ತಾವೇ ಹಾಡು ಬರೆದು, ಸ್ವತಃ ತಾವೇ ಹಾಡಿ, ಮಗಳನ್ನು ಪರಿಚಯ ಮಾಡಿಕೊಡಲು ಸಿದ್ದರಾದ ಕನ್ನಡ ನಟ

ಲೂಸಿಯಾ ಚಿತ್ರದ ಮೂಲಕ ಹೀರೋ ಪಟ್ಟ ಗಿಟ್ಟಿಸಿಕೊಂಡ ನಟ ನೀನಾಸಂ ಸತೀಶ್. ರಂಗಭೂಮಿಯ ಕಲಾವಿದರಾದ ಇವರು, ಲೂಸಿಯಾ ಚಿತ್ರಕ್ಕಿಂತ ಮೊದಲು ಸಣ್ಣ ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. ರಂಗಭೂಮಿಯಿಂದಲೇ ಮಿಂಚಿದ ಈ ಪ್ರತಿಭೆ, ತಮ್ಮ ಡಿಫರೆಂಟ್ ಸ್ಟೋರಿ ಗಳಿಂದ ಜನರ ಮೆಚ್ಚುಗೆ ಗಳಿಸಿದವರು. ಯಾವಾಗಲೂ ತರ್ಲೆ, ತಮಾಷೆಗಳೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಸತೀಶ್, ಕಾಮಿಡಿ ಮೂಲಕವೇ ಜನಕ್ಕೆ ಚಿತ್ರದ ಸಂದೇಶ ತಿಳಿಸುತ್ತಿದ್ದವರು. ಸತೀಶ್ ಅವರ ಹಲವಾರು ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಕಾಯುತ್ತಿವೆ. ಇನ್ನು ನಟ ನೀನಾಸಂ ಸತೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇವರಿಬ್ಬರು ಅಯೋಗ್ಯ ಸಿನಿಮಾದ ನಂತರ ಮತ್ತೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಅಯೋಗ್ಯ ಸಿನಿಮಾದ ಮೂಲಕ ಹಿಟ್ ಆಗಿದ್ದ ಈ ಜೋಡಿ ಈಗ ಮತ್ತೆ ಒಂದಾಗುತ್ತಿದೆ.

ಇನ್ನು ನಟ ಸತೀಶ್ ನಟನೆಯ ಹಲವು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿದ್ದು, ಕೆಎಸ್ ನಂದೀಶ್ ನಿರ್ದೇಶನದ ಗೋದ್ರಾ ಮತ್ತು ವಿಜಯ್ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಬಿಡುಗಡೆಗೆ ಸಜ್ಜಾಗಿವೆ. ಇನ್ನು ಸತೀಶ್ ಹಾಗೂ ರಚಿತಾ ರಾಮ್ ಅವರ ಕಾಂಬಿನೇಷನ್ನ ಚಿತ್ರ ಮ್ಯಾಟ್ನಿ, ಈಗಾಗಲೇ ಚಿತ್ರೀಕರಣ ಶೇಖಡಾ 60% ಮುಗಿದಿದೆ. ಇನ್ನು ಮ್ಯಾಟ್ನಿ ಸಿನಿಮಾದ ನಾಲ್ಕನೇ ಶೆಡ್ಯೂಲ್ ಚಿತ್ರೀಕರಣ ಆರಂಭವಾಗಿದ್ದು, ಚಿತ್ರೀಕರಣ ಪೂರ್ಣಗೊಳ್ಳಲು ಒಂದೂವರೆ ತಿಂಗಳು ಬೇಕು ಎಂದು ತಿಳಿಸಿದ್ದಾರೆ. ಯಾವಾಗಲೂ ಏನಾದರೂ ವಿಶೇಷವಾಗಿ ಮಾಡುವ ಸತೀಶ್, ಈ ಬಾರಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.

ಹೌದು ನೀನಾಸಂ ಸತೀಶ್ ಒಬ್ಬ ಅಭಿನಯ ಚತುರ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಟಿಸಿ ತಾನೊಬ್ಬ ಅಪ್ರತಿಮ ಕಲಾವಿದ ಎಂಬುದನ್ನು ಸಾಬೀತು ಪಡಿಸಿದ ನಟ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮೊದಲಬಾರಿಗೆ ತಮ್ಮ ಮುದ್ದು ಮಗಳ ಫೋಟೋವೊಂದನ್ನು ಅಭಿಮಾನಿಗಳು, ಸ್ನೇಹಿತರೊಂದಿಗೆ ಹಂಚಿಕೊಂಡ ಸತೀಶ್, ಮಗಳಿಗಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು ನಟ ಸತೀಶ್ ತಮ್ಮ ಮಗಳಿಗಾಗಿ ಒಂದು ಹಾಡನ್ನು ರಚಿಸಿದ್ದಾರೆ. ಹಾಡಷ್ಟೇ ಅಲ್ಲ ಸಂಗೀತ ಸಂಯೋಜನೆ ನೀಡಿ, ಹಾಡುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ತಮ್ಮ ಮಗಳಾದ ಮನಸ್ವಿತಾರನ್ನು ಪರಿಚಯ ಮಾಡಿಕೊಡುವ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ಸತೀಶ್ ಕೇವಲ ನಟರಷ್ಟೇ ಅಲ್ಲದೇ, ಗೀತೆ ರಚಣೆಕಾರರಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಮಿಂಚಲು ರೆಡಿ ಆಗಿದ್ದಾರೆ. ಈ ವಿಶೇಷವಾದ ಆಲ್ಬಮ್ ಸದ್ಯದಲ್ಲೇ ರಿಲೀಸ್ ಆಗಲಿದೆ.

%d bloggers like this: