ತಮ್ಮ ಚಿತ್ರ ಗೆದ್ದ ಖುಷಿಗೆ ಎರಡು ಹೊಸ ಎಲೆಕ್ಟ್ರಿಕ್ ಕಾರು ಮತ್ತು ಬೈಕ್ ಖರೀದಿಸಿದ ಪ್ರಖ್ಯಾತ ನಿರ್ದೇಶಕ

ಇತ್ತೀಚೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಇಂಧನ ಸಹಿತ ವಾಹನಗಳಷ್ಟೇ ಎಲೆಕ್ಟ್ರಿಕ್ ಕಾರುಗಳು ಕೂಡ ಭಾರಿ ಸುದ್ದಿ ಮಾಡುತ್ತಿವೆ‌. ಪ್ರತಿಷ್ಟಿತ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಝ಼್ ಕಂಪನಿಯು ಕೂಡ ಎಲೆಕ್ಟ್ರಿಕ್ ಮಾದರಿಯ ಕಾರುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ತಾನೇ ಬೆಂಝ಼್ ಸಂಸ್ಥೆಯು ಕೂಡ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಇಂಧನದ ಬೆಲೆ ಏರಿಕೆ ಆಗುತ್ತಿರುವ ಕಾರಣ ಬಹುತೇಕ ವಾಹನ ಪ್ರಿಯರು ಇಂಧನ ಸಹಿತ ವಾಹನಗಳಿಗಿಂತ ಹೆಚ್ಚಾಗಿ ವಿದ್ಯುಚ್ಚಾಲಿತ ವಾಹನಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಅದರಲ್ಲಿಯೂ ಕೂಡ ಇತ್ತೀಚೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ‌.

ಇನ್ನು ಅದರಂತೆ ಮಲೆಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ಜೀತು ಜೋಸೆಫ್ ಅವರು ಇತ್ತೀಚೆಗೆ ಎಂಜಿ ಜೆ಼ಡ್ಎಸ್ ಎಲೆಕ್ಟ್ರಿಕ್ ಕಾರೊಂದನ್ನ ಖರೀದಿ ಮಾಡಿದ್ದಾರೆ‌. ಅದರ ಜೊತೆಗೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಖರೀದಿ ಮಾಡಿದ್ದಾರೆ. ನಿರ್ದೇಶಕ ಜೀತು ಜೋಸೆಫ್ ಅವರು ದೃಶ್ಯಂ ಸಿನಿಮಾದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ಮಲೆಯಾಳಂನ ಈ ದೃಶ್ಯಂ ಸಿನಿಮಾ ಕನ್ನಡ ಭಾಷೆ ಸೇರಿಂತೆ ತೆಲುಗು, ತಮಿಳು ಹಿಂದಿ ಭಾಷೆಗೂ ಕೂಡ ರಿಮೇಕ್ ಆಗಿದೆ. ಮಲೆಯಾಳಂ ದೃಶ್ಯಂ ನಲ್ಲಿ ಮೋಹನ್ ಲಾಲ್ ನಟಿಸಿದ್ದರು. ಕನ್ನಡದಲ್ಲಿ ಈ ದೃಶ್ಯಂ ಸಿನಿಮಾ ದೃಶ್ಯ ಎಂಬ ಶೀರ್ಷಿಕೆಯ ಮೂಲಕ ಚಿತ್ರ ರಿಮೇಕ್ ಆಗಿದ್ದು, ವಿ.ರವಿ ಚಂದ್ರನ್ ಅವರಿಗೂ ಕೂಡ ಕನ್ನಡದಲ್ಲಿ ಬ್ರೇಕ್ ನೀಡಿತು.

ಈಗಾಗಲೇ ಈ ದೃಶ್ಯಂ ಸಿನಿಮಾ ಎರಡು ಭಾಗವಾಗಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ದೃಶ್ಯಂ ಪಾರ್ಟ್3 ಕೂಡ ರೆಡಿಯಾಗಲಿದೆ ಎಂಬ ಸುದ್ದಿ ಕೂಡ ಕೇಳಿ ಬಂದಿದೆ. ಇನ್ನು ದೃಶ್ಯಂ2 ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ನಿರ್ದೇಶಕ ಜೀತು ಜೋಸೆಫ್ ಅವರು ಇದೀಗ ಎಲೆಕ್ಟ್ರಿಕ್ ಕಾರ್ ಮತ್ತು ಸ್ಕೂಟರ್ ಖರೀದಿ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ‌. ಇನ್ನು ಜೀತು ಜೋಸೆಫ್ ಅವರು ಖರೀದಿ ಮಾಡಿರುವ ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿಯುವುದಾದರೆ ಈ ದ್ವಿಚಕ್ರ ವಾಹನ 4.4 ಕಿಲೋ ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಇದರಲ್ಲಿ ಥ್ರೀ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಗಳೊಂದಿಗೆ ಜೋಡಣೆ ಮಾಡಲಾಗಿದೆ. ಇನ್ನು ಈ ಕ್ಯೂಬ್ ಸ್ಕೂಟರ್ ನಲ್ಲಿ ವಿಎಸ್ ಸ್ಮಾರ್ಟ್ ಕನೆಕ್ಟ್ ಪ್ಲಾಟ್ ಫಾರ್ಮ್, ಸುಧಾರಿತ ಟಿಎಫ್ಟಿ ಕ್ಲಸ್ಟರ್ ಮತ್ತು ಟಿವಿಎಸ್ ಐಕ್ಯೂಬ್ ಅನ್ನು ಒಳಗೊಂಡಿದೆ.

ಇದರಲ್ಲಿ ಟಿಎಫ್ಟಿ ಇಅಪ್ಲಿಕೇಶನ್ ಜಿಯೋ ಫೆನ್ಸಿಂಗ್ ಇದೆ. ಜೊತೆಗೆ ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಶನ್ ಅಸಿಸ್ಟ್, ಲಾಸ್ಟ್ ಪಾರ್ಕ್ ಲೊಕೇಶನ್ ಕಾಲ್ ಮತ್ತು ಎಸ್.ಎಂ‌.ಎಸ್ ಮೂಲಕ ಅಲರ್ಟ್ ಫ್ಯೂಚರ್ ಗಳನ್ನ ಒಳಗೊಂಡಿದೆ. ಎಲ್ ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿರುವ ಎಥರ್ 450 ಎಕ್ಸ್, ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್ ಗಳಿಗೆ ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಪ್ರಬಲ ಸ್ಪರ್ಧೆ ನೀಡುತ್ತಿದೆ. ಉತ್ತಮ ಮೈಲೆಜ್ ನೀಡುವ ಸ್ಕೂಟರ್ ಎಂಬ ಹೆಸರುವಾಸಿಯಾಗಿರುವ ಈ ಟಿವಿಎಸ್ ಕಂಪನಿಯ ಸ್ಕೂಟರ್ ಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಟಿವಿಎಸ್ ಕಂಪನಿ ಐಕ್ಯೂಬ್ ಎಲೆಕ್ಕ್ರಿಕ್ ಸ್ಕೂಟರ್ ಅನ್ನ ಪರಿಚಯಿಸಿದ್ದು ಈ ನೂತನ ಸ್ಕೂಟರ್ ಕೂಡ ಉತ್ತಮ ಬೇಡಿಕೆಯನ್ನ ಸೃಷ್ಟಿಸಿಕೊಳ್ಳುತ್ತಿದೆ.

ಇನ್ನು ನಿರ್ದೇಶಕ ಜೀತು ಜೋಸೆಫ್ ಅವರು ಖರೀದಿ ಮಾಡಿದ ಈ ಎಂಜಿ ಜೆ಼ಡ್ ಎಸ್ ಎಲೆಕ್ಟ್ರಿಕ್ ಕಾರ್ ಬಗ್ಗೆ ತಿಳಿಯುವುದಾದರೆ 4,314 ಎಂಎಂ‌ ಉದ್ದ ಇದ್ದು, 1809 ಅಗಲ ಮತ್ತು 1644 ಎತ್ತರವನ್ನು ಈ ಎಲೆಕ್ಟ್ರಿಕ್ ಕಾರ್ ಹೊಂದಿದೆ. ಇದರಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಕೂಡ ಅಳವಡಿಸಲಾಗಿದೆ. ಇನ್ನು ಎಂಜಿ ಜೆ಼ಡ್ ಎಸ್ ಎಲೆಕ್ಟ್ರಿಕ್ ಕಾರ್ 142.7 ಬಿಎಚ್ಪಿ ಮತ್ತು ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಇದರಲ್ಲಿ ಆರು ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟಿಬಿಲಿಟಿ ಕಂಟ್ರೋಲ್, ಇಬಿಡಿ ಜೊತೆ ಎಫಿಎಸ್ ಹಿಲ್ ಸ್ಟಾರ್ಟ್ ಅಸಿಸ್ಟ್, ಡಿಯರ್ ಡಿಸ್ಕ್ ಬ್ರೇಕ್ ಹೊಂದಿದ್ದು, ಇದನ್ನ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಐನೂರು ಕಿಮೀವರೆಗೆ ಕ್ರಮಿಸಬಹುದಾಗಿದೆ. ಇನು ಈ ಎಂಜಿ ಜೆ಼ಡ್ ಎಸ್ ಕಾರು 419 ಕಿಮೀ ರೇಂಜ್ ಅನ್ನು ನೀಡುತ್ತಿದೆ.

%d bloggers like this: