ಧ್ರುವ ಸರ್ಜಾ ಮಾಡಿದ್ದು ಕೇವಲ ಎರಡೇ ಫಿಲ್ಮ್ ಆದರೂ ಅವರ ಅಭಿಮಾನಿ ಬಳಗ ಕರ್ನಾಟಕದಲ್ಲಿ ಬಹಳ ದೊಡ್ಡದು ತಮ್ಮ ಡೈಲಾಗ್ ಹಾಗೂ ಖಡಕ್ ಅಭಿನಯದ ಮೂಲಕ ಧ್ರುವ ಅವರು ಸರಾಗವಾಗಿ ಹಾಕು ವೇಗವಾಗಿ ಅಭಿಮಾನಿಗಳನ್ನು ತಮ್ಮೆಡೆಗೆ ಸೆಳೆಯುತ್ತಾರೆ. ಇವರ ಕೊನೆಯ ಚಿತ್ರ ‘ಭರ್ಜರಿ’ ಬಿಡುಗಡೆಯಾಗಿ ಎರಡು ವರ್ಷಗಳ ಮೇಲೆ ಆಯಿತು ಆದರೂ ಇದುವರೆಗೆ ಧ್ರುವ ಸರ್ಜಾ ಅವರ ಹೊಸಚಿತ್ರ ಬಂದಿಲ್ಲ. ಆದರೆ ಕೊರೋನಾ ಕಾರಣದಿಂದ ಚಿತ್ರೀಕರಣ ತಡವಾಗಿದ್ದ ಪೊಗರು ಚಿತ್ರ ಈಗ ವೇಗವಾಗಿ ನಡೆಯುತ್ತಿದೆ. ಈಗ ಹೊಸ ವಿಷಯ ಏನೆಂದರೆ ಪೊಗರು ಚಿತ್ರ ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.

ಹೌದು ಕನ್ನಡದ ಹಾಗೂ ಧ್ರುವ ಸರ್ಜಾ ಅವರ ಜೀವನದ ಬಹುಮುಖ್ಯ ಚಿತ್ರ ಈ ಪೊಗರು ಚಿತ್ರ, ದೊಡ್ಡದಾಗಿ ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ನಿನ್ನೆ ಯೂಟ್ಯೂಬಲ್ಲಿ ಪೊಗರು ಚಿತ್ರದ ಅವತರಣಿಕೆಯ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದ್ದು ಬಿಡುಗಡೆಯಾದ ಕೇವಲ 24 ಗಂಟೆಯೊಳಗೆ ಬರೋಬ್ಬರಿ ಮೂರು ಮಿಲಿಯನ್ ಅಂದರೆ 30 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಕನ್ನಡದಿಂದ ಡಬ್ ಆಗಿ ಬಿಡುಗಡೆಯಾದರೆ ಚಿತ್ರಗಳ ಪೈಕಿ ಇದು ದೊಡ್ಡ ಸಾಧನೆಯೇ ಸರಿ, ಮೂಲಕ ಧ್ರುವ ಸರ್ಜಾ ಅವರ ತಮಿಳುನಾಡಿನ ಪ್ರೇಕ್ಷಕರನ್ನು ರಂಜಿಸಲು ಸಿದ್ದರಾಗಿದ್ದಾರೆ.