ತಮಿಳಿನಲ್ಲಿ ರಿಮೇಕ್ ಆಗುತ್ತಿದೆ ಕನ್ನಡದ ಖ್ಯಾತ ಧಾರಾವಾಹಿ, ಅಲ್ಲಿಯೂ ಕೂಡಾ ಕನ್ನಡ ನಟಿ ನಾಯಕಿ

ಕನ್ನಡದ ಮತ್ತೊಂದು ಧಾರಾವಾಹಿ ಪರಭಾಷೆಗೆ ರೀಮೆಕ್ ಆಗುತ್ತಿದೆ. ಇದು ಕನ್ನಡಿಗರಿಗೆ ಅಚ್ಚರಿಯ ವಿಷಯ ಏನಲ್ಲ. ಆದರೆ ವಿಶೇಷ ಅಂದರೆ ತಮಿಳಿಗೆ ರೀಮೆಕ್ ಆಗುತ್ತಿರುವ ಈ ಧಾರಾವಾಹಿಯಲ್ಲಿ ಕನ್ನಡತಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು ಸದ್ಯದ ಮಟ್ಟಿಗೆ ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಯಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ತಮಿಳಿಗೆ ರೀಮೇಕ್ ಆಗುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡದಲ್ಲಿ ಈಗ ಅತೀ ಹೆಚ್ಚು ಪ್ರಸಿದ್ದತೆ ಪಡೆದುಕೊಂಡಿದೆ. ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು ಎಂದು ಗಂಡ ತ್ಯಜಿಸಿ ಮತ್ತೊಂದು ಮದುವೆ ಆಗುತ್ತಾನೆ. ಆಗ ಪುಟ್ಟಕ್ಕ ತನ್ನ ಮೂವರು ಮಕ್ಕಳನ್ನ ತನ್ನ ಗಂಡನಿಗೆ ಸವಾಲೊಡ್ಡಿ ತನ್ನ ಬದುಕನ್ನ ಸಾಗಿಸುತ್ತಾಳೆ.

ಒಬ್ಬಂಟಿಯಾಗಿ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ತನ್ನ ಇಡೀ ಬದುಕನ್ನ ತ್ಯಾಗ ಮಾಡಿರುತ್ತಾಳೆ. ಇದೀಗ ಇದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯು ತಮಿಳಿನಲ್ಲಿ ಮೀನಾಕ್ಷಿ ಪೋನ್ನುಂಗ ಎಂಬ ಶೀರ್ಷಿಕೆಯಡಿಯಲ್ಲಿ ಮೂಡಿ ಬರಲಿದೆ. ಕನ್ನಡದಲ್ಲಿ ಉಮಾಶ್ರೀ ನಿರ್ವಹಿಸಿದ ಪುಟ್ಟಕ್ಕನ ಪಾತ್ರವನ್ನ ಮೀನಾಕ್ಷಿ ಎಂಬ ಪಾತ್ರದಲ್ಲಿ ತಮಿಳಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಅರ್ಚನಾ ನಟಿಸುತ್ತಿದ್ದಾರೆ. ಜೊತೆಗೆ ಮೀನಾಕ್ಷಿ ಮಗಳಾಗಿ ಕನ್ನಡತಿ ನಟಿ ಮೋಕ್ಷಿತಾ ಪೈ ಅಭಿನಯಿಸುತ್ತಿದ್ದಾರೆ. ಮೋಕ್ಷಿತಾ ಪೈ ಅವರು ಕನ್ನಡದ ಪಾರು ಧಾರಾವಾಹಿ ಖ್ಯಾತಿಯ ನಟಿ. ಪುಟ್ಟಕ್ಕನ ಮಗಳು ಸ್ನೇಹ ಪಾತ್ರವನ್ನು ತಮಿಳಿನಲ್ಲಿ ಮೋಕ್ಷಿತಾ ಪೈ ನಿರ್ವಹಿಸಲಿದ್ದಾರೆ.

ಕನ್ನಡದಲ್ಲಿ ಸ್ನೇಹ ಪಾತ್ರವನ್ನು ನಟಿ ಸಂಜನಾ ಬುರ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಕನ್ನಡತಿ ಮೋಕ್ಷಿತಾ ಪೈ ಅವರು ತಮಿಳಿನ ಮೀನಾಕ್ಷಿ ಪೊನ್ನುಂಗ ಧಾರಾವಾಹಿಯಲ್ಲಿ ಮೀನಾಕ್ಷಿಯ ಮಗಳಾಗಿ ಅಭಿನಯಿಸುತ್ತಿದ್ದಾರೆ. ಕನ್ನಡತಿ ನಟಿ ಮೋಕ್ಷಿತಾ ಪೈ ಅವರು ಇದೇ ಮೊದಲ ಬಾರಿಗೆ ಪರಭಾಷೆಯಲ್ಲಿ ನಟಿಸುತ್ತಿದ್ದಾರೆ. ನಟಿ ಮೋಕ್ಷಿತಾ ಪೈ ಅವರು ತಮಿಳಿನಲ್ಲಿ ಅಭಿನಯಿಸುತ್ತಿರುವುದು ಅವರಿಗೆ ಖುಷಿಯ ವಿಚಾರವಂತೆ. ಇನ್ನು ಇಷ್ಟು ದಿನಗಳ ಕಾಲ ಕನ್ನಡ ಕಿರುತೆರೆಯ ವೀಕ್ಷಕರನ್ನ ರಂಜಿಸುತ್ತಿದ್ದ ಪಾರು ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರು ಇನ್ನು ಮುಂದೆ ತಮಿಳು ಕಿರು ವೀಕ್ಷಕರನ್ನ ರಂಜಿಸಲಿದ್ದಾರೆ. ಕನ್ನಡತಿ ಮೋಕ್ಷಿತಾ ಪೈ ಅವರನ್ನ ತಮಿಳು ವೀಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ.

%d bloggers like this: