ತಮಿಳು ಆಯಿತು ಈಗ ಹಿಂದಿಯಲ್ಲೂ ಸಿನಿಮಾ ಆಗಿ ಸಿದ್ಧವಾಗುತ್ತಿದೆ ಕನ್ನಡಿಗನ ಜೀವನ ಚರಿತ್ರೆ

ಕರ್ನಾಟಕದ ಸಾಧಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್. ಹೌದು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಅಸಾಮಾನ್ಯ ಸಾಧಕ ವ್ಯಕ್ತಿಗಳು ಕರ್ನಾಟಕದಲ್ಲಿ ಅನೇಕರಿದ್ದಾರೆ. ಅಂತರ ಸಾಧಕರಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರು ಕೂಡ ಒಬ್ಬರು. ಕರ್ನಾಟಕದ ಹಾಸನದವರಾದ ಗೋಪಿನಾಥ್ ಅವರು ಭಾರತದ ವಾಯು ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಪ್ರಮುಖವಾಗಿ ಕ್ಯಾಪ್ಟನ್ ಗೋಪಿನಾಥ್ ಅವರು ಬಾಂಗ್ಲಾ ದೇಶದ ವಿಮೋಚನಾ ಸಂಧರ್ಭದಲ್ಲಿ ಭಾಗವಹಿಸಿದ್ದರು. ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಜನ ಸಾಮಾನ್ಯರು ಸಹ ಅತಿ ಕಡಿಮೆ ಬೆಲೆಗೆ ವಿಮಾನದಲ್ಲಿ ಹೋರಾಡಬೇಕು ಎಂಬ ಮಹದಾಸೆ ಇತ್ತು. ಅದರಂತೆಯೇ ತಮ್ಮ ಕನಸಿನಂತೆಯೇ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಮುಖಾಂತರ ಅತ್ಯಂತ ಕಡಿಮೆ ಬೆಲೆಯ ಏರ್ ಡೆಕ್ಕನ್ ಎಂಬ ವಿಮಾನಯಾನ ಸಂಸ್ಥೆಯನ್ನ ಹುಟ್ಟು ಹಾಕಿದರು.

ಈಗಾಗ್ಲೇ ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಅವರು ಕನ್ನಡದ ಕ್ಯಾಪ್ಟನ್ ಗೋಪಿನಾಥ್ ಅವರ ಸ್ಫೂರ್ತಿದಾಯಕ ಕಥೆಯನ್ನು ಸೂರರೈ ಪೋಟ್ರು ಎಂಬ ಚಿತ್ರ ಮಾಡಿ ಗೆದ್ದಿದ್ದಾರೆ. ನಿರ್ದೇಶಕಿ ಸುಧಾ ಅವರು ತೆರೆ ಮೇಲೆ ಕ್ಯಾಪ್ಟನ್ ಗೋಪಿನಾಥ್ ಅವರ ಕಥೆಯನ್ನು ಕಮರ್ಷಿಯಲ್ ಆಗಿ ಎಷ್ಟು ಬೇಕೋ ಅಷ್ಟನ್ನ ಮಾತ್ರ ಬಳಸಿಕೊಂಡಿದ್ದಾರೆ. ಇದು ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಕಥೆ ಸಿಂಪ್ಲಿ ಫ್ಲೈ ಎಂಬ ಪುಸ್ತಕದಲ್ಲಿ ಇದ್ದಂತೆ ಗೋಪಿನಾಥ್ ಸಂಪೂರ್ಣ ಬದುಕು ಈ ಚಿತ್ರದಲ್ಲಿ ಅನಾವರಣ ಆಗಿಲ್ಲ ಎಂದು ಅನೇಕರು ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೆಲ್ಲದರ ನಡುವೆ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅಷ್ಟೇ ಅಲ್ಲದೆ ಈ ಸೂರರೈ ಪೋಟ್ರು ಸಿನಿಮಾ ಕನ್ನಡ ಭಾಷೆಗೂ ಕೂಡ ಡಬ್ ಆಗಿ ರಿಲೀಸ್ ಆಗಿತ್ತು. ಚಿತ್ರ ನೋಡಿದ ಪ್ರೇಕ್ಷಕರು ಒಳ್ಳೆಯ ರೆಸ್ಪಾನ್ಸ್ ಸಹ ನೀಡಿದ್ದರು.

ಇದೀಗ ಈ ಸೂರರೈ ಪೋಟ್ರು ಸಿನಿಮಾ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ. ಇದನ್ನ ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ನಿರ್ದೇಶಕಿ ಸುಧಾ ಕೊಂಗರ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರ ಪಾತ್ರದಲ್ಲಿ ಆಕ್ಷನ್ ಕಿಂಗ್ ನಟ ಅಕ್ಷಯ್ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ. ಪತ್ನಿಯ ಪಾತ್ರದಲ್ಲಿ ನಟಿ ರಾಧಿಕಾ ಮೆನನ್ ಅವರು ಬಣ್ಣ ಹಚ್ಚಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರೆವೇರಿದೆ. ಈ ಚಿತ್ರದ ಮುಹೂರ್ತದ ಒಂದಷ್ಟು ಫೋಟೋಗಳನ್ನ ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಒಟ್ಟಾರೆಯಾಗಿ ಕನ್ನಡದ ಸಾಧಕನ ಸ್ಪೂರ್ತಿಯ ಬದುಕು ಇದೀಗ ದೇಶಾದ್ಯಂತ ತಿಳಿಯುತ್ತಿರುವುದು ಕನ್ನಡಗರೆಲ್ಲರಿಗೂ ಹೆಮ್ಮೆಯೇ ಸರಿ ಎನ್ನಬಹುದು.

%d bloggers like this: