ ಬರುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷದ ವಿಚಾರವಾಗಿದೆ.

%d bloggers like this: