ತಮ್ಮ ಬಹುಕಾಲದ ಗೆಳತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಹಾಸ್ಯ ನಟ

ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಹಾಸ್ಯ ಮನರಂಜನಾ ಕಾರ್ಯಕ್ರಮದ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ ನಟ ಹೀತೇಶ ಅವರು ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಹೌದು ಇತ್ತೀಚೆಗೆ ತಾನೇ ಅದೇ ಕಾಮಿಡಿ ಕಿಲಾಡಿ ಶೋ ನ ಮತ್ತೊಬ್ಬ ಜನಪ್ರಿಯ ಹಾಸ್ಯ ನಟರಾದ ಸಂಜು ಬಸಯ್ಯ ಕೂಡ ತಾವು ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಮುಕ್ತವಾಗಿ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು‌. ಕಳೆದ ಕೆಲವು ತಿಂಗಳಿಂದ ಕನ್ನಡ ಕಿರುತೆರೆ ಅನೇಕ ಯುವ ಕಲಾವಿದರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮುಖಾಂತರ ಭಾರಿ ಸುದ್ದಿ ಆಗುತ್ತಿದ್ದಾರೆ.

ಅನೇಕ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿ ನಟಿಯರು ಮಾತ್ರ ದಿಢೀರ್ ಆಗಿ ಮದುವೆಯ ಸುದ್ದಿ ತಿಳಿಸಿ ಅವರ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡುತ್ತಿದ್ದಾರೆ. ಅದರಂತೆ ಇದೀಗ ಜಗ್ಗೇಶ್, ಯೋಗರಾಜ್ ಭಟ್, ನಟಿ ರಕ್ಷಿತಾ ಅವರು ತೀರ್ಪುಗಾರರಾಗಿ ನಡೆಸುಕೊಡುತ್ತಿರುವ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಮೀನು ಮಾರುವ ವ್ಯಕ್ತಿಗಳು ಬಳಕೆ ಮಾಡುವ ಪ್ಯಾಕು ಪ್ಯಾಕು ಎಂಬ ಡೈಲಾಗ್ ಬಳಸಿ ಗಮನ ಸೆಳೆದು ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಕನ್ನಡ ಪ್ರೇಕ್ಷಕರು ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಲಿಸಿದ ಹಾಸ್ಯ ಕಲಾವಿದ ಹಿತೇಶ ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೌದು ನಟ ಹಿತೇಶ ಅವರು ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರನ್ನು ಪ್ರೀತಿಸುತ್ತಿದ್ದರು. ಪರಿಚಯ, ಸ್ನೇಹವಾಗಿ ಪ್ರೀತಿಯ ಬಲೆಗೆ ಬಿದ್ದ ಇವರಿಬ್ಬರು ಅಕ್ಕಪಕ್ಕದ ಊರಿನವರಾಗಿದ್ದು, ಪರಸ್ಪರ ಎರಡೂ ಕುಟುಂಬಗಳು ಪರಿಚಯವಿದ್ದ ಕಾರಣ ಯಾವುದೇ ರೀತಿಯ ಗೊಂದಲ ಸಮಸ್ಯೆಗಳಿಲ್ಲ ಹಿತೇಶ ಮತ್ತು ಸ್ವಾತಿ ಇವರಿಬ್ಬರ ಪ್ರೀತಿಗೆ ಕುಟುಂಬದಲ್ಲಿ ಒಪ್ಪಿಗೆ ದೊರೆತು ಇದೇ ಡಿಸೆಂಬರ್ 19 ರಂದು ನಿಶ್ಚಿತಾರ್ಥ ನೆರೆವೇರಿಸಿಕೊಂಡಿದ್ದಾರೆ. ಇನ್ನು ಮುಂದಿನ ವರ್ಷ 2022 ರ ಅಂತ್ಯದ ವೇಳೆಗೆ ನಾವಿಬ್ಬರು ಮದುವೆ ಆಗುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ನಟ ಹಿತೇಶ ಅವರು ಮಾಹಿತಿ ನೀಡಿದ್ದಾರೆ. ಇನ್ನು ನಟ ಹಿತೇಶ ಅವರು ಎಂಗೇಜ್ ಮೆಂಟ್ ಮಾಡಿಕೊಂಡಿರುವ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

%d bloggers like this: