ತಮಿಳುನಾಡಿನಲ್ಲಿ ದೊಡ್ಡ ದಾಖಲೆ ನಿರ್ಮಿಸಿದ ಕನ್ನಡದ ಮೊಟ್ಟಮೊದಲ ಚಿತ್ರ ಕೆಜಿಎಫ್ ಚಾಪ್ಟರ್2

ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ಸೈಡ್ ಲೈನ್ ಮಾಡಿ ಮುನ್ನುಗ್ಗುತ್ತಿದೆ. ಹತ್ತು ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್2 ಸಿನಿಮಾ ಇದೀಗ ಮತ್ತೊಂದು ದಾಖಲೆಯನ್ನು ಮುರಿದಿದೆ. ಹೌದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮೆರಗು ತಂದ ಸಿನಿಮಾ ಅಂದ್ರೆ ಅದು ಬಾಹುಬಲಿ ಸಿನಿಮಾ. ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಯಿತು. ಎಸ್ಎಸ್ ರಾಜಮೌಳಿ ನಿರ್ದೆಶನದಲ್ಲಿ ಮೂಡಿಬಂದಂತಹ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಕಲೆಕ್ಷನ್ ಮಾಡಿತ್ತು. ಬಾಹುಬಲಿ2 ಸಿನಿಮಾ ಒಟ್ಟಾರೆಯಾಗಿ 1810 ಕೋಟಿ ಕಲೆಕ್ಷನ್ ಮಾಡಿತ್ತು.

ತಮಿಳುನಾಡಿನಲ್ಲಿ ಬಾಹುಬಲಿ2 ಸಿನಿಮಾ ಬರೋಬ್ಬರಿ 70ಕೊಟಿ ಕಲೆಕ್ಷನ್ ಮಾಡಿತು. ಇದು ಪರಭಾಷಾ ಚಿತ್ರವೊಂದು ತಮಿಳುನಾಡಿನಲ್ಲಿ ಕಲೆಕ್ಷನ್ ಮಾಡಿದ್ದು ಎಲ್ಲರ ನಿಬ್ಬೆರಗಾಗಿ ನೋಡುವಂತೆ ಮಾಡಿತ್ತು. ಇದೀಗ ತಮಿಳುನಾಡಿನಲ್ಲಿ ಬಾಹುಬಲಿ2 ಸಿನಿಮಾ ಮಾಡಿದ ದಾಖಲೆಯನ್ನ ನಮ್ಮ ಕನ್ನಡದ ಕೆಜಿಎಫ್2 ಚಿತ್ರ ಕೇವಲ ಹದಿನೇಳು ದಿನಗಳಲ್ಲಿ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಇನ್ನೂ ಕೂಡ ಕೆಜಿಎಫ್2 ಚಿತ್ರದ ಕೋಟಿಯ ಭೇಟೆ ನಡೆಯುತ್ತಲೇ ಇದೆ. ಕೆಜಿಎಫ್2 ಸಿನಿಮಾದ ಇನ್ನೊಂದು ದಾಖಲೆ ಅಂದ್ರೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡದೆ. ಜೊತೆಗೆ ಅತಿ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದೆ.

ಇದು ವಿಶೇಷ ಅಂತಾನೇ ಹೇಳಬಹುದು. ಈ ವಿಶೇಷತೆಗೆ ಕಾರಣ ಅಂದರೆ ತಮಿಳುನಾಡಿನ ಜನರಲ್ಲಿ ಭಾಷಾಭಿಮಾನ ಹೆಚ್ಚು. ಅವರು ತಮ್ಮ ಭಾಷೆಯ ನಟನ ಸಿನಿಮಾ ಹೊರತು ಪಡಿಸಿ ಬೇರೆ ಇನ್ನಿತರ ಪರಭಾಷಾ ನಟರ ಸಿನಿಮಾಗಳನ್ನ ಹೆಚ್ಚು ನೋಡುವುದಿಲ್ಲ. ಜೊತೆಗೆ ತಮ್ಮ ನಾಡಲ್ಲಿ ಪರಭಾಷಾ ನಟನ ಸಿನಿಮಾಗೆ ಹೆಚ್ಚು ಪ್ರಾಧಾನ್ಯತೆ ಸಹ ನೀಡುವುದಿಲ್ಲ. ಆದ್ರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್2 ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ನೀಡಿದ್ದಾರೆ. ಇದು ನಿಜಕ್ಕೂ ಕೂಡ ಅಚ್ಚರಿಯಾದ ಸಂಗತಿ. ಯಾಕಂದ್ರೆ ತಮ್ಮವರೇ ಆದ ಸೂಪರ್ ಸ್ಟಾರ್ ನಟ ತಲಪತಿ ವಿಜಯ್ ಅವರ ಬೀಸ್ಟ್ ಸಿನಿಮಾ ಕಳೆದ ತಿಂಗಳ ಏಪ್ರಿಲ್ 13ರಂದು ರಿಲೀಸ್ ಆಗಿತ್ತು.

ಆದರೂ ಕೂಡ ಅದಕ್ಕಿಂತ ದುಪ್ಪಟ್ಟು ಕ್ರೇಜ್ ಕೆಜಿಎಫ್2 ಚಿತ್ರದ ಮೇಲೆ ತೋರಿದ್ದಾರೆ. ಹೀಗಾಗಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್2 ಸಿನಿಮಾ ತಮಿಳುನಾಡಿನಲ್ಲಿ ಬರೋಬ್ಬರಿ 100 ಕೊಟಿ ಕಲೆಕ್ಷನ್ ಮಾಡಿ ಬಾಹುಬಲಿ2 ಚಿತ್ರದ ದಾಖಲೆಯನ್ನು ಉಡೀಸ್ ಮಾಡಿದೆ. ಇದೀಗ ಕಾಲಿವುಡ್ 100 ಕ್ರೋಸ್ ಕ್ಲಬ್ ನಲ್ಲಿ ಕನ್ನಡದ ನಟ ಯಶ್ ಸೇರಿಕೊಂಡಿದ್ದಾರೆ. ಇದನ್ನೆಲ್ಲಾ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ಯಶ್ ಅವರು ತಮಿಳುನಾಡಿಲ್ಲಿಯೂ ಕೂಡ ಅಪಾರ ಅಭಿಮಾನಿ ಬಳಗ ಹೊಂದುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಕನ್ನಡದ ನಟ ಯಶ್ ಇಂದು ವರ್ಲ್ಡ್ ವೈಡ್ ಸೂಪರ್ ಸ್ಟಾರ್ ನಟನಾಗಿ ಮಿಂಚುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸರಿ ಎನ್ನಬಹುದು.

%d bloggers like this: