ತಮ್ಮ ಚಿತ್ರ 13 ಸಾವಿರ ಕೋಟಿ ಗಳಿಕೆ ಕಾಣುತ್ತಿದ್ದಂತೆ ಮೂವತ್ತು ಕೋಟಿ ಬೆಲೆಯ ಮನೆ ಖರೀದಿಸಿದ ನಟ ನಟಿ

ಇತ್ತೀಚೆಗೆ ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರು ಇಂಪೋರ್ಟೆಡ್ ಕಾರು, ಐಷಾರಾಮಿ ಮನೆ ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದರು. ಇದೀಗ ನಾವು ಕೂಡ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹಾಲಿವುಡ್ ಸ್ಟಾರ್ ಜೋಡಿಗಳಾದ ನಟ ಟಾಮ್ ಹಾಲೆಂಡ್ ಮತ್ತು ನಟಿ ಜೆಂಡೆಯಾ ಅವರು ಜೊತೆಯಾಗಿ ಬರೋಬ್ಬರಿ ಮೂವತ್ತು ಕೋಟಿ ಮೌಲ್ಯದ ಐಷಾರಾಮಿ ಮನೆಯೊಂದನ್ನ ಖರೀದಿ ಮಾಡಿದ್ದಾರೆ. ಹೌದು ಕಳೆದ ವರ್ಷ ತಾನೇ ವರ್ಲ್ಡ್ ವೈಡ್ ರಿಲೀಸ್ ಆಗಿ ಬಾಕ್ಸ್ ಆಫೀಸ್ ಧೂಳ್ ಮಾಡಿದ ಹಾಲಿವುಡ್ ಸೂಪರ್ ಡೂಪರ್ ಹಿಟ್ ಸಿನಿಮಾ ಸ್ಪೈಡರ್ ಮ್ಯಾನ್ ನೋವೇ ಹೋಮ್.

ಚಿತ್ರದಲ್ಲಿ ಜೊತೆಯಾಗಿ ನಟಿಸಿದ ನಟ ಟಾಮ್ ಹಾಲೆಂಡ್ ಮತ್ತು ನಟಿ ಜೆಂಡಿಯಾ ಇಬ್ಬರು ಕೂಡ ಪ್ರಣಯ ಪಕ್ಷಿಗಳಾಗಿ ಇದೀಗ ಹಾಲಿವುಡ್ ನಲ್ಲಿ ಭಾರಿ ಸುದ್ದಿ ಆಗುತ್ತಿದ್ದಾರೆ. ಟಾಮ್ ಹಾಲೆಂಡ್ ಮತ್ತು ಜೆಂಡಿಯಾ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇರಲಿಲ್ಲ. ನಟ ಟಾಮ್ ಹಾಲೆಂಡ್ ಮತ್ತು ನಟಿ ಜೆಂಡೆಯಾ ಇವರಿಬ್ಬರು ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದದ್ದೇ ವಿಚಿತ್ರವಂತೆ. ಇವರಿಬ್ಬರು ಜೊತೆಯಾಗಿ ಹೋಮ್ ಕಮಿಂಗ್ ಮತ್ತು ಸ್ಪೈಡರ್ ಮ್ಯಾನ್ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ.

ಆದರೆ ಇವರಿಬ್ಬರಿಗೂ ಪ್ರೀತಿ ಚಿಗುರೊಡೆದದ್ದು ಸ್ಪೈಡರ್ ಮ್ಯಾನ್ ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯಂತೆ. ಇದಾದ ಬಳಿಕ ಕೆಲವು ನೈಟ್ ಪಾರ್ಟಿಗಳಲ್ಲಿ ಇಬ್ಬರು ಕೂಡ ಕೈಕೈ ಹಿಡಿದುಕೊಂಡು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೆ ಇದೀಗ ನಟ ಟಾಮ್ ಹಾಲೆಂಡ್ ಮತ್ತು ನಟಿ ಜೆಂಡೆಯಾ ಇಬ್ಬರು ಕೂಡ ಪಾಲುದಾರಿಕೆಯಲ್ಲಿ ಮನೆಯೊಂದನ್ನ ಖರೀದಿ ಮಾಡಿದ್ದಾರೆ. ಹೌದು ಇಂಗ್ಲೆಂಡ್ನ ಪ್ರತಿಷ್ಟಿತ ನಗರದಲ್ಲಿ ಬರೋಬ್ಬರಿ ಮೂವತ್ತು ಕೋಟಿ ಮೌಲ್ಯದ ಮನೆಯೊಂದನ್ನ ಖರೀದಿಸಿದ್ದಾರೆ. ಈ ಐಷಾರಾಮಿ ಮನೆಯಲ್ಲಿ ಐಷಾರಾಮಿ ಜಿಮ್ ಪರಿಕರಗಳು, ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್, ಸಿನಿಮಾ ಹಾಲ್ ಸೇರಿದಂತೆ ಒಳ ವಿನ್ಯಾಸ ಅತ್ಯಾಕರ್ಷಕವಾಗಿದೆಯಂತೆ.

%d bloggers like this: