ತಮಿಳು ನಟ ದಳಪತಿ ವಿಜಯ್ ಜೊತೆ ಬರ್ತಿದ್ದಾರೆ ರಾಕಿ ಬಾಯ್ ನಟ ಯಶ್

ತಮಿಳು ಚಿತ್ರರಂಗದ ದಳಪತಿ ವಿಜಯ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟೀಸರ್ ಅಭಿಮಾನಿಗಳಿಗೆ ಡಬಲ್ ಧಮಾಕಾ! ಒಂದೆಡೆ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ಇದೇ ಜನವರಿ 13ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ, ಮತ್ತೊಂದೆಡೆ ಅದೇ ದಿನದಂದು ಕನ್ನಡದ ಗೋಲ್ಡನ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಭಾಗ2 ಟೀಸರ್ ಮಾಸ್ಟರ್ ಚಿತ್ರದ ವಿರಾಮದಲ್ಲಿ ಕೆಜಿಎಫ್ 2 ಚಿತ್ರದ ಟೀಸರ್ ಪ್ರದರ್ಶನ ಮಾಡಬಹುದಾಗಿದೆ. ಅದಕ್ಕೂ ಮೊದಲು ಜನವರಿ8 ಯಶ್ ಹುಟ್ಟುಹಬ್ಬ ಇರುವುದರಿಂದಅಂದು ಅಭಿಮಾನಿಗಳಿಗೆ ಕೊಡುಗೆಯಾಗಿ ಕೆಜಿಎಫ್ 2 ಚಿತ್ರದ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಜನವರಿ ತಿಂಗಳಲ್ಲಿ ಸಿನಿಜಗತ್ತಿಗೆ ಹಬ್ಬ ಎನ್ನಬಹುದು, ತಮಿಳುನಾಡು ಸರ್ಕಾರ ಚಿತ್ರಮಂದಿರದಲ್ಲಿ ಶೇಕಡಾ ನೂರರಷ್ಟು ಭರ್ತಿ ಮಾಡಬಹುದು ಎಂದು ಆದೇಶ ಹೊರಡಿಸಿರುವುದರಿಂದ ತಮಿಳು ಚಿತ್ರರಂಗ ಗರಿಗೆದರಿದೆ. ಹತ್ತು ತಿಂಗಳ ಲಾಕ್ಡೌನ್ ಬಳಿಕ ಮೊಟ್ಟ ಮೊದಲ ಭಾರಿಗೆ ಸ್ಟಾರ್ ನಟನ ದೊಡ್ಡ ಮಟ್ಟದ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಇತ್ತೀಚೆಗೆ ಬಿಡುಗಡೆಗೊಂಡ ಪೋಸ್ಟರ್ ಮುಖಾಂತರವೇ ಸಂಚಲನ ಮೂಡಿಸಿತ್ತು ಇನ್ನೇನು ಕೆಲವೇ ದಿನಗಳಲ್ಲಿ ಮಾಸ್ಟರ್ ಸಿನಿಮಾ ಥಿಯೇಟರ್ ಗೆ ಬರುತ್ತಿರುವುದರಿಂದ ಮಾಸ್ಟರ್ ಚಿತ್ರದ ಬಗ್ಗೆ ಪ್ರೇಕ್ಷಕರು ಕೂಡ ಅಪಾರ ನಿರೀಕ್ಷೆ ಇಟ್ಟುಕೊಂಡು ಕುತೂಹಲದಿಂದ ಕಾಯುತ್ತಿದ್ದಾರೆ.

ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿಯ ಜುಗಲ್ ಬಂದಿ ಸಿನಿಮಾ ಮಾಸ್ಟರ್, ನಾಯಕಿಯಾಗಿ ಮಾಳವಿಕಾ ಮೋಹನ್ ಬಣ್ಣ ಹಚ್ಚಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ತನ್ನ ಪೋಸ್ಟರ್ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದು ಜನವರಿ 13ರಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗಲಿದೆ. ಬಾಕ್ಸ್ ಅಫೀಸ್ ಕೊಳ್ಳೆ ಹೊಡೆಯುವ ಎಲ್ಲಾ ಲಕ್ಷಣಗಳಿದ್ದು ತಮಿಳು, ತೆಲುಗು, ಹಿಂದಿ ಜೊತೆಗೆ ಕನ್ನಡದ ಅವತರಣಿಕೆಯಲ್ಲಿಯೂ ಸಹ ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ.

%d bloggers like this: