ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್! ಈಗಾಗಲೇ ಕನ್ನಡದ ಹಲವು ಸ್ಟಾರ್ ನಟರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಭಾರತದ ಎಲ್ಲಾ ಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದ ಮೂಲಕ ಪಂಚ ಭಾಷೆಗಳಲ್ಲಿ ನಟಿಸಿದ್ದಾದೆ. ಇದೀಗ ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದಗಜ ಚಿತ್ರದ ಮೂಲಕ ರೋರಿಂಗ್ ಸ್ಟಾರ್ ಮುರುಳಿ ಅವರು ಇದೀಗ ಟಾಲಿವುಡ್, ಕಾಲಿವುಡ್ ನಲ್ಲಿ ಘರ್ಜಿಸಲು ಸಿದ್ದರಾಗಿದ್ದಾರೆ. ಕನ್ನಡದಲ್ಲಿ ಮದಗಜನಾಗಿ ತಮಿಳಿನಲ್ಲಿ ಮದಯಾನೈ ಆಗಿ ಟೀಸರ್ ಮೂಲಕ ಅಬ್ಬರಿಸಿದ್ದಾರೆ.

ಮದಯಾನೈ ಟೀಸರ್ ಬಿಡುಗಡೆಯಾದ 24 ಗಂಟೆಯಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆ ಪಡೆದು ಮೆಚ್ಚುಗೆ ಪಡೆದಿದೆ. ಮದಗಜ ಚಿತ್ರದ ತೆಲುಗು ಭಾಷೆಯ ಅವತರಣಿಕೆಯಲ್ಲಿ ಸ್ವತಃ ಮುರುಳಿಯವರೇ ಡಬ್ಬಿಂಗ್ ಮಾಡಿದ್ದಾರೆ, ಇವರ ಕಂಚಿನ ಕಂಠಕ್ಕೆ ತೆಲುಗು ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ತಮಿಳು ಭಾಷೆಯಲ್ಲಿ ಮುರುಳಿಯವರು ಡಬ್ಬಿಂಗ್ ಮಾಡುವುದಿಲ್ಲ ಎಂಬ ಮಾತು ಕೇಳಿಬಂತು, ಆದರೆ ಇದೀಗ ತಮಿಳು ಭಾಷೆಯಲ್ಲಿಯೂ ಕೂಡ ಸ್ವತಃ ಡಬ್ಬಿಂಗ್ ಮಾಡಿದ್ದಾರೆ. ಮಾಸ್ ಡೈಲಾಗ್ ಹೊಂದಿರುವ ಮದಯಾನೈ ತಮಿಳಿನ ಟೀಸರ್ ಈಗ ಯುಟ್ಯುಬ್ ನಲ್ಲಿ ವೈರಲ್ ಆಗಿದ್ದು ಇದುವರೆಗೂ ಆರುಲಕ್ಷ ವೀಕ್ಷಣೆ ಪಡೆದು ಭಾರಿ ಮೆಚ್ಚುಗೆ ಪಡೆದಿದೆ.