ತಮ್ಮ 40ನೇ ವರ್ಷದ ಹುಟ್ಟು ಹಬ್ಬವನ್ನು 40 ಲಕ್ಷ ಹಣ ದಾನ ನೀಡಿ ಆಚರಿಸಿದ ನಟಿ

ತಮ್ಮ ನಲವತ್ತನೇ ವರ್ಷದ ಜನ್ಮದಿನದ ಪ್ರಯುಕ್ತ ನಲವತ್ತು ಲಕ್ಷ ರೂಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟಿ. ಕಳೆದ ಎರಡು ವರ್ಷಗಳಿಂದ ಕೊರೋನ ವೈರಸ್ ನಿಂದಾಗಿ ದೇಶದಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಕೊರೋನ ವಾರಿಯರ್ಸ್ ಗಳಾಗಿ ದುಡಿದು ರೋಗಿಗಳ ಪ್ರಾಣ ಉಳಿಸಲು ವೈದ್ಯರು, ದಾದಿಯರು, ಪೊಲೀಸರು ಹಗಲು ಇರುಳು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅಂತೆಯೇ ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡ ಪ್ರಾಣಿ ಪಕ್ಷಿಗಳ ಆರೈಕೆ ಮಾಡಿದ್ದಾರೆ. ತಮ್ಮ ಪ್ರಾಣವನ್ನ ಲೆಕ್ಕಿಸದೇ ಅನೇಕ ಸಾವು ನೋವುಗಳು ಸಂಭವಿಸುತ್ತಿದ್ದರು ಕೂಡ ಧೈರ್ಯದಿಂದ ಎಲ್ಲಾ ಕೋವಿಡ್ ವಾರಿಯರ್ಸ್ ಗಳಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಡ ಶ್ರಮವಹಿಸಿದ್ದಾರೆ.

ಇತರೆ ಕೊರೋನಾ ವಾರಿಯರ್ಸ್ಗೆ ಸಿಕ್ಕ ನೆರವು ಸಹಾಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಸಿಗಲಿಲ್ಲ ಎಂಬುದು ಅಷ್ಟೇ ಸತ್ಯ. ಇದೇ ಸಂಗತಿಯನ್ನ ಸೂಕ್ಷ್ಮವಾಗಿ ಗಮನಿಸಿರುವಂತೆ ಬಾಲಿವುಡ್ ಖ್ಯಾತ ನಟಿಯಾದ ದಿಯಾ ಮಿರ್ಜಾ ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೌದು ನಟಿ ದಿಯಾ ಮಿರ್ಜಾ ಅವರು ತಮ್ಮ 40 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಲವತ್ತು ಲಕ್ಷ ರೂ.ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ನೀಡಲು ಮುಂದಾಗಿದ್ದಾರೆ. ನಟಿ ದಿಯಾ ಮಿರ್ಜಾ ಹಿಂದಿ ಚಿತ್ರರಂಗದಲ್ಲಿ ಕೇವಲ ನಟಿ ಮಾತ್ರ ಅಲ್ಲ. ರೂಪದರ್ಶಿ ಮತ್ತು ನಿರ್ಮಾಪಕರಾಗಿಯೂ ಕೂಡ ಗುರತಿಸಿಕೊಂಡಿದ್ದಾರೆ.

ಇದರ ಜೊತೆಗೆ ಸಾಮಾಜಿಕ ಸೇವೆಗಳಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ. ನಟಿ ದಿಯಾ ಮಿರ್ಜಾ ಅವರಿಗೆ 2000 ನೇ ಇಸವಿಯಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಇಂಟರ್ ನ್ಯಾಶನಲ್ ಅವಾರ್ಡ್ ಲಭಿಸಿದೆ. ದಿಯಾ ಮಿರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನನ್ನ ಹುಟ್ಟು ಹಬ್ಬಕ್ಕೆ ಹೂವು ಮತ್ತು ಉಡುಗೊರೆ ನೀಡುವ ಬದಲು ಕೋವಿಡ್ ವಾರಿಯರ್ಸ್ ಗಳಾಗಿ ದುಡಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ನೆರವು ನೀಡೊಣ ಕೈ ಜೋಡಿಸಿ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ ತಿಂಗಳ ಒಂಭತ್ತನೇ ತಾರಿಖು ನಟಿ ದಿಯಾ ಮಿರ್ಜಾ ಅವರಿಗೆ ನಲವತ್ತು ವರ್ಷದ ಸಂಭ್ರಮ. ದಿನವೊಂದಕ್ಕೆ ಒಂದು ಲಕ್ಷದಂತೆ ನಲವತ್ತು ದಿನಗಳವರೆಗೆ ನಲವತ್ತು ಲಕ್ಷ ರೂ.ಗಳನ್ನು ಸಂಗ್ರಹ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ನೀಡವುದಾಗಿ ತಿಳಿಸಿದ್ದಾರೆ. ಇನ್ನು ನಟಿ ದಿಯಾ ಮಿರ್ಜಾ ಅವರ ಆಲೋಚನೆಗೆ ಅವರ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಅನೇಕ ಸ್ಟಾರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ದಿಯಾ ಮಿರ್ಜಾ ಅವರ ಈ ಕೆಲಸ ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯವಾದುದು.

%d bloggers like this: