ತಾವೇ ಬೆಳೆದ ತರಕಾರಿಗಳನ್ನು ದುಬೈಗೆ ರಫ್ತ್ತು ಮಾಡ್ತಿದ್ದಾರೆ ಭಾರತದ ಖ್ಯಾತ ಆಟಗಾರ

ಕ್ರಿಕೆಟ್ ಲೋಕದ ಅಬ್ಬರದ, ಆಕ್ರಮಣಕಾರಿ ಆಟದ ಜೊತೆಗೆ ತನ್ನ ವಿಭಿನ್ನ ಲಾಂಗ್ ಹೇರ್ ಸ್ಟೈಲ್ ಮೂಲಕ ಎಲ್ಲರ ಗಮನಸೆಳೆದಿದ್ದ ಆಟಗಾರ ಅಂದರೆ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಕಪಿಲ್ ದೇವ್ ನಂತರದ ನಾಯಕತ್ವದಲ್ಲಿ ದಶಕಗಳ ನಂತರ ವಿಶ್ವ ಕಪ್ ಮುಡಿಗೇರಿಸಿದ ಕೀರ್ತಿ ಎಂ.ಎಸ್ ಧೋನಿಗೆ ದೊರೆತಿದೆ. ಅವರ ನಾಯಕತ್ವಕ್ಕೆ ಕ್ರಿಕೆಟ್ ದಿಗ್ಗಜರು ಭಾರಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು, ಎಂತಹ ಸೋಲನ್ನ ಸಹ ನಗುತ್ತಾ ಆರಾಮಾಗಿ ಸ್ವೀಕರಿಸುವ ಗುಣದ ಜೊತೆಗೆ ತನ್ನ ಎದುರಾಳಿಗೆ ನಂತರದ ಪಂದ್ಯಗಳಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದಿಂದ ತಕ್ಕ ಉತ್ತರ ನೀಡುತ್ತಿದ್ದರು.

ಕ್ಯಾಪ್ಟನ್ ಕೂಲ್ ಎಂದು ಕರೆಯುವುದಕ್ಕೆ ಅವರ ಶಾಂತರೂಪದ ಸ್ವಭಾವವೇ ಕಾರಣ, ಧೋನಿ ಕ್ರಿಕೆಟ್ ನಲ್ಲಿ ಮಾತ್ರ ಹೆಸರು ಮಾಡಿದವರಲ್ಲ ಜಾಹೀರಾತು ನೀಡಿ ಅವರು ಪಡೆಯುತ್ತಿದ್ದ ಸಂಭಾವನೆ ಮೂಲಕವು ಭಾರಿ ಸುದ್ದಿ ಯಾಗುತ್ತಿದ್ದರು ತದನಂತರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಸ್ವಯಂಪ್ರೇರಿತವಾಗಿ ನಿವೃತ್ತಿ ಹೊಂದಿದರು. ಇದೀಗ ಮತ್ತೆ ಎಂ.ಎಸ್ ಧೋನಿ ಮತ್ತೆ ಸುದ್ದಿಯಾಗಿ ಅವರ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ.

ಹೌದು ಮಹೇಂದ್ರ ಸಿಂಗ್ ಧೋನಿ ಕೃಷಿಯಲ್ಲಿಯೂ ಸಹ ತೊಡಗಿಕೊಂಡಿದ್ದಾರೆ, ಅವರು ಜಾರ್ಖಂಡ್ ರಾಜ್ಯದ ರಾಂಚಿಯ ಸೆಂಬೋಗ್ರಾಮದ ರಿಂಗ್ ರೋಡ್ ನಲ್ಲಿ ಸುಮಾರು 43 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅದರಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ತೋಟ ಗಾರಿಕಾ ಬೆಳೆಗಳನ್ನು ಬೆಳೆದಿದ್ದು ತೋಟದಲ್ಲಿ ತಾವೇ ಸ್ವತಃ ಕೆಲಸ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲ ತಾಣ ದಲ್ಲಿ ವೈರಲ್ಆಗಿದೆ. ಇವರತೊಟದಲ್ಲಿ ಬೆಳೆದ ತರಕಾರಿಗಳನ್ನು ದುಬೈ ದೇಶದ ನಗರಗಳಿಗೆ ರಫ್ತು ಮಾಡ ಲಾಗುತ್ತಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ‌.

ಧೋನಿಯವರ ತೋಟದಲ್ಲಿ ಸ್ಟ್ರಾಬೆರಿ, ಎಲೆಕೋಸು, ಟಮೋಟ, ಕೋಸುಗಡ್ಡೆ, ಬಟಾಣೆ, ಮತ್ತು ಪಪ್ಪಾಯಿ ಯಂತಹ ಬೆಳೆಗಳನ್ನುಬೆಳೆಯುತ್ತಾರೆ. ಇವರ ತರಕಾರಿ ಬೆಳೆಗಳಿಗೆ ರಾಂಚಿ ಮಾರುಕಟ್ಟೆಯ್ಲಲಿ ಭಾರಿ ಬೇಡಿಕೆಯು ಕೂಡ ಬರುತ್ತಿದ್ದು ಇನ್ನಷ್ಟು ತೋಟಗಾರಿಕಾ ಬೆಳೆಯನ್ನು ಬೆಳೆಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತೋಟದ ನಿರ್ವಾಹಕರು ತಿಳಿಸುತ್ತಾರೆ. ಧೋನಿಗೆ ಕ್ರಿಕೆಟ್, ಹೊರತು ಪಡಿಸಿ ವ್ಯವಸಾಯ ಕ್ಷೇತ್ರದಲ್ಲಿಯೂ ಕೂಡ ಆಸಕ್ತಿಯಿದೆ ಎಂದು ತಿಳಿಸಿದರು.

%d bloggers like this: