ತಮ್ಮ ಆಸೆಯಂತೆ ಪುನೀತ್ ಅವರ ಜೊತೆ ನಟಿಸಲು ಆಗಲಿಲ್ಲ, ಆದರೆ ಪುನೀತ್ ಅವರ ಸಂಸ್ಥೆಯ ಚಿತ್ರದಲ್ಲಿ ಅವಕಾಶ ಪಡೆದುಕೊಂಡ ಕನ್ನಡ ನಟಿ

ಸ್ಯಾಂಡಲ್ ವುಡ್ ಪವರ್ ಸ್ಟಾರ್ ದಿ.ನಟ ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಿನಿಮಾದಲ್ಲಿ ಚುಟುಚುಟು ಬೆಡಗಿ ಅವಕಾಶ ಗಿಟ್ಟಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಕೇವಲ ನಟನೆ ಮಾತ್ರ ಅಲ್ಲದೆ ಗಾಯನ, ಸಿನಿಮಾ ಪ್ರೊಡಕ್ಷನ್ ಕೆಲಸವನ್ನು ಕೂಡ ಕರಗತ ಮಾಡಿಕೊಂಡಿದ್ದರು. ಹಾಗಾಗಿಯೇ ಅವರು ತಮ್ಮದೆಯಾದ ಆದಂತಹ ಪಿ.ಆರ್.ಕೆ. ಆಡಿಯೋ ಸಂಸ್ಥೆ ಮತ್ತು ಪಿ.ಆರ್.ಕೆ. ನಿರ್ಮಾಣ ಸಂಸ್ಥೆಯನ್ನು ಕೂಡ ಸ್ಥಾಪನೆ ಮಾಡಿದರು. ಈ ತಮ್ಮ ಪಿ.ಆರ್.ಕೆ. ಸಂಸ್ಥೆಯ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಒಂದಷ್ಟು ಚಿತ್ರಗಳನ್ನು ಕೂಡ ನಿರ್ಮಾಣ ಮಾಡಿದರು.

ಜೊತೆಗೆ ವೆಬ್ ಸೀರೀಸ್ ಅನ್ನು ಕೂಡ ನಿರ್ಮಿಸಿದರು. ಪಿ.ಆರ್. ಕೆ ನಿರ್ಮಾಣ ಸಂಸ್ಥೆಯಿಂದ ಪನ್ನಾಗಭರಣ ಅವರ ನಿರ್ದೇಶನದಲ್ಲಿ ಫ್ರೆಂಚ್ ಬಿರಿಯಾನಿ, ಕವಲುದಾರಿ, ಮಾಯಾ ಬಜಾ಼ರ್ ಇತ್ತೀಚೆಗೆ ಗಂಧದ ಗುಡಿ ಎಂಬ ಟ್ರಾವೆಲ್ ಸಿನಿಮಾವನ್ನು ಕೂಡ ನಿರ್ಮಿಸಿದ್ದಾರೆ. ಇದರ ಜೊತೆಗೆ ಮೆಡಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ O 2 ಎಂಬ ಚಿತ್ರವನ್ನು ಪಿ.ಆರ್.ಕೆ ಸಂಸ್ದೆ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಚುಟು ಚುಟು ಹಾಡಿನ ಮೂಲಕ ಸಖತ್ ಫೇಮಸ್ ಆದಂತಹ ನಟಿ ಅಶಿಕಾ ರಂಗನಾಥ್ ಆಯ್ಕೆ ಆಗಿದ್ದಾರೆ. ನಟಿ ಆಶಿಕಾ ರಂಗನಾಥ್ ಅವರು ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ದ್ವಿತ್ವ ಎಂಬ ಚಿತ್ರದಲ್ಲಿ ನಟಿಸಬೇಕಿತ್ತು.

ಈ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳಬೇಕಾಗಿತ್ತು. ಇದೀಗ ಪುನೀತ್ ಅವರ ನಿಧನದಿಂದಾಗಿ ಈ ಚಿತ್ರ ಸ್ಥಗಿತಗೊಂಡಿತು‌. ಇದರಿಂದ ನಟಿ ಆಶಿಕಾ ರಂಗನಾಥ್ ಅವರಿಗೆ ಅಪ್ಪು ಅವರ ಜೊತೆ ನಟಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇತ್ತಂತೆ‌. ಇದೀಗ ಪುನೀತ್ ಅವರ ಹೋ ಬ್ಯಾನರ್ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣ ಆಗುತ್ತಿರುವ ಅಪ್ಪು ಅವರ ಕನಸಿನ ಚಿತ್ರ O 2 ಚಿತ್ರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಆಶಿಕಾ ರಂಗನಾಥ್ ಅವರು ಖುಷಿ ಆಗಿದ್ದಾರಂತೆ. ಇನ್ನು ಈ ಬಗ್ಗೆ ಮಾತನಾಡಿರುವ ಆಶಿಕಾ ಆರಂಭದಲ್ಲಿ ನನಗೆ ನಾನು ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆ ಆಯ್ಕೆ ಇರಲಿಲ್ಲ. ನನಗೆ ಯಾವ ಸಿನಿಮಾ ತಂಡ ತೆರೆ ಮೇಲೆ ಸುಂದರವಾಗಿ ನನ್ನನ್ನು ತೋರಿಸುತ್ತಾರೆ ಅವರೊಟ್ಟಿಗೆ ಕೆಲಸ ಮಾಡಲು ನಾನು ಒಪ್ಪಿಗೆ ನೀಡುತ್ತಿದ್ದೆ‌.

ಆದರೆ ಇದೀಗ ಪ್ರೇಕ್ಷಕರು ನಮ್ಮನ್ನು ಯಾವ ರೀತಿ ನೋಡಲು ಬಯಸುತ್ತಾರೋ ಅದಕ್ಕೆ ತಕ್ಕಂತೆ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತೇನೆ. ಇದೀಗ ಪುನೀತ್ ಸರ್ ಅವರ ಕನಸಿನ ಚಿತ್ರವಾಗಿರುವ O2 ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಖುಷಿಯಿದೆ ಎಂದು ತಮ್ಮ ಮನದಾಳದ ಮಾತುಗಳನ್ನ ಹಂಚಕೊಂಡಿದ್ದಾರೆ. ಇನ್ನು ನಟಿ ಆಶಿಕಾ ರಂಗನಾಥ್ ಅವರ ನಟನೆಯ ಮದಗಜ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಕೂಡ ನಟಿ ಆಶಿಕಾ ರಂಗನಾಥ್ ಅವರಿಗೆ ಅವಕಾಶಗಳು ಹರಸಿ ಬರುತ್ತಿದೆ. ಸದ್ಯಕ್ಕೆ ಇವರ ನಟನೆಯ ರೆಮೋ ಮತ್ತು ಅವತಾರ್ ಪುರುಷ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿದೆ. ಈ ಎರಡೂ ಚಿತ್ರದ ಟ್ರೇಲರ್ ಗಳು ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿವೆ.

%d bloggers like this: