ತಮಿಳುನಾಡಿನ ಚಿತ್ರಮಂದಿರ ಗಳಲ್ಲಿ ಇಂದಿನಿಂದ ಹೌಸ್ ಫುಲ್ ಗೆ ಅವಕಾಶ! ದೇಶದಲ್ಲಿ ಮೊಟ್ಟಮೊದಲ ಭಾರಿಗೆ ಚಿತ್ರ ಮಂದಿರಗಳಲ್ಲಿ ಎಲ್ಲಾ ಸೀಟು ಭರ್ತಿಯಾಗಬಹುದು ಎಂದು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಕೊರೋನ ಮಾರ್ಗ ಸೂಚಿಯಲ್ಲಿದ್ದ ಚಿತ್ರಮಂದಿರದ ಶೇಕಡಾ ಐವತ್ತರಷ್ಟು ಸೀಟು ಮಾತ್ರ ಭರ್ತಿ ಆಗಬೇಕು ಎಂಬ ಕೊರೊನ ಮಾರ್ಗಸೂಚಿಯನ್ನು ತೆಗೆದಿದೆ. ದೇಶದಲ್ಲಿ ಕೊರೊನ ವೈರಸ್ ಜೊತೆಗೆ ರೂಪಾತರಿ ಕೊರೋನ ವೈರಸ್ ಅಪಾಯದ ನಡುವೆ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಈ ನಿರ್ಧಾರರಾಜಕೀಯ ಲಾಭದ್ದಾಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತವೆ, ಮಾರ್ಚ್ ಅಥವಾ ಏಪ್ರೀಲ್ ತಿಂಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಆದ್ದರಿಂದ ಕೆಲವು ರಾಜಕೀಯ ಉದ್ದೇಶದಿಂದ ಇಂತಹ ಸಂಕಷ್ಟ ಅಪಾಯದ ಸಮಯದಲ್ಲಿ ಕೊರೊನ ಮಾರ್ಗ ಸೂಚಿಯಲ್ಲಿ ಚಿತ್ರ ಮಂದಿರಗಳಿಗೆ ಸಂಪೂರ್ಣ ರಿಯಾಯಿತಿ ನೀಡಿರುವುದು ಮೂರ್ಖತನದ ನಿರ್ಧಾರವಾಗಿದೆ ಎಂದು ತಮಿಳುನಾಡಿನ ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರನಟ ದಳಪತಿ ವಿಜಯ್ ತಮ್ಮ ಅಭಿನಯದ ಚಿತ್ರ ಬಿಡುಗಡೆಗೊಳ್ಳುತ್ತಿರುವ ಹಿನ್ನೆಲೆರಲ್ಲಿ ತಮಿಳುನಾಡು ಮುಖ್ಯಮಂತ್ರಿ ಪಳನಿ ಸ್ವಾಮಿಯವರನ್ನು ಭೇಟಿಮಾಡಿ ಚಿತ್ರಮಂದಿರದಲ್ಲಿ ಸಂಪೂರ್ಣ ಸೀಟ್ ಭರ್ತಿ ಮಾಡಲು ಅವಕಾಶ ಕೇಳಿ ಮನವಿ ಪತ್ರ ನೀಡಿದ್ದರು, ಮಾಸ್ಟರ್ ಚಿತ್ರ ಬಹು ನಿರೀಕ್ಷಿತ ಚಿತ್ರವಾಗಿದ್ದರಿಂದ ಈ ಮನವಿಗೆ ತಮಿಳುನಾಡು ಸರ್ಕಾರ ಕೂಡಲೇ ಸ್ಪಂದಿಸಿದೆ. ಚಿತ್ರ ಮಂದಿರಲ್ಲಿ ಶೇಕಡ ನೂರರಷ್ಟು ಭರ್ತಿ ಮಾಡಿದರು ಕೂಡ ಕೊರೋನ ಮಾರ್ಗ ಸೂಚಿ ನಿರಮಗಳಾದ ಮಾಸ್ಕ್, ಸ್ಯನಟೈಸರ್ ಬಳಕೆ ಕಡ್ಡಾಯವಾಗಿದೆ ಎಂದು ಚಿತ್ರಮಂದಿರದ ಮಾಲೀಕರು ತಿಳಿಸಿದ್ದಾರೆ.